• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಯುಎಸ್​​ 'ಭಯೋತ್ಪಾದನೆ 2020' ವರದಿಯಲ್ಲಿ ಪಾಕಿಸ್ತಾನ ಪ್ರಸ್ತಾಪ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 17: ಯುಎಸ್​ ಸ್ಟೇಟ್​ ಡಿಪಾರ್ಟ್ಮೆಂಟ್​​​ 'ಭಯೋತ್ಪಾದನೆ 2020' ಎಂಬ ವರದಿಯನ್ನು ಬಿಡುಗಡೆ ಮಾಡಿದೆ.

ಆ ವರದಿಯಲ್ಲಿ ಪಾಕಿಸ್ತಾನವು ಭಯೋತ್ಪಾದಕರಿಗೆ ಆರ್ಥಿಕ ಬೆಂಬಲ ನೀಡುತ್ತಿದೆ ಎನ್ನುವ ವಿಷಯ ಬಹಿರಂಗಗೊಂಡಿದೆ. ಜೈಷ್-ಎ-ಮೊಹಮ್ಮದ್ (ಜೆಇಎಂ) ಸಂಸ್ಥಾಪಕ ಮಸೂದ್ ಅಜರ್ ಮತ್ತು 2008ರ ಮುಂಬೈ ದಾಳಿಯ ಮಾಸ್ಟರ್​ ಮೈಂಡ್ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಸಾಜಿದ್ ಮಿರ್‌ನಂತಹ ಭಯೋತ್ಪಾದಕ ನಾಯಕರನ್ನು ವಿಚಾರಣೆಗೆ ಒಳಪಡಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದೆ.

ಜಮ್ಮು: 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿ 1,724 ಮಂದಿಯ ಹತ್ಯೆಗೈದ ಉಗ್ರರುಜಮ್ಮು: 31 ವರ್ಷದಲ್ಲಿ 89 ಕಾಶ್ಮೀರಿ ಪಂಡಿತರು ಸೇರಿ 1,724 ಮಂದಿಯ ಹತ್ಯೆಗೈದ ಉಗ್ರರು

ಅಲ್ಲದೆ, ಅಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡ ಗುಂಪುಗಳು, ಆಫ್ಘನ್ ತಾಲಿಬಾನ್ ಮತ್ತು ಅಂಗಸಂಸ್ಥೆ ಹಕ್ಕಾನಿ ನೆಟ್‌ವರ್ಕ್ ಹಾಗೆಯೇ ಭಾರತವನ್ನು ಗುರಿಯಾಗಿಸಿವೆ. ಎಲ್‌ಇಟಿ ಮತ್ತು ಅದರ ಅಂಗಸಂಸ್ಥೆ ಫ್ರಂಟ್​​ ಆರ್ಗನೈಜೇಷನ್​​ ಹಾಗೂ ಜೆಎಂ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

ಅದರಲ್ಲಿ ವಿಷಕಾರಿ ರಾಷ್ಟ್ರ ಪಾಕಿಸ್ತಾನ ಭಯೋತ್ಪಾದನೆಯಲ್ಲಿ ತನ್ನ ಸೀಮಿತ ಪ್ರಗತಿ ಸಾಧಿಸಿದೆ ಎಂದು ತಿಳಿಸಿದೆ. ಪಾಕಿಸ್ತಾನವು 2020ರಲ್ಲಿ ತನ್ನ ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಕ್ರಿಯಾ ಯೋಜನೆಯನ್ನು ಪೂರ್ಣಗೊಳಿಸುವ ಮೂಲಕ ಹೆಚ್ಚುವರಿ ಪ್ರಗತಿಯನ್ನು ಸಾಧಿಸಿದೆ.

