ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ತಂದ ಆಪತ್ತು: ಡೊನಾಲ್ಡ್ ಟ್ರಂಪ್ ರಾಜಕೀಯ ಭವಿಷ್ಯಕ್ಕೆ ಕುತ್ತು?

|
Google Oneindia Kannada News

ವಾಷಿಂಗ್ಟನ್, ಮೇ 5: ವೈಟ್ ಹೌಸ್ ಒಳಗೆ.. ಪತ್ರಕರ್ತರ ಮುಂದೆ.. ನ್ಯೂಸ್ ಬ್ರೀಫಿಂಗ್ ಮಾಡುವಾಗ.. ''ಕೊರೊನಾ ವೈರಸ್ ಕೊಲ್ಲಲು ಮಾನವನ ದೇಹದೊಳಗೆ ಲೈಟ್, ಹೀಟ್ ಅಥವಾ ಡಿಸ್ ಇನ್ಫೆಕ್ಟೆಂಟ್ ಇನ್ಜೆಕ್ಟ್ ಮಾಡಬಹುದಾ?'' ಅಂತ ಕೇಳಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯದ್ವಾತದ್ವಾ ಟ್ರೋಲ್ ಆಗಿದ್ದರು.

Recommended Video

ಸಾರಾಯಿ ಕುಡಿಯೋದಕ್ಕೆ ದುಡ್ಡಿರುತ್ತೆ ಅಕ್ಕಿ‌ ಕೊಳ್ಳೋಕೆ ದುಡ್ಡಿರಲ್ವಾ?ಅಂತವರ ಮನೆಗೆ ಅಕ್ಕಿ ಕೊಡಬೇಡಿ | Swamiji

ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರ ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳು ಇದೀಗ ಅವರ ರಾಜಕೀಯ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದ್ದು, ರಿಪಬ್ಲಿಕನ್ಸ್ ಗೆ ನಡುಕ ಹುಟ್ಟಿಸಿದೆ.

'ಐಡಿಯಾ' ಅಲ್ಲ 'ವ್ಯಂಗ್ಯ': ಟೀಕೆಗೊಳಗಾದ ಬಳಿಕ ಎಚ್ಚೆತ್ತ ಡೊನಾಲ್ಡ್ ಟ್ರಂಪ್!'ಐಡಿಯಾ' ಅಲ್ಲ 'ವ್ಯಂಗ್ಯ': ಟೀಕೆಗೊಳಗಾದ ಬಳಿಕ ಎಚ್ಚೆತ್ತ ಡೊನಾಲ್ಡ್ ಟ್ರಂಪ್!

ಕೊರೊನಾ ವೈರಸ್ ಅನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೊದಲೇ ಎಡವಿದ್ದ ಡೊನಾಲ್ಡ್ ಟ್ರಂಪ್, ತಮ್ಮ ತಪ್ಪನ್ನು ಮರೆಮಾಚಲು ಪದೇ ಪದೇ ಚೀನಾ ಕಡೆ ಬೆಟ್ಟು ಮಾಡಿ ತೋರಿಸುತ್ತಿದ್ದಾರೆ. ಜೊತೆಗೆ ಅಮೇರಿಕಾದಲ್ಲೀಗ ಕೊರೊನಾ ವೈರಸ್ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿಯೂ ಹಿಂದೆ ಬಿದ್ದಿರುವ ಡೊನಾಲ್ಡ್ ಟ್ರಂಪ್, ಡೆಮೊಕ್ರಾಟ್ಸ್ ರಿಂದ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ.

ಡೊನಾಲ್ಡ್ ಟ್ರಂಪ್ ರವರ ಕೆಲ ಎಡವಟ್ಟು ನಡೆಗಳೇ ಡೆಮೊಕ್ರಾಟ್ಸ್ ಗೆ ಅಸ್ತ್ರವಾಗಿದೆ. ಇದರಿಂದ ನವೆಂಬರ್ 3 ರಂದು ನಡೆಯುವ ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಗೆ ಭಾರಿ ಹಿನ್ನಡೆಯಾಗಬಹುದು, ಸೆನೆಟ್ ಅನ್ನು ಕಳೆದುಕೊಳ್ಳುವ ಅಪಾಯವೂ ಎದುರಾಗಬಹುದು ಎಂಬ ಆತಂಕ ರಿಪಬ್ಲಿಕನ್ಸ್ ಗೆ ಕಾಡುತ್ತಿದೆ.

