ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ಎಲ್ಪಾಸೋದಲ್ಲಿ ಗುಂಡಿನ ದಾಳಿ, 21ಕ್ಕೂ ಅಧಿಕ ಮಂದಿ ಸಾವು

|
Google Oneindia Kannada News

ಟೆಕ್ಸಾಸ್, ಆಗಸ್ಟ್ 04: ಟೆಕ್ಸಾಸ್ ಪ್ರಾಂತ್ಯದ ಎಲ್ ಪಾಸೋ ಶಾಪಿಂಗ್ ಕಾಂಪ್ಲೆಕ್ಸ್ ವೊಂದರ ಮೇಲೆ ಅಪರಿಚಿತ ದುಷ್ಕರ್ಮಿ ಗುಂಡಿನ ದಾಳಿ ನಡೆಸಿದ್ದಾನೆ. ಈ ದುರ್ಘಟನೆಯಲ್ಲಿ ಕನಿಷ್ಠ 20 ಮಂದಿ ಮೃತಪಟ್ಟಿದ್ದು, ಹಲವಾರು ಮಂದಿಗೆ ಗಾಯಗಳಾಗಿವೆ.

ಸಿಯಾಲೋ ವಿಸ್ತಾ ಮಾಲ್ ಪ್ರದೇಶದಲ್ಲಿ ಗುಂಡಿನ ದಾಳಿ ಕೇಳಿ ಬಂದ ಕೂಡಲೇ ಶಾಪಿಂಗ್ ನಿರತ ಸಾರ್ವಜನಿಕರು ಆತಂಕಕ್ಕೊಳಗಾಗಿ ಎಲ್ಲೆಡೆ ಓಡಿದ್ದಾರೆ. ಮೆಕ್ಸಿಕೋ, ಟೆಕ್ಸಾಸ್ ಪಶ್ಚಿಮ ಭಾಗದ ಗಡಿಭಾಗದಲ್ಲಿದೆ ಎಲ್ ಪಾಸೋ ಇದ್ದು, ಸುಮಾರು 6,80,000 ಮಂದಿ ವಾಸಿಸುತ್ತಿದ್ದಾರೆ. ಈ ಗುಂಡಿನ ದಾಳಿಗೆ ದ್ವೇಷ ಕಾರಣ ಇರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

Texas El Paso shopping complex shooting : Many killed

ದುಷ್ಕರ್ಮಿ ವಶಕ್ಕೆ: "ಸಿಯಾಲೋ ವಿಸ್ತಾ ಮಾಲ್ ಮೇಲೆ ಗುಂಡಿನ ದಾಳಿ ನಡೆಸಿದ ವ್ಯಕ್ತಿಯನ್ನು ಬಂಧಿಸಲಾಗಿದೆ" ಎಲ್ ಪಾಸೋ ಮೇಯರ್ ಡೀ ಮಾರ್ಗೋದ ಮುಖ್ಯಸ್ಥೆ ಒಲಿವಿಯಾ ಜೆಪೆಡಾ ಹೇಳಿದ್ದಾರೆ.

"ಬಂಧಿತನನ್ನು ಡಲ್ಲಾಸ್ ಮೂಲದ ಪ್ಯಾಟ್ರಿಕ್ ಕ್ರೂಸಿಯಸ್(21) ಎಂದು ಗುರುತಿಸಲಾಗಿದೆ. ಸಿಯಾಲೋ ವಿಸ್ತಾ ಮಾಲ್ ನಲ್ಲಿದ್ದ ವಾಲ್ಮಾರ್ಟ್ ಮಳಿಗೆ ಬಳಿ ಹೆಚ್ಚಿನ ಹಾನಿ ಸಂಭವಿಸಿದ್ದು, ಗಾಯಗೊಂಡಿರುವ 26 ಮಂದಿ ಪೈಕಿ ಅನೇಕರ ಸ್ಥಿತಿ ಗಂಭೀರವಾಗಿದೆ" ಎಂದು ಎಪಿ ವರದಿ ಮಾಡಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ :

English summary
Texas Gov. Greg Abbott: 20 people killed, more than two dozen others injured in El Paso shopping complex shooting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X