• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ಮುಗೀತು, ಬರಗಾಲ ಶುರುವಾಯ್ತು! ಜನರಿಗೆ ಜೀವಜಲ ಸಿಗಲ್ವಾ?

|
Google Oneindia Kannada News

ನಾನು ಸೂಪರ್ ಪವರ್ ಅಂತಾ ವಿಶ್ವದ ಎದುರು ಎದೆಯುಬ್ಬಿಸಿ ನಿಲ್ಲುತ್ತಿದ್ದ ಅಮೆರಿಕ ಪರಿಸ್ಥಿತಿ ಈಗ ಅತ್ಯಂತ ಹೀನಾಯವಾಗಿದೆ. ಕೊರೊನಾ ಕಂಟಕದ ಬಳಿಕ ಅಮೆರಿಕ ತತ್ತರಿಸಿ ಹೋಗಿದ್ದು, ಈವರೆಗೆ 6 ಲಕ್ಷಕ್ಕೂ ಹೆಚ್ಚು ಅಮೆರಿಕನ್ನರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ವಿಷಯ ಅದಲ್ಲ ಅಸಲಿ ಆಟ ಈಗ ಶುರುವಾಗುತ್ತಿದೆ. ಅಮೆರಿಕದಲ್ಲಿ ಕೊರೊನಾ ಅಬ್ಬರ ಮುಗಿಯುವ ಮೊದಲೇ ಭೀಕರ ಬರಗಾಲವೂ ಎದುರಾಗಿದೆ. ಕೋಟ್ಯಂತರ ಜನ ನೀರಿಲ್ಲದೆ ನರಳಾಡುವ ಸ್ಥಿತಿ ಬಂದಿದೆ. ಅದರಲ್ಲೂ ಅಮೆರಿಕದ ಪಶ್ಚಿಮದ ರಾಜ್ಯಗಳಲ್ಲಿ ಈ ಬಾರಿ ಭೀಕರ ಬರಗಾಲದ ಮುನ್ಸೂಚನೆ ಸಿಕ್ಕಿದೆ.

ಕ್ಯಾಲಿಫೋರ್ನಿಯಾ ಸೇರಿದಂತೆ ಪಶ್ಚಿಮ ಭಾಗದ ಹಲವು ರಾಜ್ಯಗಳ ಡ್ಯಾಂನ ನೀರು ಬತ್ತಿ ಹೋಗಿದ್ದು, ಜೀವಜಲ ತಳ ಸೇರಿದೆ. ಸಾವಿರಾರು ವರ್ಷಗಳಿಂದ ಕಾಣದಂತಹ ಬರ ಪರಿಸ್ಥಿತಿ ಈಗ ಎದುರಾಗಿದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಈಗಿನ್ನೂ ಕೊರೊನಾ ಸಂಕೋಲೆಯಿಂದ ಹೊರಬರುತ್ತಿರುವಾಗ ದೊಡ್ಡ ಆಪತ್ತು ಎದುರಾಗಿದೆ.

ಮಳೆ ಅಭಾವ ಹಾಗೂ ತೀವ್ರ ಬಿಸಿಲು ನೀರಿನ ಕೊರತೆಗೆ ಕಾರಣ ಎನ್ನಲಾಗಿದೆ. ಅಲ್ಲದೆ ಲಕ್ಷಾಂತರ ಕೋಟಿ ರೂಪಾಯಿ ಮೊತ್ತದ ಕೃಷಿ ಪದಾರ್ಥಗಳ ಮೇಲೂ ಈ ಬರಗಾಲ ತನ್ನ ಪರಿಣಾಮ ಬೀರಲಿದೆ. ರೈತರ ಬದುಕು ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ ಎಂದು ವಾರ್ನಿಂಗ್ ನೀಡಲಾಗಿದೆ.

