ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಗ್ರರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು: ಹೊಡೆದಷ್ಟೂ ಬಲವಾಗುತ್ತಿದ್ದಾರೆ ಜಿಹಾದಿಗಳು

|
Google Oneindia Kannada News

ವಾಷಿಂಗ್ಟನ್, ನವೆಂಬರ್ 27: ಕಳೆದ ಹದಿನೇಳು ವರ್ಷಗಳಲ್ಲಿ ಸುನ್ನಿ ಇಸ್ಲಾಮಿಕ್ ಉಗ್ರರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಳವಾಗಿದೆ.

ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಗಳ ವಿರುದ್ಧ ಅಮೆರಿಕ ಮತ್ತು ಅದರ ಮಿತ್ರ ರಾಷ್ಟ್ರಗಳು ಸುಮಾರು 20 ವರ್ಷಗಳಿಂದ ನಿರಂತರ ಯುದ್ಧಗಳನ್ನು ನಡೆಸುತ್ತಿದ್ದರೂ ಉಗ್ರರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ ಎಂದು ವರದಿಯೊಂದು ಹೇಳಿದೆ.

2001ರ ಸೆಪ್ಟೆಂಬರ್ 11ರಂದು ಅಮೆರಿಕದ ಮೇಲೆ ದಾಳಿ ನಡೆದ ಬಳಿಕ ಉಗ್ರರ ಸಂಖ್ಯೆ ನಾಲ್ಕು ಪಟ್ಟು ಏರಿಕೆಯಾಗಿದೆ. ಇದು ಆಗಿನ ಸಂದರ್ಭಕ್ಕಿಂತ ಶೇ 270ರಷ್ಟು ಹೆಚ್ಚು.

 ಈ ಇಬ್ಬಗೆ ನೀತಿ ಬಿಟ್ಟು, ಆರೋಪಿಗಳಿಗೆ ಶಿಕ್ಷೆ ನೀಡಿ: ಪಾಕ್ ಗೆ ಛೀಮಾರಿ ಹಾಕಿದ ಭಾರತ ಈ ಇಬ್ಬಗೆ ನೀತಿ ಬಿಟ್ಟು, ಆರೋಪಿಗಳಿಗೆ ಶಿಕ್ಷೆ ನೀಡಿ: ಪಾಕ್ ಗೆ ಛೀಮಾರಿ ಹಾಕಿದ ಭಾರತ

ಅಫ್ಘಾನಿಸ್ತಾನ, ಇರಾಕ್, ಪಾಕಿಸ್ತಾನ, ಸಿರಿಯಾ, ಲಿಬಿಯಾ, ಯೆಮನ್, ಸೊಮಾಲಿಯಾ, ಸುಡಾನ್ ಮತ್ತು ಫಿಲಿಫ್ಫೀನ್ಸ್‌ಗಳಲ್ಲಿ ಅಮೆರಿಕ ಹಾಗೂ ಯುರೋಪಿಯನ್ ದೆಶಗಳ ಸೇನೆ ಕಾರ್ಯಾಚರಣೆ ನಡೆಸುತ್ತಿವೆ. ಹೀಗಿದ್ದೂ ಅವರನ್ನು ಹತ್ತಿಕ್ಕುವುದು ಸಾಧ್ಯವಾಗಿಲ್ಲ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ ಎಂದು ಕಾರ್ಯತಂತ್ರ ಮತ್ತು ಅಂತಾರಾಷ್ಟ್ರೀಯ ಅಧ್ಯಯನಗಳ ಕೇಂದ್ರ (ಸಿಎಸ್ಐಎಸ್) ವರದಿ ತಿಳಿಸಿದೆ.

sunni islamist militants rises four times than 9/11 attack

'ಸಲಾಫಿ-ಜಿಹಾದಿ ಬೆದರಿಕೆಯ ವಿಕಸನ' ಎಂಬ 71 ಪುಟಗಳ ವರದಿಯಲ್ಲಿ ಸುಮಾರು 40 ವರ್ಷಗಳಲ್ಲಿನ ಉಗ್ರರ ಚಟುವಟಿಕೆಗಳ ಮಾಹಿತಿ ಇದೆ.

ಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಗುದ್ದು ; $ 1.66 ಬಿಲಿಯನ್ ಸೇನಾ ನೆರವು ರದ್ದುಪಾಕಿಸ್ತಾನಕ್ಕೆ ಅಮೆರಿಕದಿಂದ ಮತ್ತೊಂದು ಗುದ್ದು ; $ 1.66 ಬಿಲಿಯನ್ ಸೇನಾ ನೆರವು ರದ್ದು

ಇರಾಕ್ ಮತ್ತು ಸಿರಿಯಾದಲ್ಲಿ ದೊಡ್ಡ ಪ್ರಮಾಣದಲ್ಲಿ ನೆಲೆಯನ್ನು ಕಳೆದುಕೊಂಡರೂ ಇಸ್ಲಾಮಿಕ್ ಸ್ಟೇಟ್ ಅನ್ನು ಸೋಲಿಸುವುದು ದೂರದ ಮಾತು. 2016ಕ್ಕೆ ಹೋಲಿಸಿದರೆ ಜಿಹಾದಿ ಉಗ್ರರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಇಳಿದಿರಬಹುದು. ಆದರೆ, ಕಳೆದ 38 ವರ್ಷಗಳಲ್ಲಿಯೇ ಅಧಿಕ ಮಟ್ಟದಲ್ಲಿದೆ.

ಪ್ರಸ್ತುತ ಸುಮಾರು 70 ದೇಶಗಳಲ್ಲಿ ಅಂದಾಜು 2.30 ಲಕ್ಷ ಸಲಾಫಿ-ಜಿಹಾದಿ ಗಳಿದ್ದಾರೆ ಎಂದು ಹೇಳಲಾಗಿದೆ.

2002ರ ಗುಜರಾತ್ ಅಕ್ಷರಧಾಮ ಉಗ್ರರ ದಾಳಿ ಪ್ರಕರಣದ ಆರೋಪಿ ಸೆರೆ2002ರ ಗುಜರಾತ್ ಅಕ್ಷರಧಾಮ ಉಗ್ರರ ದಾಳಿ ಪ್ರಕರಣದ ಆರೋಪಿ ಸೆರೆ

ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಿರಿಯಾದಲ್ಲಿದ್ದಾರೆ (70500), ಅಫ್ಘಾನಿಸ್ತಾನ 64,000, ಪಾಕಿಸ್ತಾನ 40,000 ಮತ್ತು ಇರಾಕ್‌ನಲ್ಲಿ 15,000 ಉಗ್ರರಿದ್ದಾರೆ. ಸುಮಾರು 30 ಸಾವಿರ ಉಗ್ರರು ಆಫ್ರಿಕಾದ ಸೊಮಾಲಿಯಾ, ನೈಜೀರಿಯಾ ಮತ್ತು ಸಹೆಲ್ ಪ್ರದೇಶದಲ್ಲಿದ್ದಾರೆ ಎಂದು ವರದಿ ತಿಳಿಸಿದೆ.

English summary
A report explained that, despite an almost 20 years long war campaign by the US and its allies the numbers of Sunni Islamic militants are increased by four times.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X