ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಮತ್ತೆ ಶೂಟೌಟ್: ಐವರ ಸಾವು, 21 ಮಂದಿಗೆ ಗಾಯ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 1: ಅಮೆರಿಕದ ಪಶ್ಚಿಮ ಟೆಕ್ಸಾಸ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿದ್ದು ಐವರು ಮೃತಪಟ್ಟಿದ್ದು, 21ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದು ವರದಿಯಾಗಿದೆ.

ಸಿನಿಮಾ ಥಿಯೇಟರ್ ಪಾರ್ಕಿಂಗ್ ಬಳಿ ಘಟನೆ ನಡೆದಿದೆ. ಆತನ ತಾನು ಇದ್ದ ವಾಹನದಿಂದಲೇ ಗುಂಡಿನ ಸುರಿಮಳೆ ಗೈದಿದ್ದ, ಗನ್‌ಮ್ಯಾನ್ ಟ್ರಕ್‌ ಒಂದನ್ನು ಹೈಜಾಕ್ ಮಾಡಿದ್ದ ಇದರಲ್ಲಿ ಲಾ ಎನ್‌ಪೋರ್ಸ್‌ಮೆಂಟ್ ಅಧಿಕಾರಿಗಳಿಗೂ ಕೂಡ ಗಾಯಗಳಾಗಿವೆ ಎಂದು ಒಡೆಸ್ಸಾ ಪೊಲೀಸ್ ಅಧಿಕಾರಿ ಮೈಕೇಲ್ ತಿಳಿಸಿದ್ದಾರೆ.

shootout

ಶೂಟರ್ 30 ವರ್ಷ ಆಸುಪಾಸಿನವನಿರಬಹುದು ಎಂದು ಅಂದಾಜಿಸಲಾಗಿದೆ, ಈ ಘಟನೆಯು ಮಧ್ಯಾಹ್ನ 3.17ಕ್ಕೆ ನಡೆದಿದೆ. ಶೂಟರ್ ಮೊದಲು ಟ್ರಾಫಿಕ್ ಪೊಲೀಸರ ಮೇಲೆ ಗುಂಡು ಹಾರಿಸಿದ್ದ.

ಬಳಿಕ ಅಲ್ಲೇ ಇದ್ದ ಇನ್ನೊಬ್ಬ ವ್ಯಕ್ತಿಯ ಮೇಲೂ ಕೂಡ ಗುಂಡು ಹಾರಿಸಿದ್ದ. ಆತ ತನ್ನ ವಾಹನವನ್ನು ಬೇರೆಡೆ ನಿಲ್ಲಿಸಿ ಟ್ರಕ್‌ ಒಂದನ್ನು ಹೈಜಾಕ್ ಮಾಡಿಕೊಂಡು ಬಂದಿದ್ದ.

ವಾಟ್ಸ್ ಆಪ್ ಸ್ಟೇಟಸ್ ಜಗಳ; ಮಂಗಳೂರಿನಲ್ಲಿ ಯುವ ಕಾಂಗ್ರೆಸ್ ಮುಖಂಡನಿಂದ ಶೂಟೌಟ್ವಾಟ್ಸ್ ಆಪ್ ಸ್ಟೇಟಸ್ ಜಗಳ; ಮಂಗಳೂರಿನಲ್ಲಿ ಯುವ ಕಾಂಗ್ರೆಸ್ ಮುಖಂಡನಿಂದ ಶೂಟೌಟ್

ಸಿನಿಮಾ ಥಿಯೇಟರ್ ಬಳಿ ಬಂದಾಗ ಅಲ್ಲಿ ಹಲವು ಪೊಲೀಸ್ ವಾಹನಗಳು ಇರುವುದು ಕಣ್ಣಿಗೆ ಬಿದ್ದಿವೆ, ಬಳಿಕ ಪೊಲೀಸರು ಹಾಗೂ ಶೂಟರ್ ನಡುವೆ ಗುಂಡಿನ ದಾಳಿ ನಡೆದಿದೆ.

ಈ ಸಂದರ್ಭದಲ್ಲಿ ಶೂಟರ್ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೆಡಿಕಲ್ ಸೆಂಟರ್ ಆಸ್ಪತ್ರೆಯಲ್ಲಿ 14 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

English summary
A gunman in West Texas who killed five people while firing from his vehicle and then from a hijacked mail truck was shot and killed by police in a gun battle in a movie theater parking lot, authorities said Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X