ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅತಿ ಎತ್ತರದ ಪ್ರದೇಶದಲ್ಲಿದ್ದರೆ ಕೊರೊನಾ ವೈರಸ್ ಸೋಂಕು ಹರಡುವುದಿಲ್ಲವೇ?

|
Google Oneindia Kannada News

ವಾಷಿಂಗ್ಟನ್, ಜೂನ್ 1: ತಗ್ಗು ಪ್ರದೇಶದಲ್ಲಿ ವಾಸಿಸುವ ಜನರಿಗೆ ಹೋಲಿಸಿದರೆ, ಅತಿ ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಜನರು, ಅದರಲ್ಲೂ ಸಮುದ್ರ ಮಟ್ಟಕ್ಕಿಂತ 3 ಸಾವಿರ ಮೀಟರ್ (9,842 ಅಡಿ) ಎತ್ತರದಲ್ಲಿ ನೆಲೆಸಿರುವವರಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆ ಇದೆ ಎಂದು ಸಂಶೋಧಕರು ತಿಳಿಸಿದ್ದಾರೆ.

Recommended Video

ಕಾರೆಹೊಂಡ ಗ್ರಾಮಸ್ತರ ಜೊತೆ ಕಾಲಕಳೆದ ಕುಮಾರ್ ಬಂಗಾರಪ್ಪ | Oneindia Kannada

ರೆಸ್ಪಿರೇಟರಿ ಫಿಸಿಯಾಲಜಿ ಆಂಡ್ ನ್ಯೂರೋಬಯಾಲಜಿ ಎಂಬ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಆಸ್ಟ್ರೇಲಿಯಾ, ಬೊಲಿವಿಯಾ, ಕೆನಡಾ ಮತ್ತು ಸ್ವಿಟ್ಜರ್ ಲ್ಯಾಂಡ್ ನ ಸಂಶೋಧಕರು ಬೊಲಿವಿಯಾ, ಈಕ್ವೆಡಾರ್ ಮತ್ತು ಟಿಬೆಟ್ ನ ಎಪಿಡಿಮಿಯೋಲಾಜಿಕಲ್ ಡೇಟಾವನ್ನು ಪರಿಶೀಲಿಸಿದ್ದಾರೆ.

ಭಪ್ಪರೆ ಮಗು.. ಕೊರೊನಾ ವೈರಸ್ ನ ಬಗ್ಗುಬಡಿದ 36 ದಿನದ ಹಸುಗೂಸು.!ಭಪ್ಪರೆ ಮಗು.. ಕೊರೊನಾ ವೈರಸ್ ನ ಬಗ್ಗುಬಡಿದ 36 ದಿನದ ಹಸುಗೂಸು.!

ಚೀನಾಗೆ ಹೋಲಿಸಿದರೆ, ಟಿಬೆಟ್ ನಲ್ಲಿ ಸೋಂಕಿತರ ಸಂಖ್ಯೆ ಸಿಕ್ಕಾಪಟ್ಟೆ ಕಡಿಮೆ ಇದೆ. ಹಾಗೇ, ಬೊಲಿವಿಯನ್ ಆಂಡೆಸ್ ಮತ್ತು ಈಕ್ವೆಡೋರಿಯನ್ ಆಂಡೆಸ್ ನಲ್ಲೂ ಸೋಂಕಿತರ ಪ್ರಮಾಣ ಕಮ್ಮಿ ಇರುವುದು ದತ್ತಾಂಶದಿಂದ ತಿಳಿದುಬಂದಿದೆ.

ಪೆರುವಿನ ಕುಸ್ಕೊ ಅಂಕಿ-ಅಂಶ

ಪೆರುವಿನ ಕುಸ್ಕೊ ಅಂಕಿ-ಅಂಶ

ಕೇವಲ 420,000 ನಿವಾಸಿಗಳನ್ನು ಹೊಂದಿರುವ ಪೆರುವಿನ ಕುಸ್ಕೊದಲ್ಲಿ ಇಲ್ಲಿಯವರೆಗೂ ಮೂರು ಮಂದಿ ಮಾತ್ರ ಕೋವಿಡ್-19 ನಿಂದ ಸಾವನ್ನಪ್ಪಿದ್ದಾರೆ. ಅಸಲಿಗೆ, ಆ ಮೂವರೂ ಮೆಕ್ಸಿಕೊ, ಚೀನಾ ಮತ್ತು ಬ್ರಿಟನ್ ನಿಂದ ಬಂದಿದ್ದ ಪ್ರವಾಸಿಗಳು.

