ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಡಿ ವಿವಾದ: ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಅಮೇರಿಕಾ

|
Google Oneindia Kannada News

ವಾಷಿಂಗ್ಟನ್, ಮೇ 27: ಭಾರತ ಮತ್ತು ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇಂದು ಹೇಳಿದ್ದಾರೆ.

Recommended Video

ಧೋನಿ ಬಳಿ ಕ್ಷಮೆ ಕೇಳಿದ ಮಹಮದ್ ಕೈಫ್..? | Oneindia Kannada

ಈ ಕುರಿತು ಟ್ವಿಟ್ಟರ್ ನಲ್ಲಿ ಮಾಹಿತಿ ನೀಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಉಲ್ಬಣಗೊಂಡಿರುವ ಗಡಿ ವಿವಾದದ ಕುರಿತು ಮಧ್ಯಸ್ಥಿಕೆ ವಹಿಸಲು ಅಮೇರಿಕಾ ಸಿದ್ಧವಿದೆ ಎಂದು ಭಾರತ ಮತ್ತು ಚೀನಾಗೆ ತಿಳಿಸಿರುವುದಾಗಿ ಟ್ವೀಟ್ ಮಾಡಿದ್ದಾರೆ.

ದೇಶದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಬದ್ಧರಾಗಬೇಕು, ಎಂಥಾ ಪರಿಸ್ಥಿತಿಗೂ ಸಿದ್ಧರಾಗಿರಬೇಕು ಎಂದು ನಿನ್ನೆಯಷ್ಟೇ (ಮೇ 26) ತಮ್ಮ ಸೇನೆಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಕರೆ ನೀಡಿದ್ದರು. ಹಾಗೇ, ವಿವಾದಿತ ಗಡಿ ಪ್ರದೇಶದಲ್ಲಿ ಹೆಚ್ಚುವರಿ ಸೇನೆಯನ್ನ ನಿಯೋಜಿಸಲು ಆದೇಶಿಸಿದ್ದರು.

ಭಾರತದೊಂದಿಗೆ ಯುದ್ಧ ನಡೆಸಲು ಸನ್ನದ್ಧವಾದ ಚೀನಾಭಾರತದೊಂದಿಗೆ ಯುದ್ಧ ನಡೆಸಲು ಸನ್ನದ್ಧವಾದ ಚೀನಾ

ಚೀನಾದ ಈ ನಡೆಯ ಬಳಿಕ ಭಾರತದ ಮಿತ್ರ ರಾಷ್ಟ್ರ ಅಮೇರಿಕಾ ಕಡೆಯಿಂದ 'ಮಧ್ಯಸ್ಥಿಕೆ' ವಹಿಸುವ ಪ್ರಸ್ತಾಪ ಹೊರಬಿದ್ದಿದೆ. ಇದು ಭಾರತದ ಪಾಲಿಗೆ ಕೊಂಚ ನಿರಾಳತೆಯನ್ನು ಒದಗಿಸಿದೆ.

Ready To Mediate Border Dispute Between India And China: Tweets US President Donald Trump

ಈ ಹಿಂದೆ.. ಅಂದ್ರೆ, ಮೇ 5 ರಂದು ಲಡಾಖ್ ನ ಪಾಂಗೊಂಗ್ ಸರೋವರದ ಉತ್ತರ ದಂಡೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿತ್ತು. ಮೇ 9 ರಂದು ಸಿಕ್ಕಿಂನ ನಾಥುಲಾ ಪಾಸ್ ಬಳಿ ಸೇನೆಗಳು ಮುಖಾಮುಖಿಗೊಂಡು ಸಂಘರ್ಷದ ಸನ್ನಿವೇಶ ನಿರ್ಮಾಣವಾಗಿತ್ತು.

ಗಡಿ ಉದ್ವಿಗ್ನತೆ: ಆತಂಕ ಹುಟ್ಟಿಸಿದ ಚೀನಾ ಆಧ್ಯಕ್ಷರ ಮಾತು ಹಾಗೂ ಪ್ರಧಾನಿ ಮೋದಿ ಸಭೆಗಡಿ ಉದ್ವಿಗ್ನತೆ: ಆತಂಕ ಹುಟ್ಟಿಸಿದ ಚೀನಾ ಆಧ್ಯಕ್ಷರ ಮಾತು ಹಾಗೂ ಪ್ರಧಾನಿ ಮೋದಿ ಸಭೆ

ಈ ಎರಡೂ ಘಟನೆಗಳು ಭಾರತ ಮತ್ತು ಚೀನಾದ ನಡುವಿನ ಗಡಿ ಸಮಸ್ಯೆಯನ್ನು ಉಲ್ಬಣಗೊಳ್ಳುವಂತೆ ಮಾಡಿದೆ. 2017 ರಲ್ಲಿ ಭಾರತದ ಗಡಿ ಸಮೀಪದಲ್ಲಿರುವ ಡೋಕ್ಲಾಮ್ ನಲ್ಲಿ ರಸ್ತೆ ನಿರ್ಮಿಸುವ ಮೂಲಕ ಚೀನಾ ಗಡಿ ತಗಾದೆಗೆ ಮುನ್ನುಡಿ ಬರೆದಿತ್ತು. ಅಂದಿನಿಂದ ಆರಂಭಗೊಂಡ ಉಭಯ ರಾಷ್ಟ್ರಗಳ ನಡುವಿನ ಸರಹದ್ದಿನ ಸಮಸ್ಯೆ ಈಗ ಬೃಹತ್ ಸ್ವರೂಪವನ್ನು ಪಡೆದುಕೊಂಡು ಯುದ್ಧದ ಕಾರ್ಮೋಡ ಕವಿಯುವಂತೆ ಮಾಡಿದೆ.

English summary
Ready to mediate border dispute between India and China: Tweets US President Donald Trump.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X