ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಹ್ಯಾಕಾಶಕ್ಕೆ 152 ಜನರ ಅಸ್ಥಿ ಕೊಂಡೊಯ್ಯಲಿದೆ ಅಮೆರಿಕದ ಬಾಹ್ಯಾಕಾಶ ನೌಕೆ

|
Google Oneindia Kannada News

ವಾಷಿಂಗ್ಟನ್, ಜೂನ್ 23: ಅಮೆರಿಕದ ಖ್ಯಾತ ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್ ಎಕ್ಸ್ ನೇಷನ್ ಹೊಸ ದಾಖಲೆ ನಿರ್ಮಾಣಕ್ಕೆ ಮುಂದಾಗಿದೆ.

ರಾತ್ರಿ ಅವಧಿಯಲ್ಲಿ ಮೊದಲ ಬಾರಿಗೆ ರಾಕೆಟ್ ಉಡಾವಣೆ ಇಲ್ಲಿಯವರೆಗಿನ ಅತಿ ಭಾರದ ಉಪಗ್ರಹ ಉಡಾವಣೆ ಹಾಗೂ 152 ಜನರ ಅಸ್ಥಿಯನ್ನು ಕೊಂಡೊಯ್ಯುವ ಅಪರೂಪದ ಸಾಹಸಕ್ಕೆ ಸ್ಪೇಸ್ ಎಕ್ಸ್‌ ನೇಷನ್ ಕೈಹಾಕುತ್ತಿದೆ.

ಜೂನ್ 24ರ ರಾತ್ರಿ 11.24ರಿಂದ ಜೂನ್ 25 ಮಧ್ಯರಾತ್ರಿ 2.30ರ ಅವಧಿಯೊಳಗೆ ಈ ಬೃಹತ್ ಉಪಗ್ರಹ ಉಡಾವಣೆಯಾಗಲಿದೆ.

SpaceX Nation to launch Historical satellite

ಸೆಲೆಸ್ಟಿಸ್ ಮೆಮೊರಿಯಲ್ ಸ್ಪೇಸ್ ಫ್ಲೈಟ್ಸ್ ಎಂಬ ಕಂಪನಿಯ ಸಹಯೋಗದೊಂದಿಗೆ ಬಾಹ್ಯಾಕಾಶಕ್ಕೆ 152 ಜನರ ಅಸ್ಥಿಯನ್ನು ಕೊಂಡೊಯ್ಯುವ ಪ್ರಯತ್ನವನ್ನು ಮಾಡಲಾಗುತ್ತಿದೆ.

ಈ ಅಸ್ಥಿಗಳನ್ನು ಲೋಹದ ಸಣ್ಣ ಕ್ಯಾಪ್ಸೂಲ್‌ನಲ್ಲಿ ತುಂಬಲಾಗಿದೆ. ಇದಲ್ಲದೆ 24 ಉಪಗ್ರಹಗಳನ್ನು ಈ ರಾಕೆಟ್ ಕೊಂಡೊಯ್ಯಲಿದೆ.

ಸ್ಪೇಸ್ ಎಕ್ಸ್ ಸ್ಥಾಪಕ ಎಲಾನ್ ಮಸ್ಕ್ ಪ್ರಕಾರ ಇಲ್ಲಿಯವರೆಗಿನ ಅತಿ ಕಠಿಣದ ಉಡಾವಣೆಯಾಗಿರಲಿದೆ. ಯಶಸ್ವಿಯಾದರೆ ಇದರಿಂದ ಕೆಲಸ ಸಂಶೋಧನೆಯಲ್ಲಿ ನಾಸಾಕ್ಕೂ ಪ್ರಯೋಜನವಾಗಲಿದೆ.

English summary
SpaceX Nation is to launch Historical satellite, 152 dead people's remains into orbit in Falcon Heavy rocket.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X