ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಿಂದ ಡ್ರೋನ್ ದಾಳಿ: ಅಲ್‌-ಖೈದಾ ಹಿರಿಯ ನಾಯಕ ಸಾವು

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 23: ಅಮೆರಿಕದ ಡ್ರೋನ್ ದಾಳಿಯಲ್ಲಿ ಅಲ್‌-ಖೈದಾ ಹಿರಿಯ ನಾಯಕ ಮೃತಪಟ್ಟಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.

ವಾಯುವ್ಯ ಸಿರಿಯಾದಲ್ಲಿ ಅಲ್-ಖೈದಾ ಹಿರಿಯ ನಾಯಕ ಅಬ್ದುಲ್ ಹಮೀದ್ ಅಲ್-ಮತಾರ್​ನನ್ನು ಯುಎಸ್ ಮಿಲಿಟರಿ ವೈಮಾನಿಕ ದಾಳಿ ನಡೆಸಿ ಕೊಂದು ಹಾಕಿದೆ ಎಂದು ಸೆಂಟ್ರಲ್ ಕಮಾಂಡ್ (CENTCOM) ವಕ್ತಾರ ಮೇಜರ್ ಜಾನ್ ರಿಗ್ಸ್​ಬೀ ಶುಕ್ರವಾರ ಹೇಳಿದ್ದಾರೆ.

 ಡಮಾಸ್ಕಸ್‌ನಲ್ಲಿ ಸೇನಾ ಬಸ್ ಮೇಲೆ ಬಾಂಬ್ ದಾಳಿ: 14 ಮಂದಿ ಸಾವು ಡಮಾಸ್ಕಸ್‌ನಲ್ಲಿ ಸೇನಾ ಬಸ್ ಮೇಲೆ ಬಾಂಬ್ ದಾಳಿ: 14 ಮಂದಿ ಸಾವು

ತಾಯ್ನಾಡಿಗೆ ಹಾನಿ ಮಾಡುವ ಉದ್ದೇಶ ಹೊಂದಿರುವ ಅಲ್-ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳ ಸದಸ್ಯರನ್ನು ಗುರಿಯಾಗಿಸುವುದನ್ನು ಅಮೆರಿಕ ಮುಂದುವರಿಸುತ್ತದೆ ಎಂದು ರಿಗ್ಸ್​ಬೀ ಹೇಳಿದರು.

Senior Al-Qaeda Leader Killed In US Drone Strike In Syria: Pentagon

MQ-9 ವಿಮಾನವನ್ನು ಬಳಸಿ ನಡೆಸಲಾದ ವೈಮಾನಿಕ ದಾಳಿಯಲ್ಲಿ ನಾಗರಿಕರ ಸಾವುನೋವಿನ ಬಗ್ಗೆ ಯಾವುದೇ ಮಾಹಿತಿಗಳಿಲ್ಲ. ಅಲ್-ಖೈದಾ ಸಿರಿಯಾವನ್ನು ಪುನರ್​ ನಿರ್ಮಾಣ ಮಾಡಲು, ಬಾಹ್ಯ ಅಂಗಸಂಸ್ಥೆಗಳೊಂದಿಗೆ ಸಂಯೋಜಿಸಲು ಮತ್ತು ಬಾಹ್ಯ ಕಾರ್ಯಾಚರಣೆಗಳನ್ನು ಯೋಜಿಸಲು ಸುರಕ್ಷಿತ ತಾಣವಾಗಿ ಬಳಸುತ್ತದೆ.

ಭಯೋತ್ಪಾದಕ ಸಂಘಟನೆಯು ಅಮೆರಿಕದ ನಾಗರಿಕರು, ನಮ್ಮ ಪಾಲುದಾರರು ಮತ್ತು ಮುಗ್ಧ ನಾಗರಿಕರನ್ನು ಬೆದರಿಸುವ ಕೆಲಸ ಮಾಡುತ್ತಿದೆ ಹೇಳಿದರು.

