ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನರೇಂದ್ರ ಮೋದಿ ಅವರನ್ನು ಬೆಂಬಲಿಸಬೇಕಿದೆ: ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಡಿಸೆಂಬರ್ 4: ದಕ್ಷಿಣ ಏಷ್ಯಾದಲ್ಲಿ ಶಾಂತಿ ಪ್ರಕ್ರಿಯೆ ಸ್ಥಾಪಿಸುವ ವಿಚಾರದಲ್ಲಿ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿರುವ ಅಮೆರಿಕ, ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಅಫ್ಘಾನಿಸ್ತಾನದ ಪ್ರಯತ್ನಕ್ಕೆ ಬೆಂಬಲ ನೀಡುವ ಅಗತ್ಯವಿದೆ ಎಂದು ಹೇಳಿದೆ.

ಉಗ್ರರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು: ಹೊಡೆದಷ್ಟೂ ಬಲವಾಗುತ್ತಿದ್ದಾರೆ ಜಿಹಾದಿಗಳುಉಗ್ರರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚು: ಹೊಡೆದಷ್ಟೂ ಬಲವಾಗುತ್ತಿದ್ದಾರೆ ಜಿಹಾದಿಗಳು

ಉಪಖಂಡದಲ್ಲಿ ಶಾಂತಿ ಮೂಡಿಸುವ ಜವಾಬ್ದಾರಿಯುತ ದೇಶಕ್ಕೆ ನೋಡುತ್ತಿದ್ದೇವೆ. ಅಫ್ಘಾನಿಸ್ತಾನದಲ್ಲಿನ ಯುದ್ಧವು 40 ವರ್ಷಗಳನ್ನು ದಾಟಿದೆ. ಇದು ಎಲ್ಲರೂ ಒಂದುಗೂಡುವ ಸಮಯ. ಇಲ್ಲಿ ಶಾಂತಿ ಸ್ಥಾಪಿಸಲು ಮತ್ತು ಉತ್ತಮ ಜಗತ್ತನ್ನು ನಿರ್ಮಿಸಲು ಪ್ರಯತ್ನಿಸುತ್ತಿರುವ ವಿಶ್ವಸಂಸ್ಥೆ, ನರೇಂದ್ರ ಮೋದಿ, ಅಶ್ರಫ್ ಘನಿ ಅವರಿಗೆಲ್ಲ ಬೆಂಬಲ ನೀಡಬೇಕಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಹೇಳಿದ್ದಾರೆ.

ಕಾಶ್ಮೀರ ಸಮಸ್ಯೆ ಬಗ್ಗೆ ಇಮ್ರಾನ್ ಖಾನ್ ಗೆ ವಾಜಪೇಯಿ ಏನು ಹೇಳಿದ್ದರು?ಕಾಶ್ಮೀರ ಸಮಸ್ಯೆ ಬಗ್ಗೆ ಇಮ್ರಾನ್ ಖಾನ್ ಗೆ ವಾಜಪೇಯಿ ಏನು ಹೇಳಿದ್ದರು?

ನಾವು ಸರಿಯಾದ ದಾರಿಯಲ್ಲಿದ್ದೇವೆ. ಇದನ್ನು ರಾಜತಾಂತ್ರಿಕವಾಗಿ ಮುನ್ನಡೆಸಬೇಕು. ಅಫ್ಘನ್ ಜನರನ್ನು ಕಾಪಾಡುವ ನಿಟ್ಟಿನಲ್ಲಿ ನಮ್ಮ ಶಕ್ತಿಮೀರಿ ಪ್ರಯತ್ನಿಸುತ್ತೇವೆ ಎಂದಿದ್ದಾರೆ.

south asia peace time to back modi us jim mattis

ಅಫ್ಘಾನಿಸ್ತಾನದಲ್ಲಿ ಶಾಂತಿ ನೆಲೆಸುವ ವಿಚಾರದಲ್ಲಿ ನೆರವು ನೀಡುವಂತೆ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬರೆದಿರುವ ಪತ್ರದ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡುತ್ತಿದ್ದರು.

ಮೊದಲ ಜಪಾನ್, ಅಮೆರಿಕ, ಇಂಡಿಯಾ ಸ್ನೇಹಕೂಟಕ್ಕೆ 'ಜೈ'ಹೋ ಎಂದ ಮೋದಿಮೊದಲ ಜಪಾನ್, ಅಮೆರಿಕ, ಇಂಡಿಯಾ ಸ್ನೇಹಕೂಟಕ್ಕೆ 'ಜೈ'ಹೋ ಎಂದ ಮೋದಿ

ಈ ಸಂದರ್ಭದಲ್ಲಿ ಅವರು ಶಾಂತಿ ಕಾಪಾಡುವ ಪ್ರಕ್ರಿಯೆಯಲ್ಲಿ ಪಾಕಿಸ್ತಾನದ ಪ್ರಯತ್ನದ ಬಗ್ಗೆ ಪ್ರಸ್ತಾಪಿಸದೆ ಮೋದಿ ಮತ್ತು ಅಫ್ಘನ್ ಅನ್ನು ಶ್ಲಾಘಿಸಿದ್ದಾರೆ.

English summary
US defence secretary Jim Mattis said, it is the time for everyone to support the efforts of the UN, Narendra Modi and Ashraf Ghani in maintaining peace in the South Asia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X