ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಜಾಗತಿಕ ಒಳಿತಿನ ಬಲ'ವಾಗಿ ಕಾರ್ಯನಿರ್ವಹಿಸಲಿದೆ ಕ್ವಾಡ್ ಸಭೆ; ಮೋದಿ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 25: ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ಪ್ರಧಾನಿ ಯೋಶಿಹಿದೆ ಸುಗಾ ಅವರೊಂದಿಗೆ 'ವ್ಯಾಪಕ ಹಾಗೂ ಉತ್ಪಾದಕ' ಚರ್ಚೆ ನಡೆಸಿರುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ.

ಜಪಾನ್, ಆಸ್ಟ್ರೇಲಿಯಾ ಹಾಗೂ ಅಮೆರಿಕ ನಾಯಕರೊಂದಿಗೆ ಶುಕ್ರವಾರ ಶ್ವೇತಭವನದಲ್ಲಿ ಪ್ರಧಾನಿ ಮೋದಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು.

ಕ್ವಾಡ್ ನಾಯಕರ ಸಭೆಯಲ್ಲಿ ತಮ್ಮ ಆರಂಭಿಕ ಭಾಷಣದಲ್ಲಿ ಮಾತನಾಡಿದ ಮೋದಿ, 'ಜಾಗತಿಕ ಒಳಿತಿನ ಬಲವಾಗಿ ಕ್ವಾಡ್ ಸಭೆ ಕಾರ್ಯನಿರ್ವಹಿಸಲಿದೆ' ಎಂದು ಹೇಳಿದ್ದಾರೆ. ಭಾರತ, ಅಮೆರಿಕ, ಆಸ್ಟ್ರೇಲಿಯಾ ಹಾಗೂ ಜಪಾನ್ ಸೇರಿದಂತೆ ನಾಲ್ಕು ದೇಶಗಳ ನಡುವಿನ ಸಹಕಾರವು ಇಂಡೋ-ಪೆಸಿಫಿಕ್‌ನಲ್ಲಿ ಶಾಂತಿ ಹಾಗೂ ಸಮೃದ್ಧಿಯನ್ನು ಖಾತ್ರಿಪಡಿಸಲಿದೆ ಎಂದು ಭರವಸೆ ನೀಡಿದರು.

Quad Will Work In The Role Of Force For Global Good Says Modi

ಕ್ವಾಡ್ ಸಭೆಗೂ ಮುನ್ನ ಮೋದಿ ಹಾಗೂ ಬೈಡನ್ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ಈ ಸಂದರ್ಭ ಭಾರತ-ಅಮೆರಿಕ ವಾಣಿಜ್ಯ ವ್ಯವಹಾರ, ಕೊರೊನಾ ಸೋಂಕು, ಹವಾಮಾನ ಬದಲಾವಣೆ, ಇಂಡೋ-ಪೆಸಿಫಿಕ್ ಸಂಬಂಧದಲ್ಲಿನ ಸ್ಥಿರತೆ ಹೀಗೆ ಹಲವು ವಿಷಯಗಳ ಕುರಿತು ಚರ್ಚಿಸಿದರು.

ಈ ದ್ವಿಪಕ್ಷೀಯ ಭೇಟಿಯು ಈ ವರ್ಷದ ಜನವರಿಯಲ್ಲಿ ಯುಎಸ್ ಅಧ್ಯಕ್ಷರಾಗಿ ಜೋ ಬಿಡೆನ್ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ಮೊದಲ ವೈಯಕ್ತಿಕ ಭೇಟಿಯಾಗಿದೆ.

ಭಾರತ- ಯುಎಸ್ ಸಂಬಂಧಕ್ಕೆ ಹೊಸ ದೃಷ್ಟಿಕೋನ ಬೆಸೆದ ಮೋದಿ- ಬೈಡನ್ ಭೇಟಿಭಾರತ- ಯುಎಸ್ ಸಂಬಂಧಕ್ಕೆ ಹೊಸ ದೃಷ್ಟಿಕೋನ ಬೆಸೆದ ಮೋದಿ- ಬೈಡನ್ ಭೇಟಿ

"ಇಂದಿನ ದ್ವಿಪಕ್ಷೀಯ ಶೃಂಗಸಭೆ ಮುಖ್ಯವಾಗಿದ್ದು, ನಾವು ಈ ಶತಮಾನದ ಮೂರನೇ ದಶಕದ ಆರಂಭದಲ್ಲಿ ಭೇಟಿಯಾಗುತ್ತಿದ್ದೇವೆ. ಈ ದಶಕವು ಹೇಗೆ ರೂಪುಗೊಳ್ಳುತ್ತದೆ ಎಂಬುದರಲ್ಲಿ ನಿಮ್ಮ ನಾಯಕತ್ವವು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಮತ್ತು ಅಮೆರಿಕ ನಡುವಿನ ಬಲವಾದ ಸ್ನೇಹ ಬೀಜಗಳನ್ನು ಬಿತ್ತಲಾಗಿದೆ," ಎಂದು ಪ್ರಧಾನಿ ಮೋದಿ ಹೇಳಿದರು.

