• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

Pulitzer Prize 2022 : ಭಾರತದ ನಾಲ್ವರು ಪತ್ರಕರ್ತರಿಗೆ ಪುಲಿಟ್ಜರ್ 2022 ಪ್ರಶಸ್ತಿ

|
Google Oneindia Kannada News

ವಾಷಿಂಗ್ಟನ್, ಮೇ 10: ಅಮೆರಿಕದ ಮಾಧ್ಯಮ, ಸಾಹಿತ್ಯ ಮತ್ತು ಸಂಗೀತ ಕ್ಷೇತ್ರದಲ್ಲಿ ನೀಡಲಾಗುವ ಪುಲಿಟ್ಜರ್ ಪ್ರಶಸ್ತಿ ಪ್ರಕಟಗಂಡಿದೆ. 2022ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ನಾಲ್ವರು ಭಾರತೀಯರಿಗೆ ಸಿಕ್ಕಿರುವುದು ವಿಶೇಷ.

ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮತ್ತು ಸರಕಾರಿ ವಿಶೇಷ ಪಡೆಗಳ ಮಧ್ಯೆ ನಡೆದ ಸಂಘರ್ಷ ಘಟನೆ ವೇಳೆ ಬಲಿಯಾಗಿದ್ದ ದಾನಿಶ್ ಸಿದ್ದಿಕಿಗೆ ಮರಣೋತ್ತರ ಪ್ರಶಸ್ತಿ ಗೌರವ ಲಭಿಸಿದೆ.

ಲಂಕಾ ಹಿಂಸಾಚಾರ; ಸಂಸದ ಸೇರಿ ಮೂವರು ಬಲಿ; ರಾಜಪಕ್ಸ ಮನೆಗೆ ಬೆಂಕಿಲಂಕಾ ಹಿಂಸಾಚಾರ; ಸಂಸದ ಸೇರಿ ಮೂವರು ಬಲಿ; ರಾಜಪಕ್ಸ ಮನೆಗೆ ಬೆಂಕಿ

ಭಾರತದಲ್ಲಿ ಕೋವಿಡ್-19ನ ಚಿತ್ರಣವನ್ನು ಮನಮುಟ್ಟುವಂತೆ ಕ್ಯಾಮೆರಾದಲ್ಲಿ ಸೆರೆಹಿಡಿದದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆಯ ವಿಡಿಯೋಜರ್ನಲಿಸ್ಟ್‌ಗಳಿಗೆ ಈ ಸಾಲಿನ ಪ್ರಶಸ್ತಿ ಸಿಕ್ಕಿದೆ. ಈ ತಂಡದಲ್ಲಿ ದಾನಿಶ್ ಸಿದ್ದಿಕಿ ಜೊತೆಗೆ ಅದ್ನಾನ್ ಅಬಿದಿ, ಸಾನ್ನಾ ಇರ್ಷದ್ ಮಟ್ಟೂ ಮತ್ತು ಅಮಿತ್ ದಾವೆ ಕೂಡ ಇದ್ದಾರೆ.

ಕಳೆದ ವರ್ಷ, ಭಾರತ ಮೂಲದ ಪತ್ರಕರ್ತೆ ಮೇಘಾ ರಾಜಗೋಪಾಲನ್‌ಗೆ 2021ನೇ ಸಾಲಿನ ಪುಲಿಟ್ಜರ್ ಪ್ರಶಸ್ತಿ ಲಭಿಸಿತ್ತು. ಚೀನಾದ ಷಿನ್‌ಜಿಯಾಂಗ್ (Xin Jiang) ಪ್ರಾಂತ್ಯದಲ್ಲಿ ಮುಸ್ಲಿಮರನ್ನು ಕೂಡಿಹಾಕಲು ಬೃಹತ್ ಜೈಲುಗಳನ್ನು ನಿರ್ಮಿಸಿರುವುದರ ಬಗ್ಗೆ ಅವರ ತನಿಖಾ ವರದಿ ಗಮನ ಸೆಳೆದಿದೆ. ಇಂಥ ವಿಶೇಷ ತನಿಖಾ ವರದಿಗಳನ್ನು ಕೊಟ್ಟಿದ್ದಕ್ಕೆ ಮೇಘಾ ರಾಜಗೋಪಾಲನ್‌ಗೆ ಕಳೆದ ವರ್ಷ ಪುಲಿಟ್ಜರ್ ಗೌರವ ಪ್ರಾಪ್ತವಾಗಿತ್ತು. ಈ ವರ್ಷ ನಾಲ್ವರು ಭಾರತೀಯರಿಗೆ ಈ ಗೌರವ ಸಿಕ್ಕಿರುವುದು ವಿಶೇಷ. ಫೀಚರ್ ಫೋಟೋಗ್ರಫಿ ವಿಭಾಗದಲ್ಲಿ ಭಾರತದ ಈ ನಾಲ್ವರಿಗೆ ಪ್ರಶಸ್ತಿ ಸಂದಾಯವಾಗಿದೆ.

