• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಷ್ಯಾ-ಅಮೆರಿಕ ನಡುವೆ ಶೀತಲ ಸಮರ..? ಬೈಡನ್ ವಿರುದ್ಧ ಸೇಡು ತೀರಿಸಿಕೊಂಡ ಪುಟಿನ್..?

|

ಜಗತ್ತನ್ನು ಕೊರೊನಾ ಸೋಂಕು ಕಾಡುತ್ತಿರುವ ಹೊತ್ತಲ್ಲಿ ಬಲಾಢ್ಯ ರಾಷ್ಟ್ರಗಳ ನಡುವೆ ಕಿತ್ತಾಟ ಆರಂಭವಾಗಿದೆ. ಅಮೆರಿಕ ಹಾಗೂ ರಷ್ಯಾ ನಡುವೆ ರಾಜತಾಂತ್ರಿಕ ಯುದ್ಧ ಆರಂಭವಾಗಿದೆ. 2020ರ ನವೆಂಬರ್‌ನಲ್ಲಿ ನಡೆದಿದ್ದ ಅಮೆರಿಕ ಚುನಾವಣೆಯಲ್ಲಿ ರಷ್ಯಾ ಲಾಬಿ ನಡೆಸಿದೆ ಎಂಬ ಆರೋಪದಡಿ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಬೈಡನ್ ಕಠಿಣ ನಿರ್ಬಂಧ ಹೇರಿದ್ದರು.

ರಷ್ಯಾದ 10 ರಾಜತಾಂತ್ರಿಕ ಅಧಿಕಾರಿಗಳನ್ನು ಅಮೆರಿಕ ಬಿಟ್ಟು ತೊಲಗುವಂತೆ ಆದೇಶ ಹೊರಡಿಸಿದ್ದರು. ಅಲ್ಲದೆ ರಷ್ಯಾ ಮೇಲೆ ಕೆಲ ನಿರ್ಬಂಧಗಳನ್ನೂ ಹೇರಿದ್ದರು. ಬೈಡನ್ ಕ್ರಮಕೈಗೊಂಡ 1 ದಿನದ ಒಳಗೆ ರಷ್ಯಾ ಕೂಡ ಸರಿಯಾಗೇ ಪ್ರತ್ಯುತ್ತರ ನೀಡಿದೆ. ರಷ್ಯಾದಲ್ಲಿರುವ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗಳಿಗೆ ಗೇಟ್‌ಪಾಸ್ ಕೊಟ್ಟು ರಷ್ಯಾ ಸೇಡು ತೆಗೆದುಕೊಂಡಿದೆ.

ರಷ್ಯಾ v/s ಅಮೆರಿಕ, ಸೈಬರ್ ಮಹಾಯುದ್ಧಕ್ಕೆ ರಣಕಹಳೆ

ಇದು ಮತ್ತೊಮ್ಮೆ ರಷ್ಯಾ ಹಾಗೂ ಅಮೆರಿಕ ನಡುವೆ ಶೀತಲ ಸಮರ ಆರಂಭವಾಗಿದೆಯಾ ಎಂಬ ಅನುಮಾನ ಮೂಡಿಸಿದೆ. ಕೆಲ ತಿಂಗಳ ಹಿಂದೆ ಅಮೆರಿಕ ಅಧ್ಯಕ್ಷ ಬೈಡನ್, ಪುಟಿನ್‌ರನ್ನು ಕೊಲೆಗಾರ ಎಂದು ತೀವ್ರ ವಿರೋಧ ಎದುರಿಸಿದ್ದರು. ಇದಾದ ಬಳಿಕ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಬೂದಿ ಮುಚ್ಚಿದ ಕೆಂಡವಾಗಿದೆ.

ಸೈಬರ್ ಅಟ್ಯಾಕ್‌ಗೆ ರಿವೇಂಜ್..!

ಸೈಬರ್ ಅಟ್ಯಾಕ್‌ಗೆ ರಿವೇಂಜ್..!

