ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ವಿರುದ್ಧ ಪುಟಿನ್ ಗರಂ..! ಟ್ರಂಪ್‌ಗೆ ಫುಲ್ ಮಾರ್ಕ್ಸ್, ಬೈಡನ್‌ಗೆ ವಾರ್ನಿಂಗ್..!

|
Google Oneindia Kannada News

ಬೈಡನ್ ಅಧಿಕಾರಕ್ಕೆ ಬಂದ ನಂತರ ಅಮೆರಿಕ-ರಷ್ಯಾ ಸಂಬಂಧ ಹಳಸಿ ಹೋಗುತ್ತಿದೆ ಎಂಬರ್ಥದಲ್ಲಿ ಪುಟಿನ್ ವಾರ್ನಿಂಗ್ ಕೊಟ್ಟಿದ್ದಾರೆ. ರಷ್ಯಾ ಅಧ್ಯಕ್ಷ ಪುಟಿನ್ ಹೇಳಿರುವ ಮಾತು, ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿದೆ. ರಷ್ಯಾ ಕೂಡ ಅಮೆರಿಕದ ಜೊತೆ ಸಂಬಂಧ ಸುಧಾರಣೆಗೆ ಒಲವು ತೋರುತ್ತಿದೆ, ಆದರೆ ಇದಕ್ಕೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ರಷ್ಯಾ ಹಾಗೂ ಅಮೆರಿಕ ಸಂಬಂಧ ಸುಧಾರಿಸಿತ್ತು. ಆದರೆ ಈಗಿನ ಪರಿಸ್ಥಿತಿಯೇ ಬೇರೆ ಇದೆ, ಅಮೆರಿಕ ಹಾಗೂ ರಷ್ಯಾ ಸಂಬಂಧ ಹಳಸುತ್ತಿದೆ ಎಂದು ಸಂದರ್ಶನ ಒಂದರಲ್ಲಿ ಪುಟಿನ್ ಬೇಸರ ಹೊರಹಾಕಿದ್ದಾರೆ.

ವಿಶೇಷವೆಂದರೆ 3-4 ದಿನದಲ್ಲಿ ಬೈಡನ್‌ ಜೊತೆಯಲ್ಲಿ ಪುಟಿನ್ ಸಭೆ ನಡೆಸಲಿದ್ದಾರೆ. ಜೂನ್‌ 16ರಂದು ಪುಟಿನ್-ಬೈಡನ್ ಭೇಟಿಯಾಗಲಿದ್ದಾರೆ. ಸ್ವಿಜರ್ಲ್ಯಾಂಡ್‌ನ ಜಿನೀವಾ ಈ ಮಹತ್ವದ ಘಟನೆಗೆ ಸಾಕ್ಷಿಯಾಗಲಿದೆ. ಜಿನೀವಾದಲ್ಲಿ ನಡೆಯಲಿರುವ ಶೃಂಗಸಭೆ ಹಿನ್ನೆಲೆ ಪುಟಿನ್ ಹಾಗೂ ಅಮೆರಿಕ ಅಧ್ಯಕ್ಷ ಬೈಡನ್ ಅಲ್ಲಿಗೆ ತೆರಳಲಿದ್ದಾರೆ. ಇದೇ ಸಂದರ್ಭದಲ್ಲಿ ರಷ್ಯಾ ಹಾಗೂ ಅಮೆರಿಕ ದ್ವಿಪಕ್ಷೀಯ ಮಾತುಕತೆ ನಡೆಯಲಿದೆ. ಈ ಸಂದರ್ಭದಲ್ಲೇ ಅಮೆರಿಕ ಅಧ್ಯಕ್ಷ ಬೈಡನ್ ವಿರುದ್ಧ ಪುಟಿನ್ ಗುಡುಗಿದ್ದಾರೆ.

‘ನ್ಯಾಟೋ’ ಪಡೆಗಳ ಬಗ್ಗೆ ಚರ್ಚೆ

‘ನ್ಯಾಟೋ’ ಪಡೆಗಳ ಬಗ್ಗೆ ಚರ್ಚೆ

ಸ್ವಿಜರ್ಲ್ಯಾಂಡ್‌ನ ಜಿನೀವಾ ಭೇಟಿ ವೇಳೆ ಪುಟಿನ್ ಜೊತೆ ಮಾತುಕತೆ ನಡೆಸುವಷ್ಟೇ ಮುಖ್ಯವಾಗಿ, ‘ನ್ಯಾಟೋ' ಪಡೆಗಳ ಬಗ್ಗೆಯೂ ಬೈಡನ್ ಚರ್ಚಿಸಲಿದ್ದಾರೆ. ಬ್ರಿಟನ್‌ಗೆ ಭೇಟಿ ನೀಡಲಿರುವ ಜೋ ಬೈಡನ್ ಉಕ್ರೇನ್‌ ಗಡಿ ಭಾಗದಲ್ಲಿ ರಷ್ಯಾ ಸೇನೆ ನಿಯೋಜನೆ ಮಾಡಿದ್ದ ವಿಚಾರ, ಯುರೋಪ್ ಬೆಳವಣಿಗೆಗಳ ಬಗ್ಗೆ ಮಾತುಕತೆ ನಡೆಸಿ ಮರಳಲಿದ್ದಾರೆ. ಕೆಲದಿನದ ಹಿಂದೆ ಉಕ್ರೇನ್ ಗಡಿ ಭಾಗದಲ್ಲಿ ರಷ್ಯಾ ಭಾರಿ ಪ್ರಮಾಣದ ಸೇನೆ ನಿಯೋಜಿಸಿತ್ತು. ಬಳಿಕ ಬ್ರಿಟನ್ ಮತ್ತು ಅಮೆರಿಕ, ರಷ್ಯಾಗೆ ಎಚ್ಚರಿಕೆ ನೀಡಿದ್ದವು. ಈ ಘಟನೆಗಳು ನಡೆದು ತಿಂಗಳು ಕಳೆಯುವ ಒಳಗಾಗಿ ಮಹತ್ವ ಬೆಳವಣಿಗೆಗಳು ನಡೆಯುತ್ತಿವೆ.

ಅಮೆರಿಕದ ಸ್ನೇಹ ಮುಳುವಾಯ್ತಾ..?

ಅಮೆರಿಕದ ಸ್ನೇಹ ಮುಳುವಾಯ್ತಾ..?

ಉಕ್ರೇನ್ ರಷ್ಯಾದ ಆಪ್ತಮಿತ್ರ. ಆದರೆ ಇದು ಸಹಜವಾಗಿ ರಷ್ಯಾ ಕಣ್ಣು ಕೆಂಪಗಾಗುವಂತೆ ಮಾಡಿದೆ. ಇತ್ತೀಚೆಗೆ ಅಮೆರಿಕದ ವೆಪನ್‌ಗಳನ್ನ ಉಕ್ರೇನ್ ಖರೀದಿ ಮಾಡಿತ್ತು, ರಷ್ಯಾ ಈ ಒಪ್ಪಂದವನ್ನ ತೀವ್ರವಾಗಿ ವಿರೋಧಿಸಿತ್ತು. ಘಟನೆ ನಡೆದು ಕೆಲವೇ ದಿನಗಳಲ್ಲಿ ರಷ್ಯಾ ತನ್ನ ಅಪಾರ ಪ್ರಮಾಣದ ಸೇನೆ ಹಾಗೂ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಗಡಿಗೆ ತಂದು ಬಿಟ್ಟಿದೆ. ಇದು ಯುದ್ಧ ನಡೆಯುವ ಪರೋಕ್ಷ ಎಚ್ಚರಿಕೆ ಎಂಬುದು ತಜ್ಞರ ವಿಶ್ಲೇಷಣೆ. ಆದರೆ ರಷ್ಯಾ ಮಾತ್ರ ಹೆದರಬೇಡಿ, ನಾವು ಏನೂ ಮಾಡೋದಿಲ್ಲ ಅಂತಾ ಭರವಸೆ ನೀಡುತ್ತಿದೆ.

ಸೈನಿಕರ ಜೊತೆ ಟ್ಯಾಂಕರ್..!

ಸೈನಿಕರ ಜೊತೆ ಟ್ಯಾಂಕರ್..!

ಅಪಾರ ಪ್ರಮಾಣದ ಸೇನೆಯನ್ನು ಉಕ್ರೇನ್ ಗಡಿಯಲ್ಲಿ ನಿಯೋಜನೆ ಮಾಡಿರುವ ರಷ್ಯಾ, ಇವರ ಜೊತೆಯಲ್ಲಿ ಟ್ಯಾಂಕರ್‌ಗಳನ್ನೂ ಗಡಿಗೆ ಕೊಂಡೊಯ್ದಿದೆ. ಇದು ಸಹಜವಾಗಿ ಆತಂಕ ಹೆಚ್ಚಾಗುವಂತೆ ಮಾಡಿದೆ. ಈಗಾಗಲೇ ಈ ಬಗ್ಗೆ ಉಕ್ರೇನ್ ಆತಂಕ ಹೊರಹಾಕಿದೆ. ಗಡಿಯಲ್ಲಿ ರಷ್ಯಾ ನಡೆ ಭಯ ಹುಟ್ಟಿಸುತ್ತಿದೆ. ವಿವಾದವಿರುವ ಗಡಿ ಭಾಗದಲ್ಲೇ ಭಾರಿ ಪ್ರಮಾಣದ ಸೇನೆ ನಿಯೋಜನೆ ಮಾಡಿದೆ ಎಂದಿದೆ. ಇದು ಯುರೋಪ್ ಹಾಗೂ ಅಮೆರಿಕ ಮತ್ತಿತರ ರಾಷ್ಟ್ರಗಳ ನಿದ್ದೆ ಹಾರಿಹೋಗುವಂತೆ ಮಾಡಿದೆ. ಏಕೆಂದರೆ ಯುರೋಪ್‌ನಲ್ಲಿ ಯುದ್ಧ ಆರಂಭವಾದರೆ 3ನೇ ಮಹಾಯುದ್ಧ ಆರಂಭ ಆದಂತೆ ಎಂಬುದು ತಜ್ಞರ ಆತಂಕ.

Recommended Video

Biharನ ಬ್ಯಾಂಕ್ ಒಂದರಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ | Bank Robbery | Oneindia Kannada
 ರಷ್ಯಾ ನೆನೆದು ನಡುಗಿದೆ ಜರ್ಮನಿ..!

ರಷ್ಯಾ ನೆನೆದು ನಡುಗಿದೆ ಜರ್ಮನಿ..!

ಯುರೋಪ್ ಮೇಲೆ ನಿಯಂತ್ರಣ ಸಾಧಿಸಲು ರಷ್ಯಾ ಕಾದು ಕುಳಿತಿದೆ ಎಂದು ಯುರೋಪ್ ಒಕ್ಕೂಟದ ಕೆಲ ಬಲಾಢ್ಯ ರಾಷ್ಟ್ರಗಳು ಆರೋಪ ಮಾಡುತ್ತಾ ಬಂದಿವೆ. ಹೀಗಾಗಿಯೇ ಅಮೆರಿಕದ ಜೊತೆ ಸಾಧ್ಯವಾದಷ್ಟು ಸ್ನೇಹ ಗಿಟ್ಟಿಸಿಕೊಂಡಿತ್ತು ಯುರೋಪ್. ಆದರೆ ಅದ್ಯಾವಾಗ ಟ್ರಂಪ್ ಅಮೆರಿಕದ ಅಧ್ಯಕ್ಷರಾದರೋ ಅಂದಿನಿಂದ ಈ ಸಂಬಂಧ ಹಳಸುತ್ತಾ ಬಂದಿದೆ. ಅಮೆರಿಕ ಮತ್ತು ಯುರೋಪ್ ಸ್ನೇಹ ನಾಶವಾಗುವ ಹಂತಕ್ಕೆ ಬಂದಿದೆ. ಇದೇ ಸಂದರ್ಭವನ್ನ ರಷ್ಯಾ ಬಳಸಿಕೊಂಡು, ಯುದ್ಧ ಸಾರುವ ಆತಂಕ ಜರ್ಮನಿಗೆ ಕಾಡುತ್ತಿದೆ. 2ನೇ ಮಹಾಯುದ್ಧ ನಡೆದಾಗ ಜರ್ಮನಿಯನ್ನ ಧೂಳಿಪಟ ಮಾಡಿತ್ತು ರಷ್ಯಾ. ಎರಡೂ ರಾಷ್ಟ್ರಗಳ ಮಧ್ಯೆ ಆ ದ್ವೇಷ ಇನ್ನೂ ಆರಿಲ್ಲ.

English summary
Putin said Russia and America relationship is very low level in recent years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X