ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಚುನಾವಣೆ: ಸೋಲೊಪ್ಪಿಕೊಳ್ಳುವಂತೆ ಟ್ರಂಪ್‌ಗೆ ಮೆಲಾನಿಯಾ ಸಲಹೆ

|
Google Oneindia Kannada News

ವಾಷಿಂಗ್ಟನ್, ನವೆಂಬರ್ 09: ಚುನಾವಣೆ ಸೋಲನ್ನು ಒಪ್ಪಿಕೊಳ್ಳುವಂತೆ ಡೊನಾಲ್ಡ್ ಟ್ರಂಪ್‌ಗೆ ಮೆಲಾನಿಯಾ ಟ್ರಂಪ್ ಸಲಹೆ ನೀಡಿದ್ದಾರೆ.

ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋತಿರುವ ಕಾರಣ ಪತ್ನಿ ಮೆಲಾನಿಯಾ ವಿಚ್ಛೇದನ ನೀಡುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದ ಬೆನ್ನಲ್ಲೇ ಈಗ ಈ ಸುದ್ದಿ ಹರಿದಾಡಲಾರಂಭಿಸಿದೆ.

ಅಮೆರಿಕ ಚುನಾವಣೆ: ಸೋತ ಟ್ರಂಪ್‌ಗೆ ಪತ್ನಿ ವಿಚ್ಛೇದನ! ಅಮೆರಿಕ ಚುನಾವಣೆ: ಸೋತ ಟ್ರಂಪ್‌ಗೆ ಪತ್ನಿ ವಿಚ್ಛೇದನ!

ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಗೆದ್ದಿರುವುದು ಸತ್ಯ ಅದನ್ನು ಒಪ್ಪಿಕೊಂಡು ಸೋಲೊಪ್ಪಿಕೊಳ್ಳಿ ಎಂದು ಹೇಳಿದವರಲ್ಲಿ ಮೆಲಾನಿಯಾ ಟ್ರಂಪ್ ಕೂಡ ಇದ್ದಾರೆ.

Report Says Melania Wants Donald Trump To Concede Defeat To Joe Biden

ಬೈಡನ್ ಅವರು ಮುಂದಿನ ಅಧ್ಯಕ್ಷ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಇದರ ಹಿಂದೆಯೇ ಈ ಎಲ್ಲಾ ಬೆಳವಣಿಗೆಗಳು ನಡೆದಿವೆ.

ಟ್ರಂಪ್ ಅಳಿಯ ಜಾರೆಡ್ ಕುಶ್ನರ್ ಅವರು ಟ್ರಂಪ್ ಅವರ ಬಳಿ ಸೋಲೊಪ್ಪಿಕೊಳ್ಳುವಂತೆ ಈಗಾಗಲೇ ಮನವಿ ಮಾಡಿದ್ದಾರೆ. ಮೆಲಾನಿಯಾ ಟ್ರಂಪ್ ಕಳೆದ ತಿಂಗಳು ಟ್ರಂಪ್ ಗೆಲುವಿಗಾಗಿ ಚುನಾವಣಾ ಪ್ರಚಾರ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಆದರೆ ಈ ಕುರಿತು ಮೆಲಾನಿಯಾ ಟ್ರಂಪ್ ಇದುವರೆಗೂ ಯಾವುದೇ ಹೇಳಿಕೆಯನ್ನು ಬಹಿರಂಗವಾಗಿ ನೀಡಿಲ್ಲ. ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್ ವಿರುದ್ಧ ಸೋಲು ಕಂಡ ಟ್ರಂಪ್ ಜೊತೆಗಿನ ವೈವಾಹಿಕ ಬದುಕನ್ನು ಅಂತ್ಯಗೊಳಿಸುವ ಬಗ್ಗೆ ಪತ್ನಿ ಮೆಲಾನಿಯಾ ಯೋಚಿಸುತ್ತಿದ್ದಾರೆ.

ಶೀಘ್ರದಲ್ಲಿ ಟ್ರಂಪ್ ಅವರಿಗೆ ಮೆಲಾನಿಯಾ ವಿಚ್ಛೇದನ ನೀಡುತ್ತಾರೆ ಎನ್ನಲಾಗಿದೆ. ಅಮೆರಿಕಾ ಶ್ವೇತಭವನದ ಮಾಜಿ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಟ್ರಂಪ್ ಹಾಗೂ ಮೆಲಾನಿಯಾ ನಡುವಿನ 15 ವರ್ಷಗಳ ವೈವಾಹಿಕ ಜೀವನ ಕಡಿದುಕೊಳ್ಳಲು ಕ್ಷಣಗಣನೆ ಶುರುವಾಗಿದೆ. ಶ್ವೇತಭವನದಿಂದ ಹೊರಗೆ ಕಾಲಿಡುತ್ತಿದ್ದಂತೆ ವಿಚ್ಛೇದನ ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.

English summary
US First Lady Melania Trump has joined other members of her husband Donald Trump's inner circle asking him to accept his loss and concede defeat to President-elect Joe Biden, informed a source familiar with the conversations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X