ಅಮೆರಿಕದಲ್ಲಿ ಕೆಲ ತಿಂಗಳ ಹಿಂದೆ ನಿರಂತರವಾಗಿ ಸೈಬರ್ ದಾಳಿ ನಡೆದಿದ್ದವು. ಅಮೆರಿಕ ಚುನಾವಣೆ ಮೇಲೂ ಈ ಸೈಬರ್ ಅಟ್ಯಾಕ್ ಪ್ರಭಾವ ಬೀರಿತ್ತು. ಆಗಲೇ ಬೈಡನ್ ರಷ್ಯಾಗೆ ಎಚ್ಚರಿಕೆ ನೀಡಿದ್ದರು. ನಮ್ಮ ಮೇಲೆ ಹೀಗೆ ಸೈಬರ್ ದಾಳಿ ನಡೆಸುವವರು ಮುಂದೆ ಅನುಭವಿಸುತ್ತಾರೆ ಎಂಬ ಅರ್ಥದಲ್ಲಿ ವಾರ್ನಿಂಗ್ ನೀಡಿದ್ದರು. ಇದೀಗ ಅಧಿಕಾರಕ್ಕೆ ಬಂದು ಕೆಲವೇ ತಿಂಗಳಲ್ಲಿ ರಷ್ಯಾ ವಿರುದ್ಧ ಸೇಡು ತೀರಿಸಿಕೊಂಡಿದ್ದಾರೆ ಅಮೆರಿಕದ ಅಧ್ಯಕ್ಷ ಜೋ ಬೈಡನ್. ಹಾಗೇ ರಷ್ಯಾ ಕೂಡ ಅಮೆರಿಕದ ಪ್ರಚೋದನೆ ತಕ್ಕ ಪ್ರತಿಕ್ರಿಯೆ ನೀಡಿದೆ.

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ರಷ್ಯನ್ ಹ್ಯಾಕರ್ಸ್ ಬಗ್ಗೆ ಭಯವೇಕೆ..?

ಜಗತ್ತಿನಲ್ಲಿ ರಷ್ಯನ್ ಹ್ಯಾಕರ್ಸ್ ಹೆಸರು ಕೇಳಿದರೆ ಭಯ ಆವರಿಸಿಬಿಡುತ್ತದೆ. ಏಕೆಂದರೆ ರಷ್ಯಾದ ಹ್ಯಾಕರ್‌ಗಳು ಅಷ್ಟು ಖತರ್ನಾಕ್. ಚಿಟಿಕೆ ಹೊಡೆಯುವುದರ ಒಳಗಾಗಿ ಎಂತಹ ಪ್ರಬಲ ಕಂಪ್ಯೂಟರ್‌ಗಳನ್ನು ಬೇಕಾದರೂ ಮುಳುಗಿಸಿಬಿಡುತ್ತಾರೆ. ಅದೆಷ್ಟೇ ಸೈಬರ್ ಸೆಕ್ಯುರಿಟಿ ಕೊಟ್ಟಿದ್ದರೂ ರಷ್ಯನ್ ಹ್ಯಾಕರ್ಸ್ ಕೈಯಿಂದ ಬಚಾವ್ ಆಗುವುದು ತುಂಬಾನೇ ಕಷ್ಟ. ಅದರಲ್ಲೂ ಅಮೆರಿಕದ ಕಂಪ್ಯೂಟರ್‌ಗಳು ಎಂದರೆ ರಷ್ಯಾ ಹ್ಯಾಕರ್ಸ್‌ಗೆ ಬಲು ಪ್ರೀತಿ. ಹೀಗಾಗಿ ಪದೇ ಪದೆ ಅಮೆರಿಕದ ಮೇಲೆ ಸೈಬರ್ ದಾಳಿಗಳು ನಡೆಯುತ್ತಿವೆ ಎಂಬ ಆರೋಪವಿದೆ.

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಚುನಾವಣೆಗೆ ಮೊದಲು ಹೀಗೆ ಆಗಿತ್ತು..!