ಆದರೆ, ಎಫ್‌ಎಟಿಎಫ್ 'ಗ್ರೇ ಲಿಸ್ಟ್' ಅನ್ನು ಪೂರ್ಣಗೊಳಿಸಲಿಲ್ಲ. ಸರ್ಕಾರ ಮತ್ತು ಮಿಲಿಟರಿ ಪಡೆ ಭಯೋತ್ಪಾದಕತೆಗೆ ಸಹಕಾರ ನೀಡುವ ರೀತಿ ವರ್ತಿಸುತ್ತಿದೆ. ಭಯೋತ್ಪಾದನೆ ಅಳಿವಿಗೆ ಯಾವುದೇ ಕ್ರಮಕೈಗೊಂಡಿಲ್ಲ ಎಂದು ತಿಳಿಸಿದೆ.

ಆಫ್ಘಾನಿಸ್ತಾನವನ್ನು ಗುರಿಯಾಗಿಸಿಕೊಂಡ ಗುಂಪುಗಳು, ಆಫ್ಘನ್ ತಾಲಿಬಾನ್ ಮತ್ತು ಅಂಗಸಂಸ್ಥೆ ಹಕ್ಕಾನಿ ನೆಟ್‌ವರ್ಕ್ ಹಾಗೆಯೇ ಭಾರತವನ್ನು ಗುರಿಯಾಗಿಸಿವೆ. ಎಲ್‌ಇಟಿ ಮತ್ತು ಅದರ ಅಂಗಸಂಸ್ಥೆ ಫ್ರಂಟ್​​ ಆರ್ಗನೈಜೇಷನ್​​ ಹಾಗೂ ಜೆಎಂ ಪಾಕಿಸ್ತಾನದ ಭೂಪ್ರದೇಶದಿಂದ ಕಾರ್ಯಾಚರಣೆಯನ್ನು ಮುಂದುವರೆಸಿದೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.

2018ರ ಜೂನ್​ನಲ್ಲಿ ಎಫ್​ಎಟಿಎಫ್​ನ ಗ್ರೇ ಲಿಸ್ಟ್​ಗೆ ಪಾಕಿಸ್ತಾನವನ್ನು ಮೂರನೇ ಬಾರಿಗೆ ಸೇರಿಸಲಾಯಿತು. ಹಣಕಾಸು ದುರ್ಬಳಕೆ ಮತ್ತು ಭಯೋತ್ಪಾದನೆಗೆ ಹಣದ ಸಹಾಯ ಮಾಡುವ ಕಾರ್ಯಗಳನ್ನ ನಿಲ್ಲಿಸುವ ನಿಟ್ಟಿನಲ್ಲಿ ಪಾಕಿಸ್ತಾನಕ್ಕೆ 27 ಅಂಶಗಳ ಕಾರ್ಯ ಯೋಜನೆಯನ್ನ ನೀಡಿತು.

ಆ ಎಲ್ಲಾ 27 ಅಂಶಗಳನ್ನೂ ಜಾರಿಗೆ ತರುವಂತೆ 2019ರ ಅಂತ್ಯದವರೆಗೂ ಗಡುವು ನೀಡಿತು. ಆದರೆ, ಈ ವರ್ಷದ ಆರಂಭದಲ್ಲಿ ಕೋವಿಡ್ ಸಾಂಕ್ರಾಮಿಕ ಸಂಕದಷ್ಟ ಉದ್ಭವಿಸಿದ ಹಿನ್ನೆಲೆಯಲ್ಲಿ ಗಡುವನ್ನು ವಿಸ್ತರಿಸಲಾಗಿತ್ತು.

ಈಗ ಈ ಕಾರ್ಯಯೋಜನೆಯನ್ನು ಎಷ್ಟರ ಮಟ್ಟಿಗೆ ಜಾರಿಗೊಳಿಸಲಾಗಿದೆ ಎಂದು ಇವತ್ತಿನ ಎಫ್​ಎಟಿಎಫ್ ಸಭೆಯಲ್ಲಿ ವಿಮರ್ಶಿಸಲಾಯಿತು. 21 ಅಂಶಗಳು ಮಾತ್ರ ಜಾರಿಯಾಗಿವೆ. ಉಳಿದ 6 ಅಂಶಗಳ ಪಾಲನೆಯಾಗಿಲ್ಲ. ಹೀಗಾಗಿ, ಗ್ರೇ ಪಟ್ಟಿಯಲ್ಲಿ ಪಾಕ್ ಹೆಸರು ಮುಂದುವರಿಯುತ್ತದೆ.

