• search
 • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅಮೆರಿಕದ ಅಧ್ಯಕ್ಷೀಯ ಚುನಾವಣೆ ಮೇಲೆ ರ‍್ಯಾಪರ್ ಗಳ ಕಣ್ಣು

|

ವಾಷಿಂಗ್ಟನ್, ಜುಲೈ 23:ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಾವು ರಂಗೇರುತ್ತಿರುವ ಬೆನ್ನಲ್ಲೇ ಹೊಸ ಹೊಸ ಸ್ಪರ್ಧಿಗಳ ಪ್ರವೇಶವಾಗುತ್ತಿದೆ.

   Sonu Sood : ವಲಸೆ ಕಾರ್ಮಿಕರಿಗಾಗಿ ಹೊಸ ಯೋಜನೆ ರೂಪಿಸಿದ ಬಾಲಿವುಡ್ ಸ್ಟಾರ್ | Oneindia Kannada

   ಅಧ್ಯಕ್ಷೀಯ ಚುನಾವಣೆಗೆ ತಾನು ಸ್ಪರ್ಧಿ ಎಂದು ಕಾನ್ಯೆ ವೆಸ್ಟ್ ಘೋಷಿಸಿರುವ ಬೆನ್ನಲ್ಲೇ ಖ್ಯಾತ ರ‍್ಯಾಪರ್ ಉಝಿ ವರ್ಟ್ ಕೂಡ ತಾನು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಘೋಷಿಸಿದ್ದಾರೆ. ಕಾನ್ಯೆ ವೆಸ್ಟ್‌ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅಮೆರಿಕದ ಜನತೆ ಗೊಂದಲದಲ್ಲಿರುವ ಬೆನ್ನಲ್ಲೇ ಈಗ ಉಝಿ ವರ್ಟ್ ಹೇಳಿಕೆ ಕುತೂಹಲ ಮೂಡಿಸಿದೆ.

   ಯುಎಸ್ ಎಲೆಕ್ಷನ್: ಹಿನ್ನಡೆ ಅನುಭವಿಸಿದ ಗಾಯಕ ಕಾನ್ಯೆ ವೆಸ್ಟ್

   ಈ ಕುರಿತು ಟ್ವಿಟ್ಟರ್‌ನಲ್ಲಿ ಖುದ್ದು ಹೇಳಿಕೆ ನೀಡಿರುವ ವರ್ಟ್ ನನಗೆ ಸುಸ್ತಾಗಿ ಹೋಗಿದೆ, ನಾನು ಕೂಡ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಮತ ನೀಡಿ ಎಂದು ಹೇಳಿಕೊಂಡಿದ್ದಾರೆ.

   ಇನ್ನೊಂದು ಟ್ವೀಟ್ ಮಾಡಿ ವೋಟ್ ಫಾರ್ ಬೇಬಿ ಪ್ಲೂಟೊ ಎಂದು ಬರೆದುಕೊಂಡಿದ್ದಾರೆ. ಅಮೆರಿಕದಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಉಝಿ ವರ್ಟ್ ಹೇಳಿಕೆ ಈಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

   ಟ್ರಂಪ್ ಹಾಗೂ ಜೋ ಬಿಡನ್ ಈಗಾಗಲೇ ರಿಪಬ್ಲಿಕ್ ಹಾಗೂ ಡೆಮಾಕ್ರೆಟಿಕ್ ಪಕ್ಷಗಳ ಅಧಿಕೃತ ಅಭ್ಯರ್ಥಿಗಳಾಗಿ ಹೊರ ಹೊಮ್ಮಿದ್ದಾರೆ. ಈಗ ಇಬ್ಬರು ರ‍್ಯಾಪರ್ ಗಳ ಸ್ಪರ್ಧೆ ಕುತೂಹಲದ ಜೊತೆ ಗೊಂದಲವನ್ನೂ ಮೂಡಿಸಿದೆ.

   ಕಳೆದ ಒಂದೆರೆಡು ತಿಂಗಳ ಹಿಂದೆ ಅಮೆರಿಕದಲ್ಲಿ ಕಪ್ಪು ಹಾಗೂ ಬಿಳಿಯರ ನಡುವಿನ ಗಲಾಟೆ ತಾರಕ್ಕೇರಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ರಾಪರ್‌ಗಳ ಸ್ಪರ್ಧೆಗೂ ಕಪ್ಪು ಬಿಳಿಯರ ಗಲಾಟೆಗೂ ಸಂಬಂಧವಿದೆ ಎನ್ನಲಾಗುತ್ತಿದೆ.

   ಒಂದೊಮ್ಮೆ ಈ ಸ್ಪರ್ಧೆ ಖಚಿತವಾದರೆ ಇದು ಟ್ರಂಪ್‌ಗೆ ಇನ್ನಷ್ಟು ವರವಾಗಿ ಪರಿಣಮಿಸಲಿದೆ ಎಂದು ಹೇಳಲಾಗುತ್ತಿದೆ.

   English summary
   Rapper Lil Uzi vert took Twitter and said I am Tired of this I am Running for president vote for baby pluto
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X