ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ಗೆ ಸೋಲು..?

By ಅನಿಕೇತ್
|
Google Oneindia Kannada News

ವಾಷಿಂಗ್ಟನ್, ಜುಲೈ 27: ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 100 ದಿನಗಳು ಮಾತ್ರ ಬಾಕಿ ಇದೆ. ಈ ಹೊತ್ತಲ್ಲೇ ಅಧ್ಯಕ್ಷ ಟ್ರಂಪ್‌ಗೆ ಶಾಕ್ ಸಿಕ್ಕಿದೆ. ಮತ್ತೊಂದು ಅವಧಿಗೆ ಆಯ್ಕೆಯಾಗುವ ಆಕಾಂಕ್ಷೆ ಹೊಂದಿದ್ದ ಟ್ರಂಪ್‌ಗೆ ಭಾರಿ ಹಿನ್ನಡೆಯಾಗುತ್ತಿದೆ.

Recommended Video

ವಾಯುಪಡೆಗೆ ಬಂತು ಆನೆ ಬಲ, ಭಾರತದ ಬತ್ತಳಿಕೆ ಸೇರಿದ ರಫೇಲ್ | Oneindia Kannada

ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಅರಿಜೋನಾ, ಫ್ಲೋರಿಡಾ ಹಾಗೂ ಮಿಚಿಗನ್‌ ರಾಜ್ಯಗಳಲ್ಲಿ ಅಧ್ಯಕ್ಷ ಟ್ರಂಪ್ ವಿರುದ್ಧ ಜನಾಭಿಪ್ರಾಯ ವ್ಯಕ್ತವಾಗಿದೆ. ಅಮೆರಿಕದ ಮಾಧ್ಯಮಗಳು ನಡೆಸಿರುವ ಸಮೀಕ್ಷೆಯಲ್ಲಿ ಮಾಜಿ ಉಪಾಧ್ಯಕ್ಷ ಹಾಗೂ ಟ್ರಂಪ್ ಎದುರಾಳಿ ಜೋ ಬಿಡೆನ್‌ಗೆ ಬೆಂಬಲ ವ್ಯಕ್ತವಾಗಿದೆ.

ಚುನಾವಣೆ ಹೊತ್ತಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್..!ಚುನಾವಣೆ ಹೊತ್ತಲ್ಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಬಿಗ್ ಶಾಕ್..!

ಸಮೀಕ್ಷೆಯಲ್ಲಿ ಪಾಲ್ಗೊಂಡ ಮತದಾರರ ಪೈಕಿ ಫ್ಲೋರಿಡಾ ರಾಜ್ಯದಲ್ಲಿ ಬಿಡೆನ್‌ಗೆ 51% ಜನಬೆಂಬಲ ಸಿಕ್ಕಿದ್ದರೆ, ಟ್ರಂಪ್‌ಗೆ 46% ಸಪೋರ್ಟ್ ಸಿಕ್ಕಿದೆ. ಅರಿಜೋನಾ ಸ್ಟೇಟ್‌ನಲ್ಲಿ ಬಿಡೆನ್ ಪರ 49% ಸಪೋರ್ಟ್ ಇದ್ದರೆ, ಟ್ರಂಪ್‌ಗೆ 45%ರಷ್ಟು ಜನಬೆಂಬಲ ಬಂದಿದೆ.

 ಮಿಚಿಗನ್‌ ರಾಜ್ಯದಲ್ಲೂ ಬಿಡೆನ್ ಮುಂದೆ

ಮಿಚಿಗನ್‌ ರಾಜ್ಯದಲ್ಲೂ ಬಿಡೆನ್ ಮುಂದೆ

ಇನ್ನು ಮಿಚಿಗನ್‌ ರಾಜ್ಯದಲ್ಲೂ ಬಿಡೆನ್ ಮುಂದಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 52% ದಷ್ಟು ಮತದಾರರ ಒಲವು ಗಳಿಸಿದ್ದಾರೆ. ಎಲೆಕ್ಷನ್‌ಗೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲೇ ಟ್ರಂಪ್‌ಗೆ ಇದು ಶಾಕ್ ಕೊಟ್ಟಿದೆ. ಆದರೆ 2016ರ ಚುನಾವಣೆಯಲ್ಲಿ ಟ್ರಂಪ್ ಇದೇ ರಾಜ್ಯಗಳಲ್ಲಿ ಭರ್ಜರಿ ಜಯಭೇರಿ ಭಾರಿಸಿದ್ದರು.

 ಟ್ರಂಪ್‌ಗೆ ‘ಕೊರೊನಾ’ ಏಟು..?