1400 ವರ್ಷದಲ್ಲೇ ಭೀಕರ ಬರಗಾಲ

1400 ವರ್ಷದಲ್ಲೇ ಭೀಕರ ಬರಗಾಲ

ಕಳೆದ 20 ವರ್ಷಗಳಿಂದಲೂ ಕ್ಯಾಲಿಫೋರ್ನಿಯಾದ ಡ್ಯಾಂಗಳಲ್ಲಿ ನೀರಿನ ಪ್ರಮಾಣ ಇಳಿಕೆ ಕಾಣುತ್ತಿದೆ. ಆದರೆ ಈ ಬಾರಿ 1400 ವರ್ಷದಲ್ಲೇ ಕಾಣದಷ್ಟು ಬರಗಾಲ ಎದುರಾಗಿದೆ. ಕೃಷಿ ಭೂಮಿ ಒಣಗಿ ನಿಂತಿದ್ದರೂ ನೀರನ್ನು ಸರಬರಾಜು ಮಾಡಲು ಆಗುತ್ತಿಲ್ಲ. ಇದನ್ನ ಬಿಡಿ ಮುಂದಿನ ದಿನಗಳಲ್ಲಿ ಕ್ಯಾಲಿಫೋರ್ನಿಯಾ ರಾಜ್ಯದ ಜನರಿಗೆ ಕುಡಿಯುವ ನೀರು ಸಿಗೋದೆ ಅನುಮಾನವಾಗಿದೆ. ಹೀಗಾಗಿ ಬೈಡನ್ ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳಬೇಕು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ತಜ್ಞರು ಮುನ್ನೆಚ್ಚರಿಕೆ ನೀಡಿದ್ದಾರೆ. ಈಗ ನಿರ್ಲಕ್ಷ್ಯ ಮಾಡಿದ್ರೆ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ.

ಕೃಷಿಕರ ಬದುಕು ಬೀದಿಗೆ

ಕೃಷಿಕರ ಬದುಕು ಬೀದಿಗೆ

ನೀವು ಕೇಳಿರಬಹುದು ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಬೆಳೆಯುವ ಬಾದಾಮಿಗೆ ಭಾರಿ ಡಿಮ್ಯಾಂಡ್ ಇದೆ. ಈ ಬಾದಾಮಿ ಬೆಳೆಗೆ ತನ್ನದೇ ಮಾನ್ಯತೆ ಹಾಗೂ ವೈಶಿಷ್ಟ್ಯತೆ ಕೂಡ ಇದೆ. ಅದರಲ್ಲೂ ಕ್ಯಾಲಿಫೋರ್ನಿಯಾ ರಾಜ್ಯದ ಬಾದಾಮಿ ಬೆಳೆಗಾರರು, ತಮ್ಮ ತಮ್ಮಲ್ಲಿ ಸಾಕಷ್ಟು ನಿಯಮ ಹಾಕಿಕೊಂಡಿದ್ದಾರೆ. ಬಾದಾಮಿ ಬೆಳೆಯಲು ಇದೇ ನೀರನ್ನು ಬಳಸಬೇಕು, ಕುಡಿಯುವ ನೀರನ್ನೇ ಉಪಯೋಗಿಸಬೇಕು. ಗುಣಮಟ್ಟ ಕೆಡದಂತೆ ಕಾಪಾಡಿಕೊಂಡು ಬರಬೇಕು. ಹೀಗೆ ಹಲವು ನಿಯಮ ಹಾಕಿಕೊಂಡು ಉತ್ತಮವಾಗಿ ‘ಬಾದಾಮಿ' ಬೆಳೆಯುತ್ತಾರೆ. ಹೀಗಾಗಿಯೇ ಕ್ಯಾಲಿಫೋರ್ನಿಯಾ ಬಾದಾಮಿಗೆ ಜಗತ್ತಿನಾದ್ಯಂತ ಭಾರಿ ಬೇಡಿಕೆ ಇದೆ. ಆದ್ರೆ ಈ ಬಾರಿ ಎದುರಾದ ಬರಗಾಲ ಸುಮಾರು ಅರ್ಧಲಕ್ಷ ಕೋಟಿ ಅಂದರೆ 50 ಸಾವಿರ ಕೋಟಿ ರೂಪಾಯಿಯಷ್ಟು ನಷ್ಟ ಉಂಟುಮಾಡಿದೆ.

