ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಮ್ಮ ಜೊತೆ ನಾವಿದ್ದೇವೆ ಎಂದು ಭಾರತಕ್ಕೆ ಬೆಂಬಲ ನೀಡಿದ ಅಮೆರಿಕ

|
Google Oneindia Kannada News

ವಾಷಿಂಗ್ಟನ್, ಫೆಬ್ರವರಿ 16: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಉಗ್ರರ ದಾಳಿಯ ವಿಚಾರದಲ್ಲಿ ಭಾರತಕ್ಕೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಅಮೆರಿಕ ತಿಳಿಸಿದೆ.

ಪುಲ್ವಾಮಾ ಹತ್ಯಾಕಾಂಡ : ಪಾಕ್ ಭಯೋತ್ಪಾದನೆ ವಿರುದ್ಧ ವಿಶ್ವದ ಒಗ್ಗಟ್ಟು ಪುಲ್ವಾಮಾ ಹತ್ಯಾಕಾಂಡ : ಪಾಕ್ ಭಯೋತ್ಪಾದನೆ ವಿರುದ್ಧ ವಿಶ್ವದ ಒಗ್ಗಟ್ಟು

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರಿಗೆ ಕರೆ ಮಾಡಿದ ಅಮೆರಿಕದ ಭದ್ರತಾ ಸಲಹೆಗಾರ ಜಾನ್ ಬೊಲ್ಟೊನ್, ಭಾರತದ ಸ್ವಯಂ ರಕ್ಷಣಾ ಹಕ್ಕಿಗೆ ಅಮೆರಿಕದ ಬೆಂಬಲವಿದೆ ಎಂದಿದ್ದಾರೆ.

ರಣಹೇಡಿ ಉಗ್ರದಾಳಿ: ಭಾರತದ ಬೆಂಬಲಕ್ಕೆ ನಿಂತ ವಿಶ್ವ ರಣಹೇಡಿ ಉಗ್ರದಾಳಿ: ಭಾರತದ ಬೆಂಬಲಕ್ಕೆ ನಿಂತ ವಿಶ್ವ

'ಅಜಿತ್ ದೋವಲ್ ಅವರೊಂದಿಗೆ ಎರಡು ಬಾರಿ ಮಾತನಾಡಿದ್ದೇನೆ. ಭಾರತದ ಸ್ವಯಂ ರಕ್ಷಣೆಯ ಹಕ್ಕಿಗೆ ಎಲ್ಲ ಬೆಂಬಲ ನೀಡುವುದಾಗಿ ತಿಳಿಸಿದ್ದೇನೆ. ಭಯೋತ್ಪಾದನಾ ದಾಳಿಯ ಬಗ್ಗೆ ಅಮೆರಿಕದ ಸಂತಾಪವನ್ನು ವ್ಯಕ್ತಪಡಿಸಿದ್ದೇನೆ' ಎಂದು ಬೊಲ್ಟೊನ್ ತಿಳಿಸಿದ್ದಾರೆ.

ದೇಶದಲ್ಲಿ 39 ವರ್ಷಗಳಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗಳ ಮಾಹಿತಿ... ದೇಶದಲ್ಲಿ 39 ವರ್ಷಗಳಲ್ಲಿ ನಡೆದ ಭೀಕರ ಭಯೋತ್ಪಾದನಾ ದಾಳಿಗಳ ಮಾಹಿತಿ...

ಉಗ್ರರ ಸ್ವರ್ಗವಾಗಿ ಭಯೋತ್ಪಾದನಾ ಚಟುವಟಿಕೆಗಳಿಗೆ ಬೆಂಬಲ ನೀಡುವುದನ್ನು ಸ್ಥಗಿತಗೊಳಿಸುವಂತೆ ಪಾಕಿಸ್ತಾನಕ್ಕೆ ಅಮೆರಿಕ ಸ್ಪಷ್ಟವಾಗಿ ಹೇಳಿದೆ ಎಂದು ಬೊಲ್ಟೊನ್ ಹೇಳಿದ್ದಾರೆ.

'ಈ ವಿಚಾರದಲ್ಲಿ ನಾವು ಬಹಳ ಸ್ಪಷ್ಟವಾಗಿದ್ದೇವೆ. ಪಾಕಿಸ್ತಾನದೊಂದಿಗೆ ಈ ಸಂಬಂಧ ನಡೆಸಿರುವ ಮಾತುಕತೆಯನ್ನು ಮುಂದುವರಿಸಲಿದ್ದೇವೆ' ಎಂದು ಅವರು ತಿಳಿಸಿದ್ದಾರೆ.

pulwama suicide terror attack america nsa to ajit doval we support indias right to self defence

'ಭಯೋತ್ಪಾದನೆ ಎದುರಿಸುವಲ್ಲಿ ನಾವು ಭಾರತದ ಜತೆಗಿದ್ದೇವೆ. ಅಂತಾರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿರುವ ಭಯೋತ್ಪಾದಕರಿಗೆ ಪಾಕಿಸ್ತಾನ ಸುರಕ್ಷಿತ ನೆಲೆ ಒದಗಿಸಬಾರದು' ಎಂದು ಅಮೆರಿಕ ಸೂಚಿಸಿದೆ.

English summary
US National Security Advisor John Bolton telephoned Indian counterpart Ajit Doval and expressed America support to India's right to self-defence.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X