• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅತಿ ಪ್ರಬಲವಾದ ಕೊರೊನಾ ಲಸಿಕೆ ಅಭ್ಯರ್ಥಿಯನ್ನು ಅಭಿವೃದ್ಧಿಪಡಿಸಿದ ವಿಜ್ಞಾನಿಗಳು

|

ವಾಷಿಂಗ್ಟನ್, ನವೆಂಬರ್ 04: ವಿಜ್ಞಾನಿಗಳು ಕೊವಿಡ್ 19 ನಿರ್ಮೂಲನೆಗಾಗಿ ಅತಿ ಪ್ರಬಲವಾದ ಲಸಿಕೆ ಅಭ್ಯರ್ಥಿಯನ್ನು ಅಭಿವೃದ್ಧಿಪಡಿಸಿದ್ದಾರೆ.

ಇದು ಅತ್ಯಂತ ಉನ್ನತ ಮಟ್ಟದ ರಕ್ಷಣಾತ್ಮಕ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಇದು ಸಾಂಕ್ರಾಮಿಕ ರೋಗವನ್ನು ನಿಗ್ರಹಿಸಲು ಇದು ಕಾರಣವಾಗಬಹುದು.

ಮುಂದಿನ 6 ತಿಂಗಳಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ: ಹರ್ಷವರ್ಧನ್ಮುಂದಿನ 6 ತಿಂಗಳಲ್ಲಿ ಭಾರತದಲ್ಲಿ ಕೊರೊನಾ ಲಸಿಕೆ ವಿತರಣೆ: ಹರ್ಷವರ್ಧನ್

ಯುಎಸ್‌ನ ವಾಷಿಂಗ್ಟನ್ ವಿಶ್ವವಿದ್ಯಾಲಯ ಸ್ಕೂಲ್ ಆಫ್ ಮೆಡಿಸಿನ್ ಸಂಶೋಧಕರ ಪ್ರಕಾರ ಈ ಲಸಿಕೆಯು ಮನುಷ್ಯರಲ್ಲಿ ಹೆಚ್ಚು ಪರಿಣಾಮ ಬೀರುವುದಕ್ಕಿಂತ ಹೆಚ್ಚಿನ ಮಟ್ಟದಲ್ಲಿ ಇಲಿಗಳಲ್ಲಿ ವೈರಸ್‌ನ್ನು ತಟಸ್ಥಗೊಳಿಸಿ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ. ಮುಂದಿನ ದಿನಗಳಲ್ಲಿ ಮನುಷ್ಯರ ಮೇಲೂ ಪ್ರಯೋಗ ನಡೆಸಬಹುದಾಗಿದೆ ಎಂದು ಹೇಳಿದ್ದಾರೆ.

ಜರ್ನಲ್‌ ಸೆಲ್‌ನಲ್ಲಿ ಪ್ರಕಟವಾದ ಅಧ್ಯಯನವು ಬೇರೆ ಲಸಿಕೆಗಳಿಗಿಂತ ಆರು ಪಟ್ಟು ಕಡಿಮೆ ಡೋಸ್‌ಗಳನ್ನು ನೀಡಿದರೂ ಕೂಡ ಇಲಿಗಳಲ್ಲಿ ಹತ್ತು ಪಟ್ಟು ಹೆಚ್ಚು ವೈರಸ್‌ಗಳನ್ನು ತಟಸ್ಥಗೊಳಿಸುವ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ.

ಹಾಗೆಯೇ ಈ ಲಸಿಕೆಯಿಂದ ವೈರಸ್ ರೂಪಾಂತರಗೊಳ್ಳುವುದನ್ನು ಕೂಡ ತಡೆಯುತ್ತದೆ.

ಇನ್ನು ಭಾರತದ ವಿಷಯಕ್ಕೆ ಬಂದರೆ ಮೂರು ಕೊರೊನಾ ಲಸಿಕೆಗಳ ಪ್ರಯೋಗ ಪ್ರಗತಿಯಲ್ಲಿದೆ, ದೇಶದ ಪ್ರತಿಯೊಬ್ಬ ನಾಗರಿಕರಿಗೂ ಕೊರೊನಾ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಲಾಗುತ್ತದೆ ಎಂದು ಪ್ರಧಾನ ಮೋದಿ ದೇಶದ ಜನತೆಗೆ ವಾಗ್ದಾನ ನೀಡಿದ್ದಾರೆ.

ದೇಶದ ಪ್ರತಿಯೊಂದು ಮೂಲೆಗೆ ಲಸಿಕೆ ತಲುಪಿಸುವ ಮಹತ್ವದ ಕಾರ್ಯಕ್ಕಾಗಿ ದೇಶಾದ್ಯಂತ 28 ಸಾವಿರಕ್ಕೂ ಹೆಚ್ಚು ಶೀಥಲಗೃಹಗಳ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದಿದ್ದು, ಯಾರು ಮುಂದಿನ ಅಧ್ಯಕ್ಷರಾಗಲಿದ್ದಾರೆ ಎನ್ನುವ ಕುತೂಹಲವು ದಟ್ಟವಾಗಿದೆ.

English summary
Scientists have developed a vaccine candidate for COVID-19 that produces "extremely high levels" of protective antibodies in animal models, an advance that may lead to a novel therapeutic to curb the pandemic.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X