ಕುಡಿವ ನೀರಿಗೂ ಪರದಾಟ

ಕುಡಿವ ನೀರಿಗೂ ಪರದಾಟ

ಅಮೆರಿಕ ಹೆಸರಿಗೆ ಮಾತ್ರ ಶ್ರೀಮಂತ ರಾಷ್ಟ್ರ, ಆದರೆ ದೊಡ್ಡ ದೊಡ್ಡ ನಗರಗಳನ್ನ ಬಿಟ್ಟು ಸಣ್ಣಪುಟ್ಟ ಪ್ರದೇಶಗಳ ಪಾಡು ಹೇಳತೀರದು. ಕುಡಿಯುವ ನೀರಿನ ವ್ಯವಸ್ಥೆ ಗಬ್ಬೆದ್ದು ಹೋಗಿದೆ. ಜನವಸತಿ ಪ್ರದೇಶಕ್ಕೆ ಸಪ್ಲೈ ಆಗುವ ನೀರಲ್ಲಿ ಹಾವು, ಕಪ್ಪೆ ಹೀಗೆ ನಾನಾ ಅತಿಥಿಗಳ ಹೆಣ ಮನೆ ಕೊಳಾಯಿ ಮೂಲಕ ಬಂದು ಬೀಳುತ್ತಿದೆ. ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮಿದುಳು ತಿನ್ನುವ ಅಮೀಬಾ ಸೇರಿದಂತೆ ಹಲವು ಕಂಟಕಗಳು ಅಮೆರಿಕದ ನಿವಾಸಿಗಳನ್ನ ಕಾಡುತ್ತಿದೆ. ಹಾಳಾಗಿ ಹೋಗಲಿ ಅದೇ ಕೊಳಕು ನೀರನ್ನ ಬಳಸೋಣ ಅಂದ್ರೂ, ಈಗ ಅದಕ್ಕೂ ಕಲ್ಲು ಹಾಕಿದ್ದಾನೆ ಮಳೆರಾಯ.

ರಸ್ತೆ, ನೀರಿಗೆ 1.7 ಟ್ರಿಲಿಯನ್..!

ರಸ್ತೆ, ನೀರಿಗೆ 1.7 ಟ್ರಿಲಿಯನ್..!

ಮೂಲ ಸೌಕರ್ಯ ಅಂದ್ರೆ ಮನುಷ್ಯ ಬದುಕಲು ಅತ್ಯಗತ್ಯವಾಗಿರುವ ಕುಡಿಯುವ ನೀರು, ಉತ್ತಮ ರಸ್ತೆಗಳ ನಿರ್ಮಾಣ ಹೀಗೆ ಹಲವು ವಿಭಾಗಗಳಿಗೆ ಬಜೆಟ್‌ನಲ್ಲಿ ಹೆಚ್ಚು ಹಣ ನೀಡಲು ಜೋ ಬೈಡನ್ ನಿರ್ಧರಿಸಿದ್ದಾರೆ. ಬೈಡನ್ ಲೆಕ್ಕಾಚಾರದ ಪ್ರಕಾರ ಮೂಲ ಸೌಕರ್ಯ ಕ್ಷೇತ್ರಕ್ಕೆ 1.7 ಟ್ರಿಲಿಯನ್ ಡಾಲರ್‌ಗೆ ಫಿಕ್ಸ್ ಆಗಿದೆ. ಈ ಮೂಲಕ ಇಡೀ ಅಮೆರಿಕದ ಇತಿಹಾಸದಲ್ಲೇ ಮೂಲ ಸೌಕರ್ಯ ಮತ್ತೊಮ್ಮೆ ಅತ್ಯುನ್ನತ ಮಟ್ಟಕ್ಕೆ ಏರಿಸೋಕೆ ತಯಾರಿ ನಡೆಸಿದ್ದಾರೆ ಬೈಡನ್. ಆದರೆ ಇದೀಗ ಬರಗಾಲ ಎದುರಾಗಿದ್ದು, ಇದನ್ನೆಲ್ಲಾ ಸರಿಯಾಗಿ ನಿಭಾಯಿಸಿ, ಅಮೆರಿಕನ್ನರ ದಾಹ ತೀರಿಸಬೇಕಾದ ಜವಾಬ್ದಾರಿ ಬೈಡನ್ ಮೇಲಿದೆ.

English summary
After struggling against Coronavirus now several American states hit by deadly drought.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X