ಬರ್ಮುಡಾ ಟ್ರಯಾಂಗಲ್‌ನಲ್ಲಿ ಅಗೋಚರ ಶಕ್ತಿ ಇಲ್ಲ: ವಿಜ್ಞಾನಿ ಕಾರ್ಲ್ ಬಿಚ್ಚಿಟ್ಟ ಸತ್ಯ ಏನು ಗೊತ್ತಾ?ಬರ್ಮುಡಾ ಟ್ರಯಾಂಗಲ್‌ನಲ್ಲಿ ಅಗೋಚರ ಶಕ್ತಿ ಇಲ್ಲ: ವಿಜ್ಞಾನಿ ಕಾರ್ಲ್ ಬಿಚ್ಚಿಟ್ಟ ಸತ್ಯ ಏನು ಗೊತ್ತಾ?

ಈ ವರ್ಷ ತನಿಖಾ ವರದಿ ವಿಭಾಗದಲ್ಲಿ ಟಂಪಾ ಬೇ ಟೈಮ್ಸ್ (Tampa Bay Times) ಪತ್ರಿಕೆಯ ಮೂವರು ಪತ್ರಕರ್ತರಿಗೆ ಪುಲಿಟ್ಜರ್ ಪ್ರಶಸ್ತಿ ಬಂದಿದೆ. ಫ್ಲೋರಿಡಾ ರಾಜ್ಯದ ಬ್ಯಾಟರಿ ಸಂಸ್ಕರಣೆ ಘಟಕದೊಳಗೆ ವಿಷಯುಕ್ತ ವಾತಾವರಣ ಇರುವುದರ ಕುರಿತು ಈ ಮೂವರು ಸರಣಿ ತನಿಖಾ ವರದಿಗಳನ್ನು ಬರೆದು ಪ್ರಕಟಿಸಿದ್ದರು. ಇದರ ಪರಿಣಾಮವಾಗಿ ಘಟಕದಲ್ಲಿ ಅಧಿಕಾರಿಗಳು ಸುರಕ್ಷಿತ ಕ್ರಮಗಳನ್ನ ಕೈಗೊಂಡರು.

ಬ್ರೇಕಿಂಗ್ ನ್ಯೂಸ್ ವರದಿಯಲ್ಲಿ ಮಿಯಾಮಿ ಹೆರಾಲ್ಡ್ ಪತ್ರಿಕೆಯ ಸಿಬ್ಬಂದಿಗೆ ಪುಲಿಟ್ಜರ್ ಪ್ರಶಸ್ತಿ ಸಿಕ್ಕಿದೆ. ಫ್ಲೋರಿಡಾದ ಸೀಸೈಡ್ ಅಪಾರ್ಟ್ಮೆಂಟ್ ಟವರ್‌ಗಳು ಕುಸಿದ ಘಟನೆಯನ್ನು ಇವರು ಬಹಳ ಚೆನ್ನಾಗಿ ಪ್ರಕಟಿಸಿದ್ದರೆನ್ನಲಾಗಿದೆ.

Pulitzer Awards 2022: Four Indians among the winners

ವಿವರಣಾತ್ಮಕ ವರದಿಗಾರಿಕೆ, ಸ್ಥಳೀಯ ವರದಿಗಾರಿಕೆ, ರಾಷ್ಟ್ರೀಯ ವರದಿಗಾರಿಕೆ, ಅಂತರರಾಷ್ಟ್ರೀಯ ವರದಿಗಾರಿಕೆ, ವಿಶೇಷ ಬರಹ, ಕಾಮೆಂಟರಿ, ಸಂಪಾದಕೀಯ ಬರಹ, ಧ್ವನಿ ವರದಿಗಾರಿಕೆ ಮೊದಲಾದ ಪತ್ರಿಕೋದ್ಯಮ ವಿಭಾಗದಲ್ಲಿ ಪುಲಿಟ್ಜರ್ ಪ್ರಶಸ್ತಿಗಳನ್ನು ಕೊಡಲಾಗಿದೆ. ಇದರ ಜೊತೆಗೆ ಸಾಹಿತ್ಯ, ಸಂಗೀತ ವಿಭಾಗದಲ್ಲೂ ಪ್ರಶಸ್