• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದೊಡ್ಡವರಿಗಿಂತ ಚಿಕ್ಕ ಮಕ್ಕಳಿಗೆ ಕೊರೊನಾ ಸೋಂಕು ಬಹುಬೇಗ ಹರಡುತ್ತೆ

|

ವಾಷಿಂಗ್ಟನ್, ಜುಲೈ 31: ದೊಡ್ಡವರಿಗಿಂತ ಮಕ್ಕಳಿಗೆ ಕೊರೊನಾ ಸೋಂಕು ಬಹುಬೇಗ ಹರಡುತ್ತದೆ ಎಂದು ಅಧ್ಯಯನ ಒಂದು ಹೇಳಿದೆ.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ವಯಸ್ಕರು ಮತ್ತು ದೊಡ್ಡವರಿಗೆ ಹೋಲಿಸಿದರೆ, ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಒಂದೇ ಡೋಸ್: ಜಾನ್ಸನ್&ಜಾನ್ಸನ್ ಕೊರೊನಾ ಲಸಿಕೆಯ ಭರವಸೆಯ ಫಲಿತಾಂಶ

ಒಂದು ವಾರದಿಂದ ಸೋಂಕು ಲಕ್ಷಣ ಕಾಣಿಸಿಕೊಂಡಿರುವ 145 ವಿವಿಧ ವಯೋಮಾನದ ವ್ಯಕ್ತಿಗಳನ್ನು ಮೂರು ಗುಂಪುಗಳಾಗಿ ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿತ್ತು.

ಅದರಲ್ಲಿ ಐದು ವರ್ಷಕ್ಕಿಂತ ಚಿಕ್ಕವರು, 5 ರಿಂದ 17 ವಯಸ್ಸಿನವರು ಹಾಗೂ 18 ರಿಂದ 65 ವರ್ಷಗಳ ಒಳಗಿನ ವ್ಯಕ್ತಿಗಳನ್ನು ಅಧ್ಯಯನದಲ್ಲಿ ಬಳಸಿಕೊಳ್ಳಲಾಗಿದೆ.

ಜೆಎಎಂಎ ಪಿಡಿಯಾಟ್ರಿಕ್ಸ್‌ ಎಂಬ ಮ್ಯಾಗಜಿನ್‌ನಲ್ಲಿ ಪ್ರಕಟವಾಗಿರುವ ಈ ಅಧ್ಯಯನ ವರದಿಯ ಪ್ರಕಾರ ಕೊರೊನಾ ಸೋಂಕಿನ ಸೌಮ್ಯ ಮತ್ತು ಸಾಧಾರಣ ಲಕ್ಷಣಗಳಿರುವ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೂಗಿನಲ್ಲಿನ ದ್ರವದ ಮಾದರಿಯಲ್ಲಿರುವ ಕೋವಿಡ್‌ ವೈರಸ್‌ನಲ್ಲಿ ಜೈವಿಕ ವಸ್ತುಗಳು ಹೆಚ್ಚಿನ ಪ್ರಮಾಣದಲ್ಲಿರುತ್ತವೆ.

ಮಕ್ಕಳಿಂದ ಸೋಂಕು ಹರಡುವ ಸಾಧ್ಯತೆ ಕುರಿತು ಹೇಳಿರುವ ಈ ಅಧ್ಯಯನ, ಕೊರೊನಾ ಸೋಂಕು ಹೆಚ್ಚಾಗಿರುವ ರಾಷ್ಟ್ರಗಳಲ್ಲಿ ಶಾಲೆಗಳು ಮತ್ತು ಡೇಕೇರ್‌ಗಳನ್ನು ತೆರೆಯುವ ಬಗ್ಗೆಯೂ ಆತಂಕ ವ್ಯಕ್ತಪಡಿಸಿದೆ.

ಅಮೆರಿಕದ ಆನ್‌ ಅಂಡ್ ರಾಬರ್ಟ್‌ ಎಚ್‌. ಲ್ಯೂರೆ ಮಕ್ಕಳ ಆಸ್ಪತ್ರೆಯ ಸಾಂಕ್ರಾಮಿಕ ರೋಗಗಳ ತಜ್ಞ ಹೀಲ್ಡ್‌ ಸಾರ್ಜೆಂಟ್ ಈ ಅಧ್ಯಯನ ನಡೆಸಿದ್ದಾರೆ. ಆ ಪ್ರಕಾರ, 'ದೊಡ್ಡ ಮಕ್ಕಳು ಮತ್ತು ವಯಸ್ಕರಿಗೆ ಹೋಲಿಸಿದರೆ ಸೋಂಕಿನ ಸೌಮ್ಯ ಲಕ್ಷಣಗಳಿರುವ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೂಗಿನ ದ್ರವದ ಮಾದರಿಯಲ್ಲಿ ಸೋಂಕು ಹರಡುವ 'ಸಾರ್ಸ್‌-ಕೋವ್‌-2 ವೈರಲ್‌ - ಆರ್‌ಎನ್‌ಎ' ಜೈವಿಕ ಅಂಶ‌ ಹೆಚ್ಚಿರುತ್ತದೆ.

ಹೆಚ್ಚು ಬೇಗ ಸೋಂಕು ಹರಡಲು ಕಾರಣವಾಗುತ್ತದೆ. ಹೀಗಾಗಿ ವಯಸ್ಕರಿಗೆ ಹೋಲಿಸಿದರೆ, ಸೌಮ್ಯ ಲಕ್ಷಣಗಳಿರುವ ಚಿಕ್ಕಮಕ್ಕಳಲ್ಲಿ ಸೋಂಕು ಹರಡುವ ಪ್ರಮಾಣ ಹೆಚ್ಚು ಎನ್ನುವ ಮಾಹಿತಿ ನೀಡಿದ್ದಾರೆ.

English summary
A study from Ann & Robert H. Lurie Children's Hospital of Chicago discovered that children younger than 5 years with mild to moderate COVID-19 have much higher levels of genetic material for the virus in the nose compared to older children and adults.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X