"ಭಾರತ ಮತ್ತು ಅಮೆರಿಕ ವ್ಯವಹಾರವು ತನ್ನದೇ ಪ್ರಾಮುಖ್ಯ ಹೊಂದಿದೆ. ಈ ದಶಕದಲ್ಲಿ ಅಮೆರಿಕದೊಂದಿಗೆ ಅನೇಕ ವಿಷಯಗಳಲ್ಲಿ ಪರಸ್ಪರ ಪೂರಕವಾಗಿ ಕೆಲಸ ನಿರ್ವಹಿಸಬೇಕಾಗಿದೆ. ಅದು ಭಾರತಕ್ಕೆ ಅಗತ್ಯವಾಗಿದೆ ಮತ್ತು ಭಾರತದೊಂದಿಗೆ ಅಮೆರಿಕಕ್ಕೂ ಉಪಯುಕ್ತವಾಗುವ ಅನೇಕ ವಿಷಯಗಳಿವೆ. ಈ ದಶಕದಲ್ಲಿ ವಾಣಿಜ್ಯ ವ್ಯವಹಾರ ಒಂದು ಪ್ರಮುಖ ಕ್ಷೇತ್ರವಾಗಲಿದೆ," ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟಿದ್ದಾರೆ.

Quad Will Work In The Role Of Force For Global Good Says Modi

ಸೆಪ್ಟೆಂಬರ್‌ 25 ರಂದು ನ್ಯೂಯಾರ್ಕ್ ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್ ಜಿಎ) 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹವಾಮಾನ ಬದಲಾವಣೆ, ಭಯೋತ್ಪಾದನೆ ಹಾಗೂ ಕೊರೊನಾ ವೈರಸ್‌ ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ.

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ: ಮಾರಿಸನ್ -ಮೋದಿ ದ್ವಿಪಕ್ಷೀಯ ಸಭೆಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ: ಮಾರಿಸನ್ -ಮೋದಿ ದ್ವಿಪಕ್ಷೀಯ ಸಭೆ

2014ರಲ್ಲಿ ಪ್ರಧಾನಿಯಾಗಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ 7ನೇ ಬಾರಿಗೆ ಅಮೆರಿಕ ಪ್ರವಾಸ ಕೈಗೊಂಡಿದ್ದಾರೆ. ಇದು "ಅಮೆರಿಕದೊಂದಿಗಿನ ನಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಬಲಪಡಿಸುವ ಮತ್ತು ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಸಂಬಂಧವನ್ನು ಬಲಪಡಿಸುವ ಸಂದರ್ಭ" ಎಂದು ಮೋದಿ ಹೇಳಿದ್ದಾರೆ. ಅಧ್ಯಕ್ಷ ಬೈಡೆನ್ ಅವರೊಂದಿಗಿನ ಭೇಟಿಯಲ್ಲಿ ಭಾರತ-ಯುಎಸ್ ಸಮಗ್ರ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆ ಬಗ್ಗೆ ಚರ್ಚಿಸಿದ್ದಾರೆ. 2015ರಲ್ಲಿ ಭಾರತ-ಅಮೆರಿಕ ಸಮಯದಾಯದ ಕಾರ್ಯಕ್ರಮ, ಬಳಿಕ ಸಿಲಿಕಾನ್ ವ್ಯಾಲಿ ಭೇಟಿ ಕೈಗೊಂಡಿದ್ದರು. 2019ರಲ್ಲಿ ಹೌಡಿ-ಮೋಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕೋವಿಡ್ -19 ಸಾಂಕ್ರಾಮಿಕ ಪಿಡುಗಿನ ನಂತರದ ಮೊದಲ ವಿದೇಶಿ ಪ್ರವಾಸದಲ್ಲಿ ಪ್ರಧಾನಿ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಸೇರಿದಂತೆ ಉನ್ನತ ಮಟ್ಟದ ನಿಯೋಗದ ಜೊತೆಗಿದ್ದಾರೆ.

English summary
Quad will work in the role of "force for global good" says modi and asserted that the cooperation among four countries including India, the United States, Australia and Japan in the group will ensure peace and prosperity in Indo-pacific
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X