ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹವಾಮಾನ ವೈಪರೀತ್ಯದ ಬಗ್ಗೆ ವಿಜ್ಞಾನಕ್ಕೆ ಏನೂ ಗೊತ್ತಿಲ್ಲ: ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 15: ಹವಾಮಾನ ವೈಪರೀತ್ಯದ ಕುರಿತು ವಿಜ್ಞಾನಿಗಳ ಗ್ರಹಿಕೆ ಮತ್ತು ಅಧ್ಯಯನದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಜಾಗತಿಕ ಹವಾಮಾನ ಶೀಘ್ರದಲ್ಲಿಯೇ ತಣ್ಣಗಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಸಂವಾದವೊಂದರಲ್ಲಿ ಮಾತನಾಡಿರುವ ಡೊನಾಲ್ಡ್ ಟ್ರಂಪ್, ವಾತಾವರಣವು ತಣ್ಣಗಾಗುತ್ತಿದೆ. ಕಾದು ನೋಡಿ. ಬಹುಶಃ ವಿಜ್ಞಾನಕ್ಕೆ ಇದು ತಿಳಿದಿದೆ ಎನಿಸುತ್ತಿಲ್ಲ ಎಂದಿದ್ದಾರೆ.

ಅದ್ಭುತ ಕೆಲಸ ಮಾಡಿದ್ದೀರಿ ಎಂದು ಮೆಚ್ಚಿದ ಮೋದಿ: ಡೊನಾಲ್ಡ್ ಟ್ರಂಪ್ ಹೇಳಿಕೆಅದ್ಭುತ ಕೆಲಸ ಮಾಡಿದ್ದೀರಿ ಎಂದು ಮೆಚ್ಚಿದ ಮೋದಿ: ಡೊನಾಲ್ಡ್ ಟ್ರಂಪ್ ಹೇಳಿಕೆ

'ವಾತಾವರಣದ ಬದಾಲವಣೆಯನ್ನು ನೀವು ಗಮನಿಸಬೇಕು ಎಂದು ಕೋರುತ್ತೇವೆ. ಮುಖ್ಯವಾಗಿ ನಮ್ಮ ಕಾಡುಗಳ ಮೇಲೆ ಅದರ ಪರಿಣಾಮ ಗುರುತಿಸಬೇಕು. ನಾವು ವಿಜ್ಞಾನದ ಜತೆಗೂಡಿ ಕೆಲಸ ಮಾಡುತ್ತಿದ್ದೇವೆ. ಇಲ್ಲಿ ವಿಜ್ಞಾನ ಬಹಳ ಮುಖ್ಯ. ಏಕೆಂದರೆ ನಾವು ವಿಜ್ಞಾನವನ್ನು ಅಲಕ್ಷಿಸಿದರೆ, ಇದೆಲ್ಲವೂ ನಿಸರ್ಗದ ಪ್ರಕ್ರಿಯೆ ಎಂದುಕೊಂಡರೆ ಕ್ಯಾಲಿಫೋರ್ನಿಯಾವನ್ನು ರಕ್ಷಿಸುವುದರಲ್ಲಿ ಸಫಲರಾಗುವುದಿಲ್ಲ' ಎಂದು ಕ್ಯಾಲಿಫೋರ್ನಿಯಾದ ನೈಸರ್ಗಿಕ ಸಂಪನ್ಮೂಲಗಳ ಕಾರ್ಯದರ್ಶಿ ವೇಡ್ ಕ್ರೌಫೂಟ್ ಹೇಳಿದ್ದರು.

 Science Doesnt Know About Climate Change: Donald Trump

ಈ ಹೇಳಿಕೆಗೆ ಅಸಮ್ಮತಿ ಸೂಚಿಸಿರುವ ಡೊನಾಲ್ಡ್ ಟ್ರಂಪ್, ಕ್ಯಾಲಿಫೋರ್ನಿಯಾದಲ್ಲಿ ಉರಿಯುತ್ತಿರುವ ಕಾಳ್ಗಿಚ್ಚು ತಾನಾಗಿಯೇ ತಣ್ಣಗಾಗಲಿದೆ ಎಂದಿದ್ದರು. ಅದಕ್ಕೆ ಕ್ರೌಫೂಟ್, 'ವಿಜ್ಞಾನ ನಿಮ್ಮ ಹೇಳಿಕೆಯನ್ನು ಒಪ್ಪಿಕೊಳ್ಳಲಿದೆ ಎಂದು ಭರವಸೆ ಹೊಂದಿದ್ದೇನೆ' ಎಂದು ಹೇಳಿದ್ದರು. ಅದಕ್ಕೆ ಟ್ರಂಪ್, 'ಇದು ವಿಜ್ಞಾನಕ್ಕೆ ತಿಳಿದಿದೆ ಎಂದು ನನಗನಿಸುತ್ತಿಲ್ಲ' ಎಂದಿದ್ದಾರೆ.

ಭೀಕರ ಕಾಡ್ಗಿಚ್ಚು: ಸುಟ್ಟು ಹೋದ ಮನೆ, ಬೀದಿಗೆ ಬಿತ್ತು ಬದುಕು..!ಭೀಕರ ಕಾಡ್ಗಿಚ್ಚು: ಸುಟ್ಟು ಹೋದ ಮನೆ, ಬೀದಿಗೆ ಬಿತ್ತು ಬದುಕು..!

ಕ್ಯಾಲಿಫೋರ್ನಿಯಾ ಮತ್ತು ಒರೆಗಾನ್‌ನಲ್ಲಿನ ಕಾಳ್ಗಿಚ್ಚಿನ ಪ್ರಕೋಪಕ್ಕೆ ಅರಣ್ಯವನ್ನು ಸೂಕ್ತವಾಗಿ ನೋಡಿಕೊಳ್ಳದಿರುವುದೇ ಕಾರಣ ಎಂದು ಟ್ರಂಪ್ ಹೇಳಿದ್ದಾರೆ. 'ಉರುಳಿ ಬಿದ್ದ ಮರಗಳು ಕೆಲವು ಸಮಯದಲ್ಲಿಯೇ ಬಹಳ ಒಣಗಿ ಹೋಗುತ್ತವೆ. ಅವು ಬೆಂಕಿ ಕಡ್ಡಿಯಂತಾಗಿರುತ್ತವೆ. ಅವು ಸ್ಫೋಟಗೊಳ್ಳಬಹುದು. ಹಾಗೆಯೇ ಎಲೆಗಳು ಕೂಡ. ನೆಲದಲ್ಲಿ ಒಣಗಿದ ಎಲೆಗಳಿದ್ದರೆ ಬೆಂಕಿಗೆ ತೈಲ ಸುರಿದಂತೆ ಎಂದು ಟ್ರಂಪ್ ತಿಳಿಸಿದ್ದಾರೆ.

English summary
US President Donald Trump said, the science doesn't know about climate change and it would soon get cooler.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X