ಡೊನಾಲ್ಡ್ ಟ್ರಂಪ್ ಕೊಟ್ಟ 'ಸೂಪರ್ ಸುಪ್ರೀಂ ಐಡಿಯಾ'ಗೆ ವೈದ್ಯರೇ ತಬ್ಬಿಬ್ಬು!ಡೊನಾಲ್ಡ್ ಟ್ರಂಪ್ ಕೊಟ್ಟ 'ಸೂಪರ್ ಸುಪ್ರೀಂ ಐಡಿಯಾ'ಗೆ ವೈದ್ಯರೇ ತಬ್ಬಿಬ್ಬು!

ದೈನಂದಿನ ಸುದ್ದಿಗೋಷ್ಠಿಗಳೇ ಮುಳ್ಳಾಗಿ ಪರಿಣಮಿಸುತ್ತಿದೆ

ದೈನಂದಿನ ಸುದ್ದಿಗೋಷ್ಠಿಗಳೇ ಮುಳ್ಳಾಗಿ ಪರಿಣಮಿಸುತ್ತಿದೆ

ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ದೈನಂದಿನ ಸುದ್ದಿಗೋಷ್ಠಿಗಳೇ ಅವರ ರಾಜಕೀಯ ಭವಿಷ್ಯಕ್ಕೆ ಮುಳ್ಳಾಗಿ ಪರಿಣಮಿಸುತ್ತಿದೆ. ನ್ಯೂಸ್ ಬ್ರೀಫಿಂಗ್ ವೇಳೆ ಬಾಯಿಗೆ ಬಂದಿದ್ದನ್ನು ಒದರುವ ಟ್ರಂಪ್, ತಮ್ಮ ಕಾಲ ಮೇಲೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಅದಕ್ಕೆ ಸಾಕ್ಷಿ ಇತ್ತೀಚೆಗಷ್ಟೇ ಅಮೇರಿಕಾದಲ್ಲಿ ನಡೆದ ಚುನಾವಣೆ ಪೂರ್ವ ಸಮೀಕ್ಷೆ. ಅದರ ಪ್ರಕಾರ ಮಿಶಿಗನ್, ಪೆನ್ಸಿಲ್ವೇನಿಯಾ ಮತ್ತು ಫ್ಲೋರಿಡಾದಲ್ಲಿ ಡೊನಾಲ್ಡ್ ಟ್ರಂಪ್ ಹಿಂದುಳಿದಿದ್ದಾರೆ. ಪರಿಸ್ಥಿತಿ ಹೀಗೆ ಮುಂದುವರೆದರೆ, ಅಧಿಕಾರ ಕೈತಪ್ಪಲಿದೆ. ಹೀಗಾಗಿ, ನ್ಯೂಸ್ ಬ್ರೀಫಿಂಗ್ ವೇಳೆ ಯಾವುದೇ ಪ್ರಶ್ನೆಗಳನ್ನು ತೆಗೆದುಕೊಳ್ಳದೆ, ಕಡಿಮೆ ಸಮಯಕ್ಕೆ ಸೀಮಿತಗೊಳಿಸುವುದೇ ಉತ್ತಮ ಆಯ್ಕೆ ಎಂಬ ತೀರ್ಮಾನಕ್ಕೆ ಬರಲಾಗಿದೆ.

ಸ್ವಯಂ ವಿನಾಶಕಾರಿ ಕೃತ್ಯಗಳ ಬಗ್ಗೆ ದೂಷಿಸುವುದಿಲ್ಲ

ಸ್ವಯಂ ವಿನಾಶಕಾರಿ ಕೃತ್ಯಗಳ ಬಗ್ಗೆ ದೂಷಿಸುವುದಿಲ್ಲ

ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರು ಸದಾ ಬಾಹ್ಯ ಘಟನೆಗಳ ಬಗ್ಗೆಯೇ ಗುಟುರು ಹಾಕುತ್ತಾರೆ ಹೊರತು ಸ್ವಯಂ ವಿನಾಶಕಾರಿ ಕೃತ್ಯಗಳ ಬಗ್ಗೆ ಎಂದೂ ದೂಷಿಸುವುದಿಲ್ಲ. ಆದರೆ, ನ್ಯೂಸ್ ಬ್ರೀಫಿಂಗ್ ವೇಳೆ ವೇದಿಕೆ ಮೇಲಿನ ಡೊನಾಲ್ಡ್ ಟ್ರಂಪ್ ವರ್ತನೆಗೆ ಸಂಬಂಧಿಸಿದಂತೆ ಒಂದೆರಡು ಯಶಸ್ವಿ ಮಧ್ಯಸ್ಥಿಕೆ ನಡೆಸಿರುವುದು ಮಾತ್ರ ಸಮಾಧಾನಕರ ಸಂಗತಿ.

