ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ ರಾಜಕುಮಾರನ ಆದೇಶದಂತೆಯೇ ಖಶೋಗ್ಗಿ ಕೊಲೆ: ಅಮೆರಿಕ ವರದಿ ಆರೋಪ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 27: ಅಮೆರಿಕದ ಗುಪ್ತಚರ ವಿಭಾಗವು 'ವಾಷಿಂಗ್ಟನ್ ಪೋಸ್ಟ್' ಪತ್ರಕರ್ತ ಜಮಾಲ್ ಖಶೋಗ್ಗಿ ಅವರ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ಬಹಿರಂಗಪಡಿಸಿದ್ದು, ಈ ಕೊಲೆಯಲ್ಲಿ ತಮ್ಮ ಕೈವಾಡವನ್ನು ಸೌದಿ ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಒಪ್ಪಿಕೊಂಡಿದ್ದಾರೆ ಎಂದು ಮೊದಲ ಬಾರಿ ಸಾರ್ವಜನಿಕವಾಗಿ ಆರೋಪಿಸಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಸೌದಿ ರಾಜ ಸಲ್ಮಾನ್ ಜತೆ ನಡೆಸಿದ ದೂರವಾಣಿ ಸಂಭಾಷಣೆಯ ವೇಳೆ ಈ ವರದಿ ಬಗ್ಗೆ ಪ್ರಸ್ತಾಪಿಸಿದ್ದರು. ಅದಾಗಿ ಕೆಲವೇ ಗಂಟೆಗಳಲ್ಲಿ ವರದಿ ಬಹಿರಂಗವಾಗಿದೆ. ಅನಾರೋಗ್ಯದಿಂದ ಬಳಲುತ್ತಿರುವ ರಾಜ ಸಲ್ಮಾನ್ ಅವರ ಬದಲಾಗಿ ಆಡಳಿತ ನಿರ್ವಹಿಸುತ್ತಿರುವ ರಾಜಕುಮಾರ, ಟರ್ಕಿಯ ಇಸ್ತಾಂಬುಲ್‌ನಲ್ಲಿ ಪತ್ರಕರ್ತ ಜಮಾಲ್ ಖಶೋಗ್ಗಿ ಅವರನ್ನು ಹಿಡಿಯುವ ಅಥವಾ ಕೊಲ್ಲುವ ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವುದನ್ನು ಒಪ್ಪಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

ಖಶೋಗಿ ಹತ್ಯೆ: ತನಿಖೆಗೆ ಆದೇಶ ನೀಡದ ವಿಶ್ವಸಂಸ್ಥೆ ಮುಖ್ಯಸ್ಥರ ಮೇಲೆ ಅಸಮಾಧಾನಖಶೋಗಿ ಹತ್ಯೆ: ತನಿಖೆಗೆ ಆದೇಶ ನೀಡದ ವಿಶ್ವಸಂಸ್ಥೆ ಮುಖ್ಯಸ್ಥರ ಮೇಲೆ ಅಸಮಾಧಾನ

2018ರಲ್ಲಿ ಇಸ್ತಾಂಬುಲ್‌ನ ರಾಯಭಾರ ಕಚೇರಿಯಲ್ಲಿ ನಡೆದ ಈ ಕ್ರೂರ ಹತ್ಯೆಯು ರಾಜಕುಮಾರ ಮೊಹಮ್ಮದ್ ಅವರ ಅನುಮತಿ ಇಲ್ಲದೆ ನಡೆಯಲು ಸಾಧ್ಯವೇ ಇಲ್ಲ. ವಿದೇಶದಲ್ಲಿನ ತಮ್ಮ ನೀತಿಗಳ ಟೀಕಾಕಾರರನ್ನು ಸುಮ್ಮನಾಗಿಸಲು ರಾಜಕುಮಾರನ ಬೆಂಬಲದೊಂದಿಗೆ ತೆಗೆದುಕೊಳ್ಳುವ ಹಿಂಸಾತ್ಮಕ ಕ್ರಮಗಳಲ್ಲಿ ಕೊಲೆಯೂ ಸೇರಿದೆ ಎಂದು ಅದು ತಿಳಿಸಿದೆ.

Saudi Crown Prince Mohammed Bin Salman Approved Killing Of Jamal Kashoggi: Report

ಅಮೆರಿಕದ ನಿವಾಸಿಯಾಗಿದ್ದ ಖಶೋಗ್ಗಿ, ವಾಷಿಂಗ್ಟನ್ ಪೋಸ್ಟ್‌ನಲ್ಲಿ ರಾಜಕುಮಾರ ಸಲ್ಮಾನ್ ಕುರಿತು ಕಟು ಟೀಕೆಯ ಬರಹಗಳನ್ನು ಬರೆದಿದ್ದರು. 2018ರ ಅಕ್ಟೋಬರ್‌ನಲ್ಲಿ ಅವರನ್ನು ಇಸ್ತಾಂಬುಲ್‌ನ ಸೌದಿ ರಾಯಭಾರ ಕಚೇರಿಗೆ ಕರೆದೊಯ್ದು ತುಂಡು ತುಂಡಾಗಿ ಕತ್ತರಿಸಿಕೊಲ್ಲಲಾಗಿತ್ತು.

ಪತ್ರಕರ್ತ ಖಶೋಗ್ಗಿ ಹತ್ಯೆ ವರದಿ ಬಗ್ಗೆ ಬೈಡನ್-ಸೌದಿ ರಾಜ ಸಲ್ಮಾನ್ ಮಾತುಕತೆ ಸಾಧ್ಯತೆಪತ್ರಕರ್ತ ಖಶೋಗ್ಗಿ ಹತ್ಯೆ ವರದಿ ಬಗ್ಗೆ ಬೈಡನ್-ಸೌದಿ ರಾಜ ಸಲ್ಮಾನ್ ಮಾತುಕತೆ ಸಾಧ್ಯತೆ

ಖಶೋಗ್ಗಿ ಅವರ ಗೌರವಾರ್ಥ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಅಂಟೋನಿ ಬ್ಲಿಂಕೆನ್ ಅವರು 'ಖಶೋಗ್ಗಿ ಕಾನೂನು' ಪ್ರಕಟಿಸಿದ್ದಾರೆ. ಸರ್ಕಾರದ ನೀತಿಗಳನ್ನು ವಿರೋಧಿಸುವವರನ್ನು ಬೆದರಿಸುವ ಅಥವಾ ಅವರ ಕುಟುಂಬದವರಿಗೆ ಕಿರುಕುಳ ನೀಡುವ ವಿದೇಶಿಗರಿಗೆ ಅಮೆರಿಕಕ್ಕೆ ಪ್ರವೇಶವನ್ನು ಈ ಕಾನೂನು ನಿಷೇಧಿಸುತ್ತದೆ. ಈ ಕಾನೂನು ಜಾರಿಗೆ ಬರುತ್ತಿದ್ದಂತೆಯೇ ಸೌದಿಯ 76 ಜನರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ.

English summary
US intelligence report said journalist Jamal Khashoggi was murdered and cut into pieces on Saudi crown prince Mohammed Bin Salman's order.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X