ಸಿರಿಯಾದಲ್ಲಿ ಎರಡು ದಿನಗಳ ಹಿಂದಷ್ಟೇ ಬಾಂಬ್ ದಾಳಿ ನಡೆದಿತ್ತು: ಡಮಾಸ್ಕಸ್‌ನಲ್ಲಿ ಸೇನಾ ಬಸ್‌ ಮೇಲೆ ನಡೆದ ಬಾಂಬ್ ದಾಳಿಯಲ್ಲಿ 14 ಜನರು ಸಾವನ್ನಪ್ಪಿದ್ದಾರೆ. ಸಿರಿಯಾ ರಾಜಧಾನಿಯಲ್ಲಿ ನಾಲ್ಕು ವರ್ಷಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿ ಇದಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿ ಬುಧವಾರ ಬೆಳಿಗ್ಗೆ ಎರಡು ಸ್ಫೋಟಕ ಸಾಧನಗಳನ್ನು ಬಳಸಿ ಈ ದಾಳಿ ಎಸಗಲಾಗಿದೆ.

ಘಟನೆಯಲ್ಲಿ ಮೂವರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಸನಾ ತಿಳಿಸಿದೆ. ಹಫೇಜ್ ಅಲ್ ಅಸ್ಸಾದ್ ಸೇತುವೆಯಲ್ಲಿ ಮೂರನೇ ಸ್ಫೋಟಕ ಕೂಡ ಪತ್ತೆಯಾಗಿತ್ತು. ಆದರೆ ಅದನ್ನು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.

ಬಸ್‌ನ ಛಿದ್ರಗೊಂಡ ಭಾಗಗಳನ್ನು ಸಿರಿಯಾ ಸುದ್ದಿ ವಾಹಿನಿ ತೋರಿಸಿದೆ. ರಕ್ಷಣಾ ಕಾರ್ಯಕರ್ತರು ಹರಡಿ ಬಿದ್ದಿದ್ದ ಮೃತದೇಹಗಳ ಅಂಗಗಳನ್ನು ಆಯ್ದುಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ. ಈ ವರ್ಷ ಸಿರಿಯಾ ಸೇನೆ ಹಾಗೂ ನಾಗರಿಕರನ್ನು ಗುರಿಯಾಗಿಸಿ ಅನೇಕ ದಾಳಿಗಳು ನಡೆದಿವೆ.

ಸಿರಿಯಾದ ಕುರ್ದಿಗಳು ಸ್ವ-ಆಡಳಿತದ ಹಕ್ಕನ್ನು ಬಯಸುತ್ತಾರೆ ಆದರೆ ಅಸ್ಸಾದ್ ಪಡೆಗಳೊಂದಿಗೆ ಹೋರಾಡಲು ಬಯಸುವುದಿಲ್ಲ. ಆದರೂ ಈ ಸಂಘರ್ಷದಲ್ಲಿ 205,300 ಜನರು ಕಾಣೆಯಾಗಿರಬಹುದು ಅಥವಾ ಸಾವನ್ನಪ್ಪಿನ್ನಪ್ಪಿರಬಹುದು ಎಂದು ಹೇಳಲಾಗುತ್ತದೆ. ಜೊತೆಗೆ 88,000 ನಾಗರಿಕರು ಅಸಾದ್ ಸರ್ಕಾರಿ ನಡೆಸುತ್ತಿರುವ ಜೈಲುಗಳಲ್ಲಿ ಚಿತ್ರಹಿಂಸೆಯಿಂದ ಸಾವನ್ನಪ್ಪಿದ್ದಾರೆ ಎಂದು ನಂಬಲಾಗಿದೆ. ಜೊತೆಗೆ UN ಮಕ್ಕಳ ಸಂಸ್ಥೆ ಯುನಿಸೆಫ್ ಪ್ರಕಾರ, ಸುಮಾರು 12,000 ಮಕ್ಕಳು ಕೊಲ್ಲಲ್ಪಟ್ಟಿದ್ದಾರೆ.

ಮುಖ್ಯವಾಗಿ ಸೇನಾ ವಾಹನಗಳನ್ನು ಗುರಿಯಾಗಿಸಿ ದಾಳಿಗಳು ನಡೆಯುತ್ತಿವೆ. ಐಸಿಸ್ ಉಗ್ರರು ಈ ಕೃತ್ಯ ಎಸಗಿರುವ ಬಗ್ಗೆ ಶಂಕೆ ಶಂಕೆ ವ್ಯಕ್ತವಾಗಿದೆ. ಐಸಿಸ್ ಸಂಘಟನೆ ಈಗಲೂ ಅನೇಕ ಭಾಗಗಳಲ್ಲಿ ಸಕ್ರಿಯವಾಗಿದೆ.

