ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾ-ಅಮೆರಿಕ ಕಚ್ಚಾಟದಲ್ಲಿ ಅಧಿಕಾರಿಗಳು ಅಪ್ಪಚ್ಚಿ..!

|
Google Oneindia Kannada News

ಸುಮಾರು 3 ವರ್ಷಗಳಿಂದ ಅಮೆರಿಕದ ರಾಯಭಾರಿಯಾಗಿ ಚೀನಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಟೆರಿ ಬ್ರಾನ್‌ಸ್ಟಾಡ್ ತಮ್ಮ ಹುದ್ದೆಯಿಂದ ಕೆಳಗಿಳಿಯಲು ತೀರ್ಮಾನಿಸಿದ್ದಾರೆ. ಒಂದುಕಡೆ ಅಮೆರಿಕ ಹಾಗೂ ಚೀನಾ ನಡುವೆ ರಾಜತಾಂತ್ರಿಕ ತಿಕ್ಕಾಟ ಮುಂದುವರಿದಿರುವ ಸಂದರ್ಭದಲ್ಲೇ ಅಧಿಕಾರಿಗಳು ಹೈರಾಣಾಗಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಅಮೆರಿಕದ ವಿರುದ್ಧ ರಾಜತಾಂತ್ರಿಕ ಯುದ್ಧ ಸಾರಿದ್ದ ಚೀನಾ, ಅಮೆರಿಕದ ರಾಯಭಾರ ಕಚೇರಿ ಸಿಬ್ಬಂದಿಗೆ ಹಲವು ಶರತ್ತುಗಳನ್ನು ವಿಧಿಸಿತ್ತು. ಇದರ ಬೆನ್ನಲ್ಲೇ ಅಮೆರಿಕದ ರಾಯಭಾರಿ ಚೀನಾದಿಂದ ಹೊರಬರಲು ತೀರ್ಮಾನಿಸಿದ್ದಾರೆ. ಹಲವು ವಿಚಾರದಲ್ಲಿ ಅಮೆರಿಕ ಹಾಗೂ ಚೀನಾ ಹಾವು-ಮುಂಗಸಿಯಂತೆ ಕಿತ್ತಾಡುತ್ತಿವೆ.

ಚೀನಾ v/s ಅಮೆರಿಕ ರಾಜತಾಂತ್ರಿಕ ''ನಿರ್ಬಂಧ'' ಯುದ್ಧ..!ಚೀನಾ v/s ಅಮೆರಿಕ ರಾಜತಾಂತ್ರಿಕ ''ನಿರ್ಬಂಧ'' ಯುದ್ಧ..!

ಇದರ ಬೆನ್ನಲ್ಲೇ ಅಮೆರಿಕ ಚೀನಾ ರಾಯಭಾರ ಕಚೇರಿ ಸಿಬ್ಬಂದಿ ಮೇಲೆ ವಿಧಿಸಿರುವ ಕಠಿಣ ಷರುತ್ತುಗಳಿಗೆ ಪ್ರತಿಯಾಗಿ ಚೀನಾ ಕೂಡ ಅಮೆರಿಕ ರಾಯಭಾರಿಗಳ ಮೇಲೆ ಕಣ್ಣಿಟ್ಟಿತ್ತು. ಈ ಹಿನ್ನೆಲೆ ಹತ್ತಾರು ಶರತ್ತುಗಳನ್ನು ವಿಧಿಸಿದ್ದ ಚೀನಾ, ಅಮೆರಿಕದ ಆದೇಶಕ್ಕೆ ಪಂಚ್ ಕೊಟ್ಟಿತ್ತು. ಇದೀಗ ಟೆರಿ ಬ್ರಾನ್‌ಸ್ಟಾಡ್ ತಮ್ಮ ಅತ್ಯುನ್ನತ ಹುದ್ದೆಯನ್ನೇ ಬಿಟ್ಟು ಹೊರಡುತ್ತಿರುವುದು ಈಗಿನ ಪರಿಸ್ಥಿತಿಯ ಸೂಕ್ಷ್ಮತೆಯನ್ನು ವಿವರಿಸುವಂತಿದೆ.