ಮಾರ್ಚ್ 23 ರಿಂದ ಏಪ್ರಿಲ್ 3 ರವರೆಗೂ ಪೆರುವಿನಲ್ಲಿ ಲಾಕ್ ಡೌನ್ ಘೋಷಿಸಲಾಗಿತ್ತು. ಅಂದಿನಿಂದ ಕುಸ್ಕೊದಲ್ಲಿ ಕೊರೊನಾ ವೈರಸ್ ಸೋಂಕಿನಿಂದ ಯಾರೂ ಸಾವನ್ನಪ್ಪಿಲ್ಲ.

ಅಂದ್ಹಾಗೆ, ಕುಸ್ಕೊ ಸಮುದ್ರಮಟ್ಟಕ್ಕಿಂತ 3,400 ಮೀಟರ್ (11,200 ಅಡಿ) ಎತ್ತರದಲ್ಲಿದೆ.

ವೈರಾಣುಗಳಿಗೆ ಪ್ರತಿಕೂಲ ವಾತಾವರಣ

ವೈರಾಣುಗಳಿಗೆ ಪ್ರತಿಕೂಲ ವಾತಾವರಣ

ಹೆಚ್ಚಿನ ಎತ್ತರದಲ್ಲಿ ವಾಸಿಸುವ ಜನರು ಹೈಪೋಕ್ಸಿಯಾ (ರಕ್ತದಲ್ಲಿ ಕಡಿಮೆ ಪ್ರಮಾಣದ ಆಕ್ಸಿಜನ್) ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಹಾಗೇ, ಅಲ್ಲಿನ ನೈಸರ್ಗಿಕ ವಾತಾವರಣ ವೈರಾಣುಗಳಿಗೆ ಪ್ರತಿಕೂಲವಾಗಿದೆ ಎಂದು ಸಂಶೋಧಕರು ವಿಶ್ಲೇಷಿಸಿದ್ದಾರೆ.

ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ದೇಹಕ್ಕೆ ಮಾರಕ ಎಂದ ಅಧ್ಯಯನ!ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಅಜಿಥ್ರೋಮೈಸಿನ್ ದೇಹಕ್ಕೆ ಮಾರಕ ಎಂದ ಅಧ್ಯಯನ!

ಹಿಮಾಲಯನ್ಸ್, ಇಥಿಯೋಪಿಯನ್ ಹೈಲ್ಯಾಂಡರ್ಸ್, ಆಂಡಿಯನ್ಸ್ ಮಾತ್ರ ಎತ್ತರದ ವಾತಾವರಣಕ್ಕೆ ಜೆನೆಟಿಕ್ ಅಡ್ಯಾಪ್ಟೇಷನ್ ಹೊಂದಿದ್ದಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ

ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ

ಅತಿ ಎತ್ತರದಲ್ಲಿ ವಾಸಿಸುವ ಜನರು ಮತ್ತು ಕೊರೊನಾ ವೈರಸ್ ಸೋಂಕಿನ ನಡುವೆ ಇರುವ ಸಂಬಂಧದ ಕುರಿತು ಇನ್ನೂ ಹೆಚ್ಚಿನ ಅಧ್ಯಯನದ ಅವಶ್ಯಕತೆ ಇದೆ. ಅತಿ ಎತ್ತರದಲ್ಲಿ ವಾಸಿಸುವ ಜನರು ಕೊರೊನಾ ವೈರಸ್ ಸೋಂಕಿಗೆ ಒಳಗಾದಾಗ, ಪರೀಕ್ಷೆ ಅಥವಾ ವೈದ್ಯಕೀಯ ಚಿಕಿತ್ಸೆ ಪಡೆಯುವ ಸಾಧ್ಯತೆ ಕಮ್ಮಿ ಇರುವ ಅಂಶವನ್ನೂ ತಳ್ಳಿ ಹಾಕುವಂತಿಲ್ಲ.

ಎಲ್ಲಿದ್ದರೇನು.?

ಎಲ್ಲಿದ್ದರೇನು.?

''ವೈರಾಣುಗಳಿಗೆ ಜನರೆಂದರೆ ಇಷ್ಟ. ಅತಿ ಎತ್ತರದ ಪ್ರದೇಶಗಳ ಬಗ್ಗೆ ವೈರಾಣು ಕೇರ್ ಮಾಡಲ್ಲ'' ಎನ್ನುತ್ತಾರೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದ ಸಂಶೋಧಕ ಪೀಟರ್ ಚಿನ್-ಹಾಂಗ್.

English summary
Researchers have found that people living on Higher Altitudes reports low Covid 19 infections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X