ಟ್ರಂಪ್‌ಗೆ ‘ಕೊರೊನಾ’ ಏಟು..?

ಬಿಡೆನ್ ಈ ಹಿಂದೆ ಒಬಾಮಾ ಸರ್ಕಾರದಲ್ಲಿ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದಾರೆ. ಹೀಗಾಗಿ ಟ್ರಂಪ್‌ರ ತಪ್ಪುಗಳನ್ನು ಜನರ ಮುಂದೆ ಬಿಚ್ಚಿಡುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಅದರಲ್ಲೂ ಕೊರೊನಾ ನಿಯಂತ್ರಿಸುವಲ್ಲಿ ಟ್ರಂಪ್ ಎಡವುತ್ತಿರುವುದನ್ನೂ ಬಿಡೆನ್ ಅಮೆರಿಕನ್ನರಿಗೆ ಮನದಟ್ಟು ಮಾಡುತ್ತಿದ್ದಾರೆ. ಈಗಾಗಲೇ ಒಂದೂವರೆ ಲಕ್ಷ ಸೋಂಕಿತರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಹಾಗೇ 43 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರಿಗೆ ಸೋಂಕು ವಕ್ಕರಿಸಿದೆ. ಇದು ಸಹಜವಾಗಿಯೇ ಟ್ರಂಪ್ ವಿರುದ್ಧ ಅಸಮಾಧಾನ ಭುಗಿಲೇಳುವಂತೆ ಮಾಡಿದೆ. ಈ ಸಮೀಕ್ಷೆ ಅಧ್ಯಕ್ಷರ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ರಾಜ್ಯಗಳಲ್ಲೂ ಟ್ರಂಪ್‌ಗೆ ಹಿನ್ನಡೆಯಾಗುವ ಮುನ್ಸೂಚನೆ ನೀಡುತ್ತಿದೆ.

ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!ಅಮೆರಿಕದಲ್ಲಿ ಪ್ರಾಣ ಉಳಿಸಿಕೊಳ್ಳಲು ಐಸಿಯು ಬೆಡ್‌ಗಳಿಲ್ಲ..!

 ಜನಾಂಗೀಯ ಸಂಘರ್ಷವೂ ಮುಳುವಾಗುತ್ತಾ..?

ಜನಾಂಗೀಯ ಸಂಘರ್ಷವೂ ಮುಳುವಾಗುತ್ತಾ..?

ತಣ್ಣಗಿದ್ದ ಅಮೆರಿಕದಲ್ಲಿ ಜನಾಂಗೀಯ ಸಂಘರ್ಷದ ಬಿರುಗಾಳಿ ಎಬ್ಬಿಸಿದ್ದು ಜಾರ್ಜ್ ಫ್ಲಾಯ್ಡ್ ಹತ್ಯೆ. ಮೇ ತಿಂಗಳಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಜಾರ್ಜ್ ಫ್ಲಾಯ್ಡ್ ಎಂಬ ವ್ಯಕ್ತಿಯನ್ನ ಹತ್ಯೆಗೈದಿದ್ದ. ಹೀಗೆ ಆಫ್ರಿಕಾ ಮೂಲದ ಅಮೆರಿಕನ್ನರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಇಡೀ ಅಮೆರಿಕದಲ್ಲಿ ಬೆಂಕಿ ಹೊತ್ತಿಸಿತ್ತು. ವರ್ಣಬೇಧ ನೀತಿ ವಿರೋಧಿಸಿ ಕರಿಯರು, ಬಿಳಿಯರು ಒಟ್ಟಾಗಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್' ಅಡಿಬರಹದಲ್ಲಿ ಈ ಹೋರಾಟ ಇನ್ನೂ ನಡೆಯುತ್ತಿದೆ. ಇದು ಅಮೆರಿಕದ ಇತಿಹಾಸದಲ್ಲೇ ಬಹುದೊಡ್ಡ ಹೋರಾಟವಾಗಿದೆ. ಆದರೆ ಪರಿಸ್ಥಿತಿ ನಿಯಂತ್ರಿಸಬೇಕಿದ್ದ ಟ್ರಂಪ್ ಜನಾಂಗೀಯ ಜಗಳ ನಡೆಯುವ ಸಮಯದಲ್ಲೇ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದರು. ಪ್ರತಿಭಟನಾಕಾರರು ಮತ್ತಷ್ಟು ರೊಚ್ಚಿಗೇಳುವಂತೆ ಹೇಳಿಕೆಗಳನ್ನ ನೀಡಿದ್ದರು. ಇದು ಕೂಡ ಚುನಾವಣೆಯಲ್ಲಿ ಟ್ರಂಪ್‌ಗೆ ಹಿನ್ನಡೆ ಉಂಟುಮಾಡುವ ಸಾಧ್ಯತೆ ದಟ್ಟವಾಗಿದೆ.

