ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕವಾಗಿ 1.2 ಬಿಲಿಯನ್ ಕೊರೊನಾ ಲಸಿಕೆ ಒದಗಿಸಲು ಕ್ವಾಡ್ ದೇಶಗಳ ಪ್ರತಿಜ್ಞೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 25: ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ಕ್ವಾಡ್ ದೇಶಗಳು ಕೊರೊನಾ ಸಾಂಕ್ರಾಮಿಕದ ನಡುವೆ ಜಾಗತಿಕವಾಗಿ 1.2 ಬಿಲಿಯನ್ ಡೋಸ್‌ಗಳ ಕೊರೊನಾ ಲಸಿಕೆಯನ್ನು ಒದಗಿಸಲು ಪ್ರತಿಜ್ಞೆ ಮಾಡಿವೆ.

ಕ್ವಾಡ್ ರಾಷ್ಟ್ರಗಳು 'ಕೋವ್ಯಾಕ್ಸ್' ಜಾಗತಿಕ ಲಸಿಕಾ ಸಹಯೋಗದಲ್ಲಿ ಲಸಿಕೆಗೆ ಹಣಕಾಸು ನೆರವು ನೀಡುವ ಜೊತೆಗೆ 1.2 ಬಿಲಿಯನ್ ಕೊರೊನಾ ಲಸಿಕೆಗಳನ್ನು ಹೆಚ್ಚುವರಿಯಾಗಿ ಒದಗಿಸಲಾಗುತ್ತಿದೆ ಎಂದು ಜಂಟಿ ಹೇಳಿಕೆ ನೀಡಿರುವುದಾಗಿ ಶ್ವೇತಭವನ ಉಲ್ಲೇಖಿಸಿದೆ.

Quad Countries To Donate Over 1.2 Billion Corona Vaccine Doses Globally

'ಕೊರೊನಾ ಜಾಗತಿಕವಾಗಿ ನಿರಂತರ ಸಂಕಟ ಉಂಟುಮಾಡಿದೆ. ಇದರ ಜೊತೆಗೆ ಹವಾಮಾನ ಬಿಕ್ಕಟ್ಟು ಕೂಡ ವೇಗಪಡೆದುಕೊಂಡಿದೆ. ಪ್ರಾದೇಶಿಕ ಭದ್ರತೆಯು ಹೆಚ್ಚು ಸಂಕೀರ್ಣವಾಗುತ್ತಿದೆ. ನಮ್ಮ ಎಲ್ಲಾ ದೇಶಗಳನ್ನು ಪ್ರತ್ಯೇಕವಾಗಿ ಹಾಗೂ ಒಟ್ಟಾರೆಯಾಗಿ ಪರೀಕ್ಷೆಗೆ ಒಡ್ಡಿದಂತಿದೆ. ಆದರೆ ಇದೆಲ್ಲದರೊಂದಿಗೆ, ದೇಶಗಳ ನಡುವೆ ಸಹಕಾರ ಎಂಬುದು ಗಟ್ಟಿಯಾಗಿ ಉಳಿದುಕೊಂಡಿದೆ' ಎಂದು ಕ್ವಾಡ್ ದೇಶಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡನ್, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಹಾಗೂ ಜಪಾನ್ ಪ್ರಧಾನಿ ಯೋಜಿಹಿದೆ ಸುಗಾ ಶುಕ್ರವಾರ ಕ್ವಾಡ್ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಹಲವು ಜಾಗತಿಕ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.

'ಜಾಗತಿಕ ಒಳಿತಿನ ಬಲ'ವಾಗಿ ಕಾರ್ಯನಿರ್ವಹಿಸಲಿದೆ ಕ್ವಾಡ್ ಸಭೆ; ಮೋದಿ 'ಜಾಗತಿಕ ಒಳಿತಿನ ಬಲ'ವಾಗಿ ಕಾರ್ಯನಿರ್ವಹಿಸಲಿದೆ ಕ್ವಾಡ್ ಸಭೆ; ಮೋದಿ

ಕ್ವಾಡ್ ನಾಯಕರು ಭವಿಷ್ಯದಲ್ಲಿ ಸಾಂಕ್ರಾಮಿಕ ಸಂಬಂಧ ಸೂಕ್ತ ಸಿದ್ಧತೆಗಳ ಕುರಿತು ಚರ್ಚೆ ನಡೆಸಿದ್ದಾರೆ. 'ನಾವು ಇಂಡೊ ಪೆಸಿಫಿಕ್‌ನಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಭದ್ರತೆ ತರುವ ಸಂಬಂಧ ಸಮನ್ವಯವನ್ನು ಮುಂದುವರೆಸುತ್ತೇವೆ ಹಾಗೂ 2022ರಲ್ಲಿ ನಾವು ಜಂಟಿಯಾಗಿ ಕನಿಷ್ಠ ಒಂದು ಸಿದ್ಧತಾ ಸಭೆಯನ್ನು ನಡೆಸುತ್ತೇವೆ' ಎಂದು ನಾಯಕರು ಹೇಳಿದ್ದಾರೆ.

