• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿಡಿಯೋ; ಟೈಮ್ಸ್ ಸ್ಕ್ವೇರ್‌ನಲ್ಲಿ ಮೂಡಿಬಂದ ರಾಮ ಮಂದಿರ

|

ನ್ಯೂಯಾರ್ಕ್, ಆಗಸ್ಟ್ 05: ಭಾರತದ ಪಾಲಿಗೆ ಇಂದು ಐತಿಹಾಸಿಕ ದಿನವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಶಂಕು ಸ್ಥಾಪನೆ ಮಾಡಿದ್ದಾರೆ. ಭಾರತದಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ.

ಅಮೆರಿಕದ ನ್ಯೂಯಾರ್ಕ್ ನಗರದಲ್ಲಿರುವ ಪ್ರತಿಷ್ಠಿತ ಟೈಮ್ಸ್ ಸ್ಕ್ವೇರ್‌ನಲ್ಲಿಯೂ ರಾಮ ಮಂದಿರ ಮೂಡಿ ಬಂದಿದೆ. ಟೈಮ್ಸ್ ಸ್ಕ್ವೇರ್‌ನಲ್ಲಿ ಶ್ರೀರಾಮನ 3ಡಿ ಚಿತ್ರ ಮೂಡಿಸಲಾಗುತ್ತದೆ ಎಂದು ಮಂಗಳವಾರ ಹೇಳಿಕೆ ನೀಡಲಾಗಿತ್ತು.

ವಿಡಿಯೋ; ಭಾವುಕರಾಗಿ ರಾಮ ಮಂದಿರ ಭೂಮಿ ಪೂಜೆ ವೀಕ್ಷಿಸಿದ ಬಿಎಸ್‌ವೈ

ಇಂದು ರಾಮನ ಚಿತ್ರ ಪರದೆ ಮೇಲೆ ಬರುತ್ತಿದ್ದಂತೆ ಅಲ್ಲಿರುವ ಭಾರತೀಯರು ಜೈ ಶ್ರೀರಾಮ್ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಟೈಮ್ಸ್ ಸ್ಕ್ವೇರ್‌ನಲ್ಲಿ ಶ್ರೀ ರಾಮನ ಚಿತ್ರವನ್ನು ಪ್ರದರ್ಶನ ಮಾಡುವ ಮೂಲಕ ಭಾರತ-ಅಮೆರಿಕೆ ಬಾಂಧವ್ಯ ಮತ್ತಷ್ಟು ಗಟ್ಟಿಯಾಗಿದೆ.

ಟೆಂಟಿನಲ್ಲಿದ್ದ ರಾಮ ಭವ್ಯ ಮಂದಿರಕ್ಕೆ ಬಂದ: ಪ್ರಧಾನಿ ಮೋದಿ

ಟೈಮ್ಸ್ ಸ್ಕ್ವೇರ್‌ನಲ್ಲಿನ ಪರದೆಯಲ್ಲಿನ ಶ್ರೀರಾಮನ ಚಿತ್ರ, ಪಕ್ಕದಲ್ಲಿ ರಾಮ ಮಂದಿರದ ಚಿತ್ರ ಅದರ ಪಕ್ಕದಲ್ಲಿ ಭಾರತದ ಧ್ವಜ ಇರುವ ಚಿತ್ರಗಳು ಪ್ರದರ್ಶನವಾಗುತ್ತಿವೆ.

ಮಂಗಳವಾರ ಅಮೆರಿಕನ್ ಇಂಡಿಯಾ ಪಬ್ಲಿಕ್ ವ್ಯವಹಾರ ಸಮಿತಿ ಮುಖ್ಯಸ್ಥ ಜಗದೀಶ್ ಸೆವ್ಹಾನಿ ಅವರು ಟೈಮ್ಸ್ ಸ್ಕ್ವೇರ್‌ನಲ್ಲಿನ ಪರದೆಯಲ್ಲಿ ರಾಮ ಮಂದಿರ, ಶ್ರೀರಾಮನ ಚಿತ್ರವನ್ನು ಪ್ರದರ್ಶನ ಮಾಡಲಾಗುತ್ತದೆ ಎಂದು ಹೇಳಿದ್ದರು.

ಅಯೋಧ್ಯೆ ಪೂಜೆ: 'ಬಾಬ್ರಿ ಮಸೀದಿ ಇತ್ತು, ಮುಂದೆಯೂ ಇರಲಿದೆ'- ಓವೈಸಿ

ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಮಂದಿರಕ್ಕೆ ಶಂಕು ಸ್ಥಾಪನೆ ಮಾಡುವಾಗ ಅಮೆರಿಕದಲ್ಲಿರುವ ಭಾರತೀಯರು ಶ್ವೇತ ಭವನದ ಮುಂದೆ ಘೋಷಣೆಗಳನ್ನು ಕೂಗಿ ಸಂಭ್ರಮಾಚರಣೆ ಮಾಡಿದ್ದರು.

English summary
A digital billboard of Ram Mandir comes up in America's New York Times Square. PM Narendra Modi performed bhoomi puja for Ram Mandir in Ayodhya today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X