ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ವಿಟ್ಟರ್ ಗೆ ಗುಡ್ ಬೈ ಹೇಳಲಿರುವ ಎಲಾನ್ ಮಸ್ಕ್

|
Google Oneindia Kannada News

ಸ್ಯಾನ್ ಫ್ರಾನ್ಸಿಸ್ಕೋ, ನವೆಂಬರ್ 02: ಖ್ಯಾತ ಉದ್ಯಮಿ, ಟೆಸ್ಲಾ ಸಂಸ್ಥಾಪಕ ಎಲಾನ್ ಮಸ್ಕ್ ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್ ನಿಂದ ದೂರಹೋಗುವ ಸೂಚನೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ 29 ದಶಲಕ್ಷಕ್ಕೂ ಹೆಚ್ಚು ಫಾಲೋವರ್ ಗಳನ್ನು ಹೊಂದಿರುವ ಎಲಾನ್ ಮಸ್ಕ್, ರ್ಯಾಪಿಡ್ ಫೈರ್ ಟ್ವೀಟ್ ನಲ್ಲಿ
"Going offline" ಎಂದು ಟ್ವೀಟಿಸುವ ಮೂಲಕ ಅಭಿಮಾನಿಗಳಲ್ಲಿ ಭಾರೀ ಆತಂಕ ಸೃಷ್ಟಿಸಿದ್ದಾರೆ.

ಥಾಯ್ಲೆಂಡ್‌ನ ಮಾಯಾವಿ ಗುಹೆಯ ರೋಚಕ ಕಥೆಗಳನ್ನು ಕೇಳಿದ್ದೀರಾ?ಥಾಯ್ಲೆಂಡ್‌ನ ಮಾಯಾವಿ ಗುಹೆಯ ರೋಚಕ ಕಥೆಗಳನ್ನು ಕೇಳಿದ್ದೀರಾ?

ಟ್ವಿಟ್ಟರ್ ವೇದಿಕೆಯ ಮೂಲಕ ಹೂಡಿಕೆದಾರರ ಹಾದಿತಪ್ಪಿಸುತ್ತಿದ್ದಾರೆ ಎಂದು ಅಮೆರಿಕ ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಜ್ ಕಮಿಶನ್ ಆರೋಪಿಸಿದ್ದು, ಅವರ ವಿರುದ್ಧ ಇದ್ದ ಮಾನನಷ್ಟ ಮೊಕದ್ದಮೆ ಅವರಿಗೆ ಭಾರೀ ತಲೆನೋವಾಗಿದೆ.

Tesla Chief Elon Musk Planning To Quit Twitter

2018 ರ ಜುಲೈ ಯಲ್ಲಿ ಥಾಯ್ಲೆಂಡ್ ನ ಗುಹೆಯೊಂದರಲ್ಲಿ ಸಿಲುಕಿದ್ದ 12 ಬಾಲಕರನ್ನು ರಕ್ಷಿಸಿದ್ದ ವ್ಯಕ್ತಿಯನ್ನು 'ಪೆಡೋ ಗೈ' ಎಂದು ಸಾಮಾಜಿಕ ತಾಲತಾಣ ಟ್ವಿಟ್ಟರ್ ನಲ್ಲಿ ಸಾರ್ವಜನಿಕವಾಗಿಯೇ ಟೀಕಿಸಿದ್ದರು. ಅಂದರೆ ಬಾಲಿಶ ಹುಡುಗ ಎಂಬರ್ಥದಲ್ಲಿ ಅವರು ಮಾತನಾಡಿದ್ದರು.

ಅವರ ಈ ಹೇಳಿಕೆಯಿಂದಾಗಿ ಮಸ್ಕ್ ಮಾನನಷ್ಟ ಮೊಕದ್ದಮೆ ಎದುರಿಸುವಂತಾಯಿತು. ಇದೀಗ ಅವರು ಟ್ವಿಟ್ಟರ್ ಗೂ ಗುಡ್ ಬೈ ಹೇಳಲಿದ್ದಾರೆ ಎಂಬ ಸೂಚನೆ ಸಿಕ್ಕಿದೆ. ಟೆಸ್ಲಾ, ಸ್ಪೇಸ್ ಎಕ್ಸ್ ಮೂಲಕ ಸಾಧನೆಯ ಉತ್ತುಂಗದಲ್ಲಿರುವ ಮಸ್ಕ್ ಇದೀಗ ಸಾರ್ವಜನಿಕ ಸಂಪರ್ಕ ವೇದಿಕೆಯಿಂದ ದೂರಾಗುತ್ತಿರುವುದು ಅವರ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿಸಿದೆ.

English summary
Tesla Chief Elon Musk Planning To Quit Twitter,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X