'ಅಂತರರಾಷ್ಟ್ರೀಯ ಸಹಕಾರಕ್ಕಾಗಿ ಜಪಾನ್ ಬ್ಯಾಂಕ್ ಮೂಲಕ ಭಾರತದೊಂದಿಗೆ ಲಸಿಕೆ ಹಾಗೂ ಚಿಕಿತ್ಸಾ ಔಷಧಿಗಳನ್ನು ಒಳಗೊಂಡಂತೆ ಕೊರೊನಾಗೆ ಸಂಬಂಧಿಸಿದಂತೆ ಸುಮಾರು ನೂರು ಮಿಲಿಯನ್ ಡಾಲರ್‌ಗಳ ಪ್ರಮುಖ ಹೂಡಿಕೆಗಳನ್ನು ಹೆಚ್ಚಿಸಲು ಭಾರತದೊಂದಿಗೆ ಕಾರ್ಯನಿರ್ವಹಿಸುತ್ತೇವೆ' ಎಂದು ಜಪಾನ್ ಹೇಳಿಕೆ ನೀಡಿದೆ.

Quad Countries To Donate Over 1.2 Billion Corona Vaccine Doses Globally

ಇದರ ಮಧ್ಯೆ ಕ್ವಾಡ್ ನಾಯಕರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೊರೊನಾ ಲಸಿಕೆ ಪ್ರಮಾಣಪತ್ರದಲ್ಲಿ ಪರಸ್ಪರ ಒಪ್ಪಿತ ಹಾಗೂ ಸಾಮಾನ್ಯ ಅಂತರರಾಷ್ಟ್ರೀಯ ಪ್ರಯಾಣ ಶಿಷ್ಟಾಚಾರಗಳ ಕುರಿತು ಪ್ರಸ್ತಾಪ ಮಾಡಿದ್ದಾರೆ ಎಂದು ಶುಕ್ರವಾರ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ. ಈ ಪ್ರಸ್ತಾವನೆಯನ್ನು ಕ್ವಾಡ್ ನಾಯಕರು ಸ್ವೀಕರಿಸಿರುವುದಾಗಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ 25 ರಂದು ನ್ಯೂಯಾರ್ಕ್‌ನಲ್ಲಿ ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್ ಜಿಎ) 76ನೇ ಅಧಿವೇಶನದ ಉನ್ನತ ಮಟ್ಟದ ವಿಭಾಗದ ಸಾಮಾನ್ಯ ಚರ್ಚೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹವಾಮಾನ ಬದಲಾವಣೆ, ಭಯೋತ್ಪಾದನೆ ಹಾಗೂ ಕೊರೊನಾ ವೈರಸ್‌ ಸಾಂಕ್ರಾಮಿಕ ಸೇರಿದಂತೆ ಜಾಗತಿಕ ಸಮಸ್ಯೆಗಳ ಬಗ್ಗೆ ಮಾತನಾಡಲಿದ್ದಾರೆ.

ಮೊದಲು ಜಾಗ ಖಾಲಿ ಮಾಡಿ; ಪಾಕ್ ಪ್ರಧಾನಿ ಇಮ್ರಾನ್ ಸುಳ್ಳು ಪ್ರಚಾರಕ್ಕೆ ಭಾರತದ ಪ್ರಬಲ ಉತ್ತರಮೊದಲು ಜಾಗ ಖಾಲಿ ಮಾಡಿ; ಪಾಕ್ ಪ್ರಧಾನಿ ಇಮ್ರಾನ್ ಸುಳ್ಳು ಪ್ರಚಾರಕ್ಕೆ ಭಾರತದ ಪ್ರಬಲ ಉತ್ತರ

ಶನಿವಾರ ಮೋದಿ ನ್ಯೂಯಾರ್ಕ್ ನಗರಕ್ಕೆ ಆಗಮಿಸಿದ್ದು, ಸಂಜೆ 6.30ಕ್ಕೆ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸುಮಾರು 109 ರಾಷ್ಟ್ರಗಳು ಹಾಗೂ ಸರ್ಕಾರದ ಮುಖ್ಯಸ್ಥರು ಸಾಮಾನ್ಯ ಸಭೆಯ ಚರ್ಚೆಯಲ್ಲಿ ಮಾತನಾಡಲಿದ್ದಾರೆ. ಸುಮಾರು 60 ಜನರು ವಿಡಿಯೋ ಭಾಷಣ ಮಾಡಲಿದ್ದಾರೆ.

'ಭಾರತದ 130 ಕೋಟಿ ಜನರ ಭಾವನೆಗಳಿಗೆ ದನಿಯಾಗಿರುವ ಮೋದಿಯವರು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯ 76ನೇ ಅಧಿವೇಶನ ಉದ್ದೇಶಿಸಿ ಮಾತನಾಡಲು ನ್ಯೂಯಾರ್ಕ್‌ಗೆ ಆಗಮಿಸಿದ್ದಾರೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಟ್ವೀಟ್ ಮಾಡಿದೆ. ನ್ಯೂಯಾರ್ಕ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ಭಾರತೀಯ ರಾಯಭಾರಿ ತರಿಂಜಿತ್ ಸಿಂಗ್ ಸಂಧು ಹಾಗೂ ವಿಶ್ವಸಂಸ್ಥೆಯ ಭಾರತೀಯ ರಾಯಭಾರಿ ಟಿಎಸ್ ತಿರುಮೂರ್ತಿ ಪ್ರಧಾನಿ ಮೋದಿಯವರನ್ನು ಸ್ವಾಗತಿಸಿದ್ದಾರೆ.

English summary
The Quad countries have pledged to donate more than 1.2 billion doses of coronavirus vaccine globally amidst the COVID pandemic
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X