ಭರವಸೆ ತುಂಬುವ ಕೆಲಸ ಆಗಬೇಕು

ಭರವಸೆ ತುಂಬುವ ಕೆಲಸ ಆಗಬೇಕು

''ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮಾತಿನ ಶೈಲಿಯನ್ನು ಬದಲಾಯಿಸಿಕೊಳ್ಳಬೇಕು. ಜನರಲ್ಲಿ ಭರವಸೆ ತುಂಬುವ ಕೆಲಸ ಆಗಬೇಕಿದೆ. ಆದರೆ ಟ್ರಂಪ್ ಸಾಮಾನ್ಯವಾಗಿ ಕೋಪ ತೋರಿಸುತ್ತಾರೆ. 'ನಾವು ಬಲಿಪಶು' ಅಂತ ಪದೇ ಪದೇ ಬಿಂಬಿಸಿಕೊಳ್ಳುತ್ತಿದ್ದಾರೆ'' ಎಂದು ಓಕ್ಲಹಾಮದ ರಿಪಬ್ಲಿಕನ್ ಪಕ್ಷದ ಪ್ರತಿನಿಧಿ ಟಾಮ್ ಕೋಲ್ ಅಭಿಪ್ರಾಯ ಪಟ್ಟಿದ್ದಾರೆ.

'ಶಕ್ತಿ'ಯಾಗಿ ಬದಲಾಗಬೇಕು ಟ್ರಂಪ್

'ಶಕ್ತಿ'ಯಾಗಿ ಬದಲಾಗಬೇಕು ಟ್ರಂಪ್

ಅಮೇರಿಕಾ ಅಧ್ಯಕ್ಷೀಯ ಚುನಾವಣೆಗೆ ಉಳಿದಿರುವುದು ಕೇವಲ 6 ತಿಂಗಳಷ್ಟೇ. ಅಷ್ಟರೊಳಗೆ ಡೊನಾಲ್ಡ್ ಟ್ರಂಪ್ ತಮ್ಮ ಮೇಲಿರುವ ಆಪಾದನೆ ಮತ್ತು ನಡವಳಿಕೆಯನ್ನು ಬದಲಾಯಿಸಿಕೊಳ್ಳಬೇಕಿದೆ. ಎದುರಾಳಿಗಳ ಪ್ರಚಾರಕ್ಕೆ ಆಹಾರವಾಗದೆ, ಆರ್ಥಿಕತೆಯನ್ನು ಪುನರ್ ನಿರ್ಮಿಸುವ 'ಶಕ್ತಿ'ಯಾಗಿ ಡೊನಾಲ್ಡ್ ಟ್ರಂಪ್ ಕಾಣಿಸಿಕೊಳ್ಳಬೇಕಿದೆ. ಇದಾದರೆ, ಮತ್ತೆ ಅಧಿಕಾರ ಕೈಸೇರುವುದು ನಿಶ್ಚಿತ ಎಂಬುದು ರಿಪಬ್ಲಿಕನ್ಸ್ ನಂಬಿಕೆ.

ಕೊರೊನಾ ಕೊಲ್ಲಲು ಐಡಿಯಾ ಕೊಟ್ಟು ಯದ್ವಾತದ್ವಾ ಟ್ರೋಲ್ ಆದ ಟ್ರಂಪ್!ಕೊರೊನಾ ಕೊಲ್ಲಲು ಐಡಿಯಾ ಕೊಟ್ಟು ಯದ್ವಾತದ್ವಾ ಟ್ರೋಲ್ ಆದ ಟ್ರಂಪ್!