ಬಾಕಿ ಇರುವ ಆರು ಅಂಶಗಳಲ್ಲಿ ಶೇ. 20ರಷ್ಟು ಪ್ರಗತಿ ತೋರಲಾಗಿದೆ. ಹಣ ದುರ್ಬಳಕೆ ವಿಚಾರ ಸಂಬಂಧ ಇರುವ ಅಂಶಗಳನ್ನ ಪಾಕಿಸ್ತಾನ ಸಂಪೂರ್ಣವಾಗಿ ಪಾಲಿಸಿದೆ. ಬಾಕಿ ಇರುವ 6 ಅಂಶಗಳು ಭಯೋತ್ಪಾದನೆಗೆ ಹಣಕಾಸು ವ್ಯವಸ್ಥೆ ಮಾಡಿರುವುದಕ್ಕೆ ಸಂಬಂಧಿಸಿದ್ದಾಗಿದೆ.

ಲಷ್ಕರ್‌ ಇ ತೊಯ್ಬಾ, ಜೇಷ್-ಎ-ಮೊಹಮ್ಮದ್ ಮೊದಲಾದ ಉಗ್ರ ಸಂಘಟನೆಗಳಿಗೆ ಹಣದ ಹರಿವನ್ನು ತಡೆಯಲು ಪಾಕಿಸ್ತಾನ ವಿಫಲವಾಗಿರುವುದು ಅದಕ್ಕೆ ಕುತ್ತು ತಂದಿದೆ.

ಹಣಕಾಸು ಕ್ರಿಯಾ ಪಡೆಯಾಗಿರುವ ಎಫ್​ಎಟಿಎಫ್ ಸ್ಥಾಪನೆಯಾಗಿದ್ದು 1989ರಲ್ಲಿ. ಅಂತಾರಾಷ್ಟ್ರೀಯ ಹಣ ಅವ್ಯವಹಾರ ತಡೆಯಲು ಹುಟ್ಟಿಕೊಂಡಿದ್ದ ಸಂಸ್ಥೆ ಇದು. ನಂತರದ ದಿನಗಳಲ್ಲಿ ಇದಕ್ಕೆ ಟೆರರ್ ಫೈನಾನ್ಸಿಂಗ್ ಅಂಶವನ್ನೂ ಸೇರಿಸಲಾಯಿತು.

ಈ ಸಂಸ್ಥೆಯಲ್ಲಿ ಭಾರತ, ಚೀನಾ ಇತ್ಯಾದಿ 39 ಸದಸ್ಯ ರಾಷ್ಟ್ರಗಳಿವೆ. ಇದು ಮೂರು ಪಟ್ಟಿಗಳನ್ನು ಮಾಡುತ್ತದೆ. ಬಿಳಿ, ಬೂದು ಮತ್ತು ಕಪ್ಪು ಪಟ್ಟಿ. ಜಾಗತಿಕವಾಗಿ ಅತಿ ಕಂಟಕ ಸೃಷ್ಟಿಸುವ ದೇಶಗಳನ್ನ ಬ್ಲಾಕ್ ಲಿಸ್ಟ್​ಗೆ ಸೇರಿಸಲಾಗುತ್ತದೆ.

English summary
Pakistan took steps in 2020 to counter terror financing and restrain India-focused militant groups from conducting attacks, however, terrorist groups targeting Afghanistan and India continued to operate from Pakistani territory, a report filed by the United States (US) Department of State has said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X