ಕಠಿಣ ನಿರ್ಬಂಧ ವಿಧಿಸಿರುವ ‘ಡ್ರ್ಯಾಗನ್’

ಕಠಿಣ ನಿರ್ಬಂಧ ವಿಧಿಸಿರುವ ‘ಡ್ರ್ಯಾಗನ್’

ಹಿಂದೆ ವಾಷಿಂಗ್ಟನ್‌ನ ಚೀನಾ ರಾಯಭಾರ ಕಚೇರಿ ಸಿಬ್ಬಂದಿ ಮೇಲೆ ಅಮೆರಿಕ ನಾನಾ ನಿರ್ಬಂಧ ವಿಧಿಸಿತ್ತು. ಅಮೆರಿಕದ ಚೀನಾ ರಾಯಭಾರ ಕಚೇರಿ ಅಧಿಕಾರಿಗಳು ವಿಶ್ವ ವಿದ್ಯಾಲಯಗಳಿಗೆ ಭೇಟಿ ನೀಡಲು, ಸ್ಥಳೀಯ ಅಧಿಕಾರಿಗಳ ಜೊತೆ ಸಭೆ ನಡೆಸಲು ಅನುಮತಿ ಪಡೆಯಬೇಕೆಂಬ ನಿರ್ಬಂಧ ಹೇರಿದ್ದು, 50 ಕ್ಕೂ ಹೆಚ್ಚು ಜನ ಸೇರುವ ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಅಗತ್ಯವಾಗಿದೆ. ಇಂತಹ ನಿಕೃಷ್ಟ ನಿರ್ಬಂಧಗಳಿಂದ ಕೆರಳಿ ಕೆಂಡವಾಗಿರುವ ಚೀನಾ, ತನ್ನ ದೇಶದಲ್ಲೂ ಅಮೆರಿಕ ರಾಯಭಾರ ಕಚೇರಿ ಸಿಬ್ಬಂದಿ ಮೇಲೆ ಇಂತಹದ್ದೇ ನಿರ್ಬಂಧಗಳನ್ನು ಹೇರಿದೆ. ಇದು ಎರಡೂ ದೇಶಗಳ ಸಂಬಂಧಕ್ಕೆ ಕಿಚ್ಚು ಹಚ್ಚಿದೆ.

ವಾಣಿಜ್ಯ ಯುದ್ಧ v/s ರಾಜತಾಂತ್ರಿಕ ಯುದ್ಧ..!

ವಾಣಿಜ್ಯ ಯುದ್ಧ v/s ರಾಜತಾಂತ್ರಿಕ ಯುದ್ಧ..!

ಅಮೆರಿಕ ಹಾಗೂ ಚೀನಾ ನಡುವೆ ವಾಣಿಜ್ಯ ಯುದ್ಧ ಆರಂಭವಾಗಿ ವರ್ಷಗಳೇ ಕಳೆದಿವೆ. ಎರಡೂ ರಾಷ್ಟ್ರಗಳು ಪರಸ್ಪರ ತೆರಿಗೆ ಸಮರವನ್ನೇ ಸಾರಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಸ್ತುಗಳ ಮೇಲೆ ಭಾರಿ ಪ್ರಮಾಣದ ತೆರಿಗೆ ಹೇರುವ ಮೂಲಕ ಚೀನಾ ನಾಯಕರನ್ನು ಕೆರಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಚೀನಾ ಸರ್ಕಾರ ಅಮೆರಿಕದ ಸರಕುಗಳ ಮೇಲೆ ಹೆಚ್ಚು ತೆರಿಗೆ ವಿಧಿಸಿತ್ತು. ಇದು ವಾಣಿಜ್ಯ ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು. ಆದರೆ ಎರಡೂ ದೇಶಗಳಲ್ಲಿ ಇದರ ಪರಿಣಾಮ ಅನುಭವಿಸಿದ್ದು ಮಾತ್ರ ಸಾಮಾನ್ಯ ಗ್ರಾಹಕ. ಈಗ ಎರಡೂ ದೇಶಗಳ ರಾಜತಾಂತ್ರಿಕ ಯುದ್ಧದಿಂದ ಬಡಪಾಯಿ ಅಧಿಕಾರಿಗಳು ಅಪ್ಪಚ್ಚಿಯಾಗುತ್ತಿದ್ದಾರೆ.