ಯುಎಸ್ ಎಲೆಕ್ಷನ್: ಹಿನ್ನಡೆ ಅನುಭವಿಸಿದ ಗಾಯಕ ಕಾನ್ಯೆ ವೆಸ್ಟ್ಯುಎಸ್ ಎಲೆಕ್ಷನ್: ಹಿನ್ನಡೆ ಅನುಭವಿಸಿದ ಗಾಯಕ ಕಾನ್ಯೆ ವೆಸ್ಟ್

 ನಿರುದ್ಯೋಗದ ಕೂಪದಲ್ಲಿ ಅಮೆರಿಕನ್ನರು

ನಿರುದ್ಯೋಗದ ಕೂಪದಲ್ಲಿ ಅಮೆರಿಕನ್ನರು

ನಿರುದ್ಯೋಗ ಕೇವಲ ಬಡ ರಾಷ್ಟ್ರಗಳಿಗೆ ಸೀಮಿತವಾಗಿಲ್ಲ. ಶ್ರೀಮಂತ ರಾಷ್ಟ್ರ ಅಮೆರಿಕದಲ್ಲೂ ಉದ್ಯೋಗ ಸಿಗದೆ ಕೋಟ್ಯಂತರ ಜನರು ಪರದಾಡುತ್ತಿದ್ದಾರೆ. ಇದನ್ನು ಟ್ರಂಪ್ ಸರ್ಕಾರ ಸರಿಯಾಗಿ ನಿಭಾಯಿಸಿಲ್ಲ ಎಂಬ ಆರೋಪಗಳಿವೆ. ಕೊರೊನಾ ಅಪ್ಪಳಿಸುವುದಕ್ಕೂ ಮೊದಲೇ ಅಮೆರಿಕದಲ್ಲಿ ನಿರುದ್ಯೋಗ ತಾಂಡವವಾಡುತ್ತಿತ್ತು. ಇನ್ನು ಕೊರೊನಾ ವಕ್ಕರಿಸಿದ ನಂತರ ಪರಿಸ್ಥಿತಿ ಮತ್ತಷ್ಟು ವಿಕೋಪಕ್ಕೆ ತಿರುಗಿ, ಕೋಟ್ಯಂತರ ಜನ ಉದ್ಯೋಗ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಇದೆಲ್ಲಾ ಅಮೆರಿಕದ ನಾಗರಿಕರನ್ನ ರೊಚ್ಚಿಗೆಬ್ಬಿಸಿದೆ. ಒಟ್ನಲ್ಲಿ ಟ್ರಂಪ್ ಸೋಲಿಗೆ ನಾನಾ ಕಾರಣಗಳು ಇರುವಂತೆಯೇ, ಬಿಡೆನ್ ಪರ ಅಮೆರಿಕನ್ನರು ಒಲವು ತೋರಿಸಲು ಅವರ ಜನಪರ ನಿಲುವು ಕಾರಣವಾಗಿದೆ. ಇಷ್ಟೆಲ್ಲಾ ನಡೆದರೂ ಅಮೆರಿಕದಲ್ಲಿ ಟ್ರಂಪ್ ಹವಾ ಕಡಿಮೆ ಇಲ್ಲ. ಈಗಲೂ ಬಹುಪಾಲು ಅಮೆರಿಕನ್ನರ ಒಲವು ಟ್ರಂಪ್ ಪರವಾಗಿಯೇ ಇದೆ. ಈ ಹಿನ್ನೆಲೆಯಲ್ಲಿ ಹೇಳುವುದಾದ್ರೆ ಈಗ ರಿವೀಲ್ ಆಗಿರೋದು ಕೇವಲ ಸಮೀಕ್ಷೆಯ ವರದಿ, ಹೀಗಾಗಿ ಅಮೆರಿಕನ್ನರ ನಿಜವಾದ ತೀರ್ಪು ಏನು ಅನ್ನೋದನ್ನ ತಿಳಿಯಲು ಇನ್ನೂ 3 ತಿಂಗಳು ಕಾಯಲೇಬೇಕು.

English summary
Donald Trump got shocked Before The Main Election. In Three Major States Biden Got Lead Against Donald Trump. This Is Big Loss For Trump 100 Days Before The American Presidential Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X