ಡೊನಾಲ್ಡ್ ಟ್ರಂಪ್ ಕಾರ್ಯತಂತ್ರವೇ ಮಾನದಂಡ

ಡೊನಾಲ್ಡ್ ಟ್ರಂಪ್ ಕಾರ್ಯತಂತ್ರವೇ ಮಾನದಂಡ

''ನಾವು ವಿಶ್ವದ ಶ್ರೇಷ್ಠ ಆರ್ಥಿಕತೆಯನ್ನು ನಿರ್ಮಿಸಿದ್ದೇವೆ. ನಾನು ಅದನ್ನು ಎರಡನೇ ಬಾರಿ ಮಾಡುತ್ತೇನೆ'' ಎಂದು ತಿಂಗಳ ಹಿಂದೆ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದರೆ ಕೊರೊನಾ ಆ ಸಾಧ್ಯತೆಯನ್ನು ತಳೆಕೆಳಗು ಮಾಡಿದೆ. ಹೀಗಾಗಿ, ಟ್ರಂಪ್ ರವರ ಈ ಹೇಳಿಕೆಯೇ ಡೆಮೊಕ್ರಾಟ್ಸ್ ಗೆ ಚುನಾವಣಾ ಅಸ್ತ್ರವಾಗುವ ಸಾಧ್ಯತೆ ಇದೆ. ಇದಕ್ಕೆ ಪೂರಕ ಎನ್ನುವಂತೆ ಇತ್ತೀಚಿನ ಮತದಾನ ಅಲೆ ಕೂಡ ಡೆಮೊಕ್ರಾಟ್ಸ್ ಪರವಾಗಿದೆ. ಅಮೇರಿಕಾದ ಪ್ರಬಲ ಮತ ಕ್ಷೇತ್ರಗಳಾದ ಆರಿಝೋನಾ, ಕೊಲೊರಾಡೋ, ಉತ್ತರ ಕಾರೋಲಿನಾ ನಲ್ಲಿ ಡೆಮೊಕ್ರಾಟ್ಸ್ ಸ್ಪರ್ಧಿಗಳೇ ಮುಂದಿದ್ದಾರೆ. ಈ ಎಲ್ಲಾ ಕ್ಷೇತ್ರಗಳಲ್ಲಿ ರಿಪಬ್ಲಿಕನ್ಸ್ ಮರಳಿ ಪ್ರಭುತ್ವ ಸಾಧಿಸಬೇಕಾದರೆ ಡೊನಾಲ್ಡ್ ಟ್ರಂಪ್ ರವರ ಮುಂದಿನ ನಡೆ ಮತ್ತು ಕಾರ್ಯತಂತ್ರವೇ ಮಾನದಂಡವಾಗಲಿದೆ.

ಪುನರ್ ಆಯ್ಕೆ ಆಗುತ್ತಾರಾ ಟ್ರಂಪ್.?

ಪುನರ್ ಆಯ್ಕೆ ಆಗುತ್ತಾರಾ ಟ್ರಂಪ್.?

ಕೊರೊನಾ ವೈರಸ್ ವಿಚಾರದಲ್ಲಿ ತೆಗೆದುಕೊಂಡ ನಿರ್ಧಾರಗಳು ಡೊನಾಲ್ಡ್ ಟ್ರಂಪ್ ಜನಪ್ರಿಯತೆಗೆ ಧಕ್ಕೆತಂದಿದ್ದು, ರಾಜಕೀಯದ ಮೇಲೂ ಪರಿಣಾಮ ಬೀರಿರುವುದು ಟ್ರಂಪ್ ತಂಡ ನಡೆಸಿದ ಸಮೀಕ್ಷೆಯಲ್ಲೇ ಬಹಿರಂಗವಾಗಿದೆ. ಹೀಗಾಗಿ, ಸಂಕಷ್ಟದ ನಡುವೆಯೇ ಮುಂಬರುವ ಚುನಾವಣೆಗೆ ಟ್ರಂಪ್ ರವರನ್ನೊಳಗೊಂಡಂತೆ ರಿಪಬ್ಲಿಕನ್ಸ್ ಸಿದ್ಧವಾಗಬೇಕಿದೆ. ಈ ನಿಟ್ಟಿನಲ್ಲಿ ಜಾಹೀರಾತು ಅಭಿಯಾನವನ್ನು ಗುರಾಣಿಯಾಗಿಸಿಕೊಳ್ಳುವ ಮೂಲಕ ಜನಪ್ರಿಯತೆಯ ಹಳಿಗೆ ಮರಳಲು ರಿಪಬ್ಲಿಕನ್ಸ್ ಕಾರ್ಯಾರಂಭಿಸಿದ್ದಾರೆ. ''ಮುಂದಿನ ಚುನಾವಣೆಯ ವೇಳೆ ಪಕ್ಷಕ್ಕಿಂತ ವ್ಯಕ್ತಿಗತ ವರ್ಚಸ್ಸೇ ಕೇಂದ್ರೀಕೃತವಾದರೆ, ಟ್ರಂಪ್ ಸೋಲು ಖಚಿತ. ಅಷ್ಟರೊಳಗೆ ಕುಸಿದಿರುವ ದೇಶದ ಆರ್ಥಿಕ ವ್ಯವಸ್ಥೆ ಜೊತೆಗೆ ನಿರುದ್ಯೋಗ ಸಮಸ್ಯೆಯನ್ನೂ ಟ್ರಂಪ್ ನಿವಾರಿಸಿದರೆ, ಅವರು ಪುನರ್ ಆಯ್ಕೆ ಆಗುವ ಸಾಧ್ಯತೆ ಇದೆ'' ಎಂದು ಸಲಹೆಗಾರ ಮಿ.ಬ್ಲ್ಯಾಕ್ ಹೇಳಿದ್ದಾರೆ.

English summary
Republicans Are Nervous That They Are At Risk Of Losing Presidency.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X