ಯುಎಸ್ ಎಚ್ಚರ! 9/11 ರೀತಿ ದಾಳಿ ಮತ್ತೆ ಸಾಧ್ಯ: ಬಿನ್ ಲಾಡೆನ್!ಯುಎಸ್ ಎಚ್ಚರ! 9/11 ರೀತಿ ದಾಳಿ ಮತ್ತೆ ಸಾಧ್ಯ: ಬಿನ್ ಲಾಡೆನ್!

ಹ್ಯೂಸ್ಟನ್ ಬಳಿಕ ಮತ್ತೊಂದು ರಾದ್ಧಾಂತ..!

ಹ್ಯೂಸ್ಟನ್ ಬಳಿಕ ಮತ್ತೊಂದು ರಾದ್ಧಾಂತ..!

ಕಳೆದ ಜುಲೈನಲ್ಲಿ ಇದೇ ರೀತಿ ಅಮೆರಿಕ ಹಾಗೂ ಚೀನಾ ನಡುವಿನ ರಾಜತಾಂತ್ರಿಕ ಕಚ್ಚಾಟ ದೊಡ್ಡ ಮಟ್ಟಕ್ಕೆ ತಿರುಗಿತ್ತು. ಆಗ ಹ್ಯೂಸ್ಟನ್‌ನಲ್ಲಿನ ಚೀನಾ ರಾಯಭಾರ ಕಚೇರಿ ಮುಚ್ಚಲು ಅಮೆರಿಕ ಆದೇಶ ನೀಡಿತ್ತು. ಇದರ ಬೆನ್ನಲ್ಲೇ ಚೀನಾದ ನೈರುತ್ಯ ನಗರ ಚೆಂಗ್ಡುನಲ್ಲಿರುವ ಅಮೆರಿಕಾ ದೂತಾವಾಸ ಕಚೇರಿಗೆ ಬೀಗ ಜಡಿದು ಸೇಡು ತೀರಿಸಿಕೊಳ್ಳಲು ಚೀನಾ ಮುಂದಾಗಿತ್ತು.

ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!ಚೀನಾ ವಿರುದ್ಧ ಚೀನಿಯರಿಂದಲೇ 'ಭಾಷೆ' ಯುದ್ಧ..!

ತಮ್ಮ ತಮ್ಮ ಮಾನ ತಾವೇ ಹರಾಜು ಹಾಕಿಕೊಂಡವು

ತಮ್ಮ ತಮ್ಮ ಮಾನ ತಾವೇ ಹರಾಜು ಹಾಕಿಕೊಂಡವು

ಹೀಗೆ ಎರಡೂ ರಾಷ್ಟ್ರಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ತಮ್ಮ ಮಾನ ತಾವೇ ಹರಾಜು ಹಾಕಿಕೊಂಡಿದ್ದವು. ಈಗ ಕೆಸರೆರಚಾಟ ಮತ್ತೆ ನಡೆಯುತ್ತಿದ್ದು, ಕೊರೊನಾ ಜಗತನ್ನು ಬಾಧಿಸುತ್ತಿರುವಾಗಲೇ ದೈತ್ಯ ರಾಷ್ಟ್ರಗಳ ಕಚ್ಚಾಟ ಮತ್ತಷ್ಟು ವ್ಯತಿರಿಕ್ತ ಪರಿಣಾಮ ಬೀರುವ ಮುನ್ಸೂಚನೆ ಸಿಕ್ಕಿದೆ. ಇದರ ಬೆನ್ನಲ್ಲೇ ಟೆರಿ ಬ್ರಾನ್‌ಸ್ಟಾಡ್ ಹುದ್ದೆ ತ್ಯಜಿಸುತ್ತಿರುವುದು ಉರಿಯುವ ಬೆಂಕಿಗೆ ತುಪ್ಪ ಸುರಿದಿದೆ.

ಚೀನಾ ವಿರುದ್ಧ ಮತ್ತೊಂದು ದೇಶದ ಬಂಡಾಯ..!ಚೀನಾ ವಿರುದ್ಧ ಮತ್ತೊಂದು ದೇಶದ ಬಂಡಾಯ..!

English summary
Terry Branstad will be stepping down as United States Ambassador to China after more than three years in Beijing. Branstad is expected to leave Beijing before the November US Presidential election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X