ಅಮೆರಿಕದ ಸರ್ಕಾರಿ ಇಲಾಖೆಗಳ ಮೇಲೆ ನಿರಂತರ ಸೈಬರ್ ದಾಳಿ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ 1 ವಾರ ಬಾಕಿ ಇರುವಾಗಲೇ ದಾಳಿ ನಡೆದಿತ್ತು. ಕಳೆದ ಅಕ್ಟೋಬರ್ ಅಂತ್ಯದಲ್ಲಿ ನಡೆದಿದ್ದ ಈ ಘಟನೆಯಲ್ಲಿ ಅಮೆರಿಕದ ಮತದಾರರ ಮಾಹಿತಿ ಕದ್ದಿರುವ ಆರೋಪ ಕೇಳಿಬಂದಿತ್ತು. ಅಲ್ಲದೆ ಅಮೆರಿಕದ ನೀರು ಸರಬರಾಜು ಕೇಂದ್ರ, ಪವರ್ ಗ್ರೀಡ್‌ ಸೇರಿದಂತೆ ನ್ಯೂಕ್ಲಿಯರ್ ಪ್ಲಾಂಟ್‌ಗಳನ್ನು ರಷ್ಯಾ ಹ್ಯಾಕರ್ಸ್ ಟಾರ್ಗೆಟ್ ಮಾಡಿದ್ದಾರೆ ಎಂದು ಅಮೆರಿಕ ಗಂಭೀರ ಆರೋಪ ಮಾಡಿತ್ತು. ಈ ಎಲ್ಲಾ ಆರೋಪಗಳ ಹಿನ್ನೆಲೆ ಬೈಡನ್ ರಷ್ಯಾ ವಿರುದ್ಧ ಹಲವು ನಿರ್ಬಂಧಗಳನ್ನ ಹೇರಿದ್ದಾರೆ.

  ಚಪ್ಪಲಿ ಪೋಸ್ಟ್ ಮಾಡಿದ RCB ವಿರುದ್ಧ ತಿರುಗಿಬಿದ್ದ ಅಭಿಮಾನಿಗಳು | Oneindia Kannada
  ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

  ಏರ್‌ಪೋರ್ಟ್ ವೈ-ಫೈ ಕೂಡ ಅಬೇಸ್..!

  ಅಮೆರಿಕದ ಫೆಡರಲ್ ಅಧಿಕಾರಿಗಳು ರಷ್ಯಾ ವಿರುದ್ಧ ನೀಡಿರುವ ಹ್ಯಾಕಿಂಗ್ ಆರೋಪ ಪಟ್ಟಿಯಲ್ಲಿ ಕೇವಲ ಮೂಲ ಸೌಕರ್ಯ ಹಾಗೂ ಮತದಾರರ ಮಾಹಿತಿ ಟಾರ್ಗೆಟ್ ಮಾಡಿಲ್ಲ. ಇದರ ಜೊತೆಯಲ್ಲೇ ಅಮೆರಿಕದ ಪ್ರತಿಷ್ಠಿತ ಏರ್‌ಪೋರ್ಟ್‌ಗಳ ವೈ-ಫೈ ಕೂಡ ಹ್ಯಾಕ್ ಮಾಡಲಾಗಿದೆಯಂತೆ. ಸ್ಯಾನ್ ಫ್ರಾನ್ಸಿಸ್ಕೋ ವಿಮಾನ ನಿಲ್ದಾಣದಲ್ಲಿ ವೈ-ಫೈ ಹ್ಯಾಕ್ ಮಾಡಲಾಗಿದ್ದು, ಅಲ್ಲಿಗೆ ಬಂದಿದ್ದ ಅನಾಮಿಕ ವ್ಯಕ್ತಿಯೊಬ್ಬನ ಚಹರ ಪತ್ತೆಗಾಗಿ ಪ್ರಯತ್ನಿಸಲಾಗಿದೆ. ಹೀಗೆ ರಷ್ಯಾ ಹ್ಯಾಕರ್ಸ್ ಟೀಂ ಅಮೆರಿಕದ ವಿರುದ್ಧ ವಿಷಕಾರುವ ಕೆಲಸ ಮಾಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ.

  English summary
  Russia now expelling 10 American diplomats after US sanctions on Russia.
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X