• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬ್ರೂಕ್ಲಿನ್ ಶೂಟೌಟ್‌: ನಾಲ್ಕು ಸಾವು, ಐದು ಮಂದಿಗೆ ಗಾಯ

|

ನ್ಯೂಯಾರ್ಕ್, ಅಕ್ಟೋಬರ್ 12: ಅಮೆರಿಕದ ನ್ಯೂಯಾರ್ಕ್‌ನಲ್ಲಿ ಮತ್ತೆ ಗುಂಡಿನ ಮೊರೆತ ಕೇಳಿದ್ದು, ಸಾರ್ವಜನಿಕ ಶೂಟ್‌ಔಟ್ ಒಂದಲ್ಲಿ ನಾಲ್ಕು ಮಂದಿ ಹತರಾಗಿದ್ದಾರೆ.

ನ್ಯೂಯಾರ್ಕ್‌ ಬಳಿ ಬ್ರೂಕ್ಲಿನ್ ನಗರದಲ್ಲಿ ಸೋಷಿಯಲ್ ಕ್ಲಬ್‌ ಒಂದರಲ್ಲಿ ಶೂಟ್‌ಔಟ್ ನಡೆದಿದ್ದು ನಾಲ್ಕು ಮಂದಿ ಮೃತರಾಗಿ ಹಲವರು ಗಾಯಗೊಂಡಿದ್ದಾರೆ. ಭಾರತೀಯ ಕಾಲಮಾನ ಶನಿವಾರ ಸಂಜೆ 4:30 ರ ಸುಮಾರಿಗೆ ಈ ಶೂಟ್‌ಔಟ್ ನಡೆದಿದೆ.

ಸ್ಥಳೀಯ ಪೊಲೀಸರ ಮಾಹಿತಿಯಂತೆ 74 ಯೂಟಿಕಾ ರಸ್ತೆಯಲ್ಲಿನ ಕ್ಲಬ್ ಒಂದರಲ್ಲಿ ಗುಂಡಿನ ದಾಳಿ ನಡೆದಿದ್ದು, ನಾಲ್ಕು ಜನ ಅಸುನೀಗಿದ್ದು, ಐದು ಮಂದಿ ಗಾಯಾಳುಗಳಾಗಿದ್ದಾರೆ.

ದಾಳಿಕೋರನ ಬಗ್ಗೆ ಮಾಹಿತಿಯನ್ನು ಪೊಲೀಸರು ನೀಡಿಲ್ಲ, ದಾಳಿಕೋರನನ್ನು ಬಂಧಿಸಲಾಗಿದ್ದು, ದಾಳಿಯ ಕಾರಣ ಬಹಿರಂಗಪಡಿಸಿಲ್ಲ.

ಅಮೆರಿಕದಲ್ಲಿ ಶೂಟ್‌ಔಟ್‌ಗಳು ಸಾಮಾನ್ಯ ಎನ್ನುವಂತಾಗಿಬಿಟ್ಟಿವೆ. ಬಂದೂಕು ನೀತಿ ಅತ್ಯಂತ ಸರಳವಾಗಿರುವ ಅಮೆರಿಕದಲ್ಲಿ ಒಂದು ನಿಯಮಿತ ವಯಸ್ಸು ಮೀರಿದ ಯಾರು ಬೇಕಾದರು ಕನಿಷ್ಟ ದಾಖಲೆಗಳನ್ನು ನೀಡಿ ಬಂದೂಕು ಖರೀದಿಸಬಹುದು. ಹಾಗಾಗಿ ಅಮೆರಿಕದಲ್ಲಿ ಶೂಟ್‌ಔಟ್‌ಗಳು ಸಾಮಾನ್ಯ ಎನ್ನುವಂತಾಗಿವೆ.

English summary
America's Brooklyn sees another shootout on Saturday morning. Four people dead and Five were injured.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X