10 ವರ್ಷಗಳ ಹಿಂದೆ ಸಿರಿಯಾದ ಅಧ್ಯಕ್ಷರ ವಿರುದ್ಧ ನಡೆದ ಶಾಂತಿಯುತ ದಂಗೆಯು ಪೂರ್ಣ ಪ್ರಮಾಣದ ಅಂತರ್ಯುದ್ಧವಾಗಿ ಬದಲಾಯಿದೆ. ಈ ಸಂಘರ್ಷದಿಂದಾಗಿ ಈವರೆಗೆ 3,80,000 ಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದಾರೆ. ಜೊತೆಗೆ ಕೆಲ ನಗರಗಳನ್ನೇ ಧ್ವಂಸಗೊಳಿಸಲಾಗಿದೆ. ಹಲವಾರು ಜನ ಮನೆ ತೊರೆದಿದ್ದಾರೆ.

ಅಮೆರಿಕಕ್ಕೆ ತಿರುಗೇಟು ನೀಡಿದ ಚೀನಾ: ತೈವಾನ್ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಲ್ಲ ಎಂದು ಚೀನಾ ಮತ್ತೊಮ್ಮೆ ಪುನರುಚ್ಛರಿಸಿದೆ. ದ್ವೀಪದ ಬಳಿ ಯುದ್ಧ ವಿಮಾನಗಳನ್ನು ಹಾರಿಸುವ ಮೂಲಕ ಮತ್ತು ಕಡಲತೀರದಲ್ಲಿ ವಿಮಾನಗಳನ್ನು ಇಳಿಸುವಿಕೆ ಅಭ್ಯಾಸ ಮಾಡುವ ಮೂಲಕ ತೈವಾನ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಚೀನಾ ಹೆಚ್ಚಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್​​ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್​ ವೆನ್​ಬಿನ್​, ದ್ವೀಪವು ನಮ್ಮ ಪ್ರದೇಶವಾಗಿದೆ ಎಂದು ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ.

ತೈವಾನ್, ಚೀನಾ ಭೂ ಪ್ರದೇಶದ ಬೇರ್ಪಡಿಸಲಾಗದ ಭಾಗವಾಗಿದೆ. ತೈವಾನ್ ಸಮಸ್ಯೆಯು ಚೀನಾದ ಆಂತರಿಕ ವ್ಯವಹಾರವಾಗಿದ್ದು, ಅದು ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಅನುಮತಿಸುವುದಿಲ್ಲ ಎಂದು ವಾಂಗ್ ಪರೋಕ್ಷವಾಗಿ ಅಮೆರಿಕಕ್ಕೆ ತಿರುಗೇಟು ನೀಡಿದ್ರು.

ಅಮೆರಿಕವು, ತೈವಾನ್ ವಿಚಾರದಲ್ಲಿ ತನ್ನ ಮಾತುಗಳು ಮತ್ತು ಕಾರ್ಯಗಳ ಬಗ್ಗೆ ಜಾಗರೂಕರಾಗಿರಬೇಕು. ತೈವಾನ್ ಸ್ವಾತಂತ್ರ್ಯದ ಪ್ರತ್ಯೇಕತಾವಾದಿ ಪಡೆಗಳಿಗೆ ಯಾವುದೇ ತಪ್ಪು ಸಂದೇಶಗಳನ್ನು ಕಳುಹಿಸಬಾರದು. ತೈವಾನ್​ನಲ್ಲಿ ಗಲಭೆ ಸೃಷ್ಟಿಗೆ ಅಮೆರಿಕ ಯತ್ನಿಸಬಾರದು ಎಂದು ವಾಂಗ್ ಎಚ್ಚರಿಸಿದರು.

English summary
The US military killed senior al-Qaeda leader Abdul Hamid al-Matar in a drone strike in Syria on Friday, a US Central Command spokesman said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X