ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೆಮ್‌ಡೆಸಿವಿರ್ ಕೊವಿಡ್ ರೋಗಿಗಳ ಮರಣ ಪ್ರಮಾಣ ಕಡಿತಗೊಳಿಸುವುದಿಲ್ಲ

|
Google Oneindia Kannada News

ರೆಮ್‌ಡೆಸಿವಿರ್ ಕೊರೊನಾ ಲಸಿಕೆಯು ಕೊವಿಡ್ ರೋಗಿಗಳ ಮರಣ ಪ್ರಮಾಣವನ್ನು ಕಡಿತಗೊಳಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಇದು ವಿಶ್ವ ಆರೋಗ್ಯ ಸಂಸ್ಥೆ ನಡೆಸಿದ ಪ್ರಾಯೋಗಿಕ ಪರೀಕ್ಷೆಯಲ್ಲಿ ತಿಳಿದುಬಂದಿದೆ. ಈ ಲಸಿಕೆಯು ರೋಗಿಗಳು ಆಸ್ಪತ್ರೆಯಲ್ಲಿರುವ ಅವಧಿ ಅಥವಾ ಕೊವಿಡ್ ರೋಗಿಗಳ ಮರಣ ಪ್ರಮಾಣ ಎರಡನ್ನೂ ಕಡಿತಗೊಳಿಸುವುದಿಲ್ಲ.

ಫ್ರಾನ್ಸ್‌ನಲ್ಲಿ ಕಳೆದ 24 ಗಂಟೆಯಲ್ಲಿ 30 ಸಾವಿರ ಕೊರೊನಾ ಸೋಂಕಿತರು ಪತ್ತೆ ಫ್ರಾನ್ಸ್‌ನಲ್ಲಿ ಕಳೆದ 24 ಗಂಟೆಯಲ್ಲಿ 30 ಸಾವಿರ ಕೊರೊನಾ ಸೋಂಕಿತರು ಪತ್ತೆ

ಈ ಆಂಟಿ ವೈರಲ್ ಔಷಧವನ್ನು ಇತ್ತೀಚೆಗೆಷ್ಟೇ ಅಮರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೂ ಕೂಡ ನೀಡಲಾಗಿತ್ತು.30ಕ್ಕೂ ಹೆಚ್ಚು ದೇಶಗಳಲ್ಲಿ 11,266 ವಯಸ್ಕ ರೋಗಿಗಳಿಗೆ ರೆಮ್‌ಡೆಸಿವಿರ್ ಹಾಗೂ ಹೈಡ್ರಾಕ್ಸಿಕ್ಲೋರೊಕ್ವಿನ್, ಎಚ್‌ಐವಿ ವಿರೋಧಿ ಔಷಧ, ಲೋಪಿನಾವಿರ್, ರಿಟೊನವೀರ್ ಮತ್ತು ಇಂಟರ್ಪೆರಾನ್ ಸೇರಿದಂತೆ ನಾಲ್ಕು ಸಂಭಾವ್ಯ ಔಷಧಗಳನ್ನು ಮೌಲ್ಯಮಾಪನ ಮಾಡಲಾಗಿದೆ ಎಂಬುದು ತಿಳಿದುಬಂದಿದೆ.

Remdesivir Didnt Cut Mortality In Covid Patients

ಕೊವಿಡ್ 19ನೊಂದಿಗೆ ಆಸ್ಪತ್ರೆಗೆ ದಾಖಲಾದ ರೋಗಿಗಳ ಮೇಲೆ ಯಾವುದೇ ಪರಿಣಾಮ ಬೀರಿಲ್ಲ.ಈ ತಿಂಗಳ ಆರಂಭದಲ್ಲಿ ಗಿಲ್ಯಾಡ್ ಅವರ ಯುಎಸ್ ಅಧ್ಯಯನದ ದತ್ತಾಂಶವು 1062 ರೋಗಿಗಳನ್ನು ಒಳಗೊಂಡ ಪ್ರಯೋಗದಲ್ಲಿ ಪ್ಲಸೀಬೊ ಪಡೆದ ರೋಗಿಗಳಿಗೆ ಹೋಲಿಸಿದರೆ ಚೇತರಿಕೆ ಸಮಯವನ್ನು ಐದು ದಿನಗಳವರೆಗೆ ಕಡಿತಗೊಳಿಸಿದೆ ಎಂದು ತೋರಿಸಿದೆ.

ಸೌಮ್ಯಾ ಸ್ವಾಮಿನಾಥನ್ ಮಾತನಾಡಿ, ಅಧ್ಯಯನದ ಸಮಯದಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್, ಲೋಪಿನಾವಿರ್, ರಿಟೊನವಿರ್ ಅನ್ನು ಪರಿಣಾಮಕಾರಿಯಲ್ಲವೆಂದು ಸಾಬೀತುಪಡಿಸಿದ ನಂತರ ಜೂನ್‌ನಿಂದಲೇ ಅವುಗಳ ಪ್ರಯೋಗವನ್ನು ನಿಲ್ಲಿಸಲಾಗಿದೆ. ಆದರೆ ಇತರೆ ಪ್ರಯೋಗಗಳು 30ಕ್ಕೂ ದೇಶಗಳಲ್ಲಿ 500 ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ನಡೆದಿದೆ.

Recommended Video

India China ನಡುವೆ ಮಹತ್ವದ ಮಾತುಕತೆ | Oneindia Kannada

ಅಮೆರಿಕದಲ್ಲಿ ತುರ್ತು ಬಳಕೆಗೆ ರೆಮ್‌ಡೆಸಿವಿರ್ ಔಷಧಕ್ಕೆ ಒಪ್ಪಿಗೆ ನೀಡಲಾಗಿದೆ.

English summary
Gilead Sciences Inc's remdesivir had little or no effect on COVID-19 patients' length of hospital stay or chances of survival, a clinical trial by the World Health Organization (WHO) has found.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X