• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪುಟಿನ್ ತಮ್ಮ ರಾಜಕೀಯ ವೈರಿಗಳನ್ನು ಕೊಂದಿರಬಹುದು: ಡೊನಾಲ್ಡ್ ಟ್ರಂಪ್

|

ವಾಷಿಂಗ್ಟನ್, ಅಕ್ಟೋಬರ್ 15: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಾಜಕೀಯ ಹತ್ಯೆ ಮತ್ತು ವಿಷಪ್ರಾಶನ ಕೃತ್ಯಗಳಲ್ಲಿ 'ಬಹುಶಃ' ಭಾಗಿಯಾಗಿರಬಹುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ.

'60 ಮಿನಿಟ್ಸ್' ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಟ್ರಂಪ್, ಸಂದರ್ಶಕ ಲೆಸ್ಲಿ ಸ್ಟಾಲ್ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

ಅರ್ಹತೆ ಇರುವವರಿಗೆ ಮಾತ್ರ ಅಮೆರಿಕಕ್ಕೆ ಪ್ರವೇಶ ಎಂದ ಟ್ರಂಪ್

ಪುಟಿನ್ ರಾಜಕೀಯ ಹತ್ಯೆಗಳು ಮತ್ತು ವಿಷಪ್ರಾಶನ ಕೃತ್ಯಗಳಲ್ಲಿ ಭಾಗಿಯಾಗಿರಬಹುದು ಎಂದು ಅನಿಸುತ್ತಿದೆಯೇ ಎಂಬ ಪ್ರಶ್ನೆಗೆ, 'ಬಹುಶಃ ಅವರು ಮಾಡಿದ್ದಾರೆ. ಬಹುಶಃ..' ಎಂದರು. 'ಆದರೆ ಅಂತಹ ಕೃತ್ಯಗಳನ್ನು ಅವರು ನಮ್ಮ ದೇಶದಲ್ಲಿ ಮಾಡಿಲ್ಲ' ಎಂದು ಹೇಳಿದರು.

ರಷ್ಯಾದೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರು, ಪತ್ರಕರ್ತರು ಮತ್ತು ಪುಟಿನ್ ಅವರ ಇತರೆ ಟೀಕಾಕಾರರು ವಿಷಪ್ರಾಶನದಿಂದ ಅಥವಾ ಆಶ್ಚರ್ಯಕರ ರೀತಿಗಳಲ್ಲಿ ಸಾವಿಗೀಡಾಗಿದ್ದರು.

ಇರಾನ್‌ನಿಂದ ತೈಲ ಖರೀದಿಸಿದರೆ ನೆಟ್ಟಗಿರೊಲ್ಲ: ಟ್ರಂಪ್ ಬೆದರಿಕೆ, ಭಾರತಕ್ಕೂ ಸಂಕಷ್ಟ

ಇತ್ತೀಚೆಗೆ ರಷ್ಯಾದ ಮಾಜಿ ಬೇಹುಗಾರಿಕಾ ಅಧಿಕಾರಿ ಸೆರ್ಜಿ ಸಕ್ರಿಪಾಲ್ ಮತ್ತು ಅವರ ಮಗಳನ್ನು ಬ್ರಿಟನ್‌ನಲ್ಲಿ ವಿಷವಿಕ್ಕಿ ಕೊಲ್ಲಲಾಗಿತ್ತು. ಈ ಕೃತ್ಯವನ್ನು ರಷ್ಯಾದವರೇ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರಲ್ಲಿ ತನ್ನ ಕೈವಾಡ ಏನೂ ಇಲ್ಲ ಎಂದು ರಷ್ಯಾ ಆರೋಪವನ್ನು ನಿರಾಕರಿಸಿದೆ.

ಮೈಸೂರು ದಸರಾ - ವಿಶೇಷ ಪುರವಣಿ

2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಷ್ಯಾ ಹಸ್ತಕ್ಷೇಪ ನಡೆಸಿತ್ತು. ಆದರೆ, ಚೀನಾ ಕೂಡ ಹಸ್ತಕ್ಷೇಪ ನಡೆಸಿತ್ತು ಎಂದೆನಿಸುತ್ತಿದೆ ಎಂದು ಟ್ರಂಪ್ ಹೇಳಿದ್ದಾರೆ.

ಪತ್ರಕರ್ತನ ನಿಗೂಢ ನಾಪತ್ತೆ, ರಾಯಭಾರ ಕಚೇರಿಯಲ್ಲೊಂದು ಥ್ರಿಲ್ಲರ್ ಘಟನೆ!

ತಾವು ಚುನಾವಣೆಯಲ್ಲಿ ಗೆಲ್ಲಲು ರಷ್ಯಾದಿಂದ ನೆರವು ಪಡೆದುಕೊಂಡಿದ್ದಾಗಿ ಮಾಡಿರುವ ಆರೋಪವನ್ನು ಅವರು ಲೇವಡಿ ಮಾಡಿದ್ದಾರೆ.

'ನಾನು ಚುನಾವಣೆಯಲ್ಲಿ ಗೆಲ್ಲಲು ನೆರವು ನೀಡುವಂತೆ ರಷ್ಯಾಕ್ಕೆ ಕರೆ ಮಾಡುತ್ತೇನೆ ಎಂದು ನೀವು ನಿಜಕ್ಕೂ ಭಾವಿಸುತ್ತೀರಾ? ನನಗೆ ಸಹಾಯ ಮಾಡಲು ಅವರಿಗೆ ಸಾಧ್ಯವಾಗದೆಯೇ ಇರಬಹುದು. ಇದು ತೀರಾ ಹಾಸ್ಯಾಸ್ಪದ' ಎಂದು ಟ್ರಂಪ್ ಹೇಳಿದ್ದಾರೆ.

English summary
US President Donald Trump said that Russian President Vladimir Putin probably involved in assassinations and poisonings.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more