ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಹಾವಳಿ: 650ಕ್ಕೂ ಹೆಚ್ಚು ಜನ ಅಸ್ವಸ್ಥ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 22: ವಿಶ್ವದ ದೊಡ್ಡಣ್ಣ ಅಮೇರಿಕಾ ಸದ್ಯ ಕೊರೊನಾ ಮೂರನೇ ಅಲೆಯ ವಿರುದ್ಧ ಹೋರಾಡುತ್ತಿದೆ. ಅದಾಗಲೇ ಮತ್ತೊಂದು ಸೋಂಕು ದೇಶದಲ್ಲಿ ತಾಂಡವವಾಡಲು ಶುರು ಮಾಡಿದೆ. ಈಗಷ್ಟೇ ಕೊರೊನಾ ಎರಡನೇ ಅಲೆಯಿಂದ ಚೇತರಿಸಿಕೊಂಡು ಮೂರನೇ ಅಲೆಗೆ ಸಿದ್ದವಾಗುತ್ತಿರುವ ಹೊತ್ತಲ್ಲೇ ಮತ್ತೊಂದು ಸೋಂಕು ಅಮೇರಿಕಾದ ಜನರ ಪಾಲಿಗೆ ನರಕವಾಗಿದೆ. ಈರುಳ್ಳಿಯಿಂದ ಹರಡುವ ಸಾಲ್ಮೊನೆಲ್ಲಾ ಎನ್ನುವ ಸೋಂಕು ಯುಎಸ್ನಲ್ಲಿ 650 ಕ್ಕೂ ಹೆಚ್ಚು ಜನರನ್ನು ಅನಾರೋಗ್ಯಕ್ಕೀಡುಮಾಡಿದೆ.

ಈರುಳ್ಳಿಗೆ ಸಂಬಂಧಿಸಿರುವ ಸಾಲ್ಮೊನೆಲ್ಲಾ ಎನ್ನುವ ಸೋಂಕಿನಿಂದಾಗಿ ಅಮೆರಿಕದ 37 ರಾಜ್ಯಗಳಲ್ಲಿ 650 ಕ್ಕೂ ಹೆಚ್ಚು ಜನರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಕನಿಷ್ಠ 129 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು ತಿಳಿಸಿವೆ. ಇಲ್ಲಿಯವರೆಗೆ ಸೋಂಕಿನಿಂದ ಯಾವುದೇ ಸಾವುಗಳು ವರದಿಯಾಗಿಲ್ಲ.

ಈ ಸಾಲ್ಮೊನೆಲ್ಲಾ ಎಂಬ ಬ್ಯಾಕ್ಟೀರಿಯಾ ಹರಡುವ ಕೆಂಪು, ಬಿಳಿ ಮತ್ತು ಹಳದಿ ಈರುಳ್ಳಿಗಳನ್ನು ಚಿಹೋವಾ, ಮೆಕ್ಸಿಕೋದಿಂದ ಆಮದು ಮಾಡಿಕೊಳ್ಳಲಾಗಿದೆ. ಪ್ರೊಸೋರ್ಸ್ ಇಂಕ್ ಮೂಲಕ ಈ ಈರುಳ್ಳಿಗಳನ್ನು ಯುನೈಟೆಡ್ ಸ್ಟೇಟ್ಸ್‌ನಾದ್ಯಂತ ವಿತರಿಸಲಾಗಿದೆ ಎಂದು ಸಿಡಿಸಿ ಕಳೆದ ವಾರ ಹೇಳಿದೆ. ಬಹುತೇಕ ಈ ಎಲ್ಲಾ ಕಾಯಿಲೆಗಳು ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ವರದಿಯಾಗಿವೆ. ಟೆಕ್ಸಾಸ್ ಮತ್ತು ಒಕ್ಲಹೋಮದಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ವರದಿಯಾಗಿವೆ. ಈರುಳ್ಳಿ ಕೊನೆಯದಾಗಿ ಆಗಸ್ಟ್ ಅಂತ್ಯದಲ್ಲಿ ಆಮದು ಮಾಡಿಕೊಳ್ಳಲಾಗಿದೆ ಎಂದು ಕಂಪನಿಯು ಆರೋಗ್ಯ ಅಧಿಕಾರಿಗಳಿಗೆ ತಿಳಿಸಿದೆ. ಈ ಈರುಳ್ಳಿಯನ್ನು ತಿಂಗಳುಗಳ ಕಾಲ ಸಂಗ್ರಹಿಸಬಹುದು. ಇದನ್ನು ಅಧಿಕ ಕಾಲದವರೆಗೆ ಇಡಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 Salmonella bacteria in the United States: more than 650 people sick

ಮೆಕ್ಸಿಕೋದ ಚಿಹುವಾಹುವಾದಿಂದ ಈ ಸೋಂಕು ಹರಡುವ ಈರುಳ್ಳಿಯನ್ನು ಖರೀದಿಸಬೇಡಿ ಅಥವಾ ತಿನ್ನಬೇಡಿ ಎಂದು ಜನರಿಗೆ ತಿಳಿಸಲಾಗಿದೆ. ಗ್ರಾಹಕರು ಚಿಹೋವಾದಿಂದ ಆಮದು ಮಾಡಿಕೊಳ್ಳುವ ಮತ್ತು ಪ್ರೋಸೋರ್ಸ್‌ನಿಂದ ವಿತರಿಸಿದ ಸಂಪೂರ್ಣ ತಾಜಾ ಕೆಂಪು, ಬಿಳಿ ಅಥವಾ ಹಳದಿ ಈರುಳ್ಳಿಯನ್ನು ಖರೀದಿಸಬೇಡಿ ಅಥವಾ ತಿನ್ನಬೇಡಿ ಎಂದು ಸೂಚಿಸಲಾಗಿದೆ. ಜೊತೆಗೆ ಸ್ಟಿಕ್ಕರ್ ಅಥವಾ ಪ್ಯಾಕೇಜಿಂಗ್ ಇಲ್ಲದ ಯಾವುದೇ ಕೆಂಪು, ಬಿಳಿ ಅಥವಾ ಹಳದಿ ಈರುಳ್ಳಿಯನ್ನು ಎಸೆಯುವಂತೆ ಜನರಿಗೆ ಹೇಳಲಾಗಿದೆ. ಜೊತೆಗೆ ಈ ಈರುಳ್ಳಿ ಕುರಿತು ರೆಸ್ಟೋರೆಂಟ್, ರೀಟೇಲರ್ಸ್, ಹೋಟೆಲ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ನಿಗಾ ಇರಿಸಲಾಗಿದೆ.

ಏನಿದು ಸಾಲ್ಮೊನೆಲ್ಲಾ?

ಸಾಲ್ಮೊನೆಲ್ಲಾ ಸೋಂಕು (ಸಾಲ್ಮೊನೆಲೋಸಿಸ್) ಒಂದು ಸಾಮಾನ್ಯ ಬ್ಯಾಕ್ಟೀರಿಯಾದ ಕಾಯಿಲೆಯಾಗಿದ್ದು ಅದು ಕರುಳಿನ ಮೇಲೆ ಪರಿಣಾಮ ಬೀರುತ್ತದೆ. ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾಗಳು ಸಾಮಾನ್ಯವಾಗಿ ಪ್ರಾಣಿ ಮತ್ತು ಮಾನವ ಕರುಳಿನಲ್ಲಿ ವಾಸಿಸುತ್ತವೆ. ಜೊತೆಗೆ ಇವು ಮಲದಿಂದ ಹೊರಹಾಕಲ್ಪಡುತ್ತವೆ. ಕಲುಷಿತ ನೀರು ಅಥವಾ ಆಹಾರದ ಮೂಲಕ ಜನ ಈ ಸೋಂಕಿಗೆ ಒಳಗಾಗುತ್ತಾರೆ.

ಸಾಲ್ಮೊನೆಲ್ಲಾ ಸೋಂಕಿನ ಲಕ್ಷಣಗಳು ಯಾವುವು?

ಸಾಲ್ಮೊನೆಲ್ಲಾ ಸೋಂಕು ಹೊಂದಿರುವ ಹೆಚ್ಚಿನ ಜನರಿಗೆ ಅತಿಸಾರ, ಜ್ವರ ಮತ್ತು ಹೊಟ್ಟೆ ಸೆಳೆತ ಇರುತ್ತದೆ. ಸೋಂಕಿನ ನಂತರ ರೋಗಲಕ್ಷಣಗಳು ಸಾಮಾನ್ಯವಾಗಿ ಆರು ಗಂಟೆಗಳಿಂದ ಆರು ದಿನಗಳವರೆಗೆ ಪ್ರಾರಂಭವಾಗುತ್ತವೆ ಮತ್ತು ನಾಲ್ಕರಿಂದ ಏಳು ದಿನಗಳವರೆಗೆ ಇರುತ್ತದೆ.

ಇದು ಮಕ್ಕಳ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನು ಬೀರಲಿದೆ. ಐದಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೊಂದರೆಯುಂಟಾಗಲಿದೆ. ಆದರೆ ಶೇ.1ಕ್ಕಿಂತಲೂ ಕಡಿಮೆ ಮಂದಿಗೆ ಸೋಂಕು ತಗುಲಿದೆ.

ಈ ಹಿಂದೆ ಈರುಳ್ಳಿಯಿಂದ ಹರಡುವ ಸೋಂಕನ್ನು ತಡೆಯಲು ಅಮೆರಿಕ ಹಾಗೂ ಕೆನಡಾದಲ್ಲಿ ಈರುಳ್ಳಿಯನ್ನು ನಿಷೇಧಿಸಲಾಗಿದೆ. ಎರಡೂ ದೇಶಗಳಲ್ಲಿನ ಆರೋಗ್ಯ ಸಂಸ್ಥೆಗಳು ಕ್ಯಾಲಿಫೋರ್ನಿಯಾ ಮೂಲದ ಥಾಮ್ಸನ್ ಇಂಟರ್‌ನ್ಯಾಷನಲ್ ಇಂಕ್ ಸರಬರಾಜು ಮಾಡುತ್ತಿರುವ ಈರುಳ್ಳಿಯಿಂದ ಸಲ್ಮೋನೆಲ್ಲಾ ಎಂಬ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇದೆ ಎಂದು ಈರುಳ್ಳಿಯನ್ನು ನಿಷೇಧಿಸಿತ್ತು.

English summary
More than 650 people have fallen sick in as many as 37 states in the US due to the salmonella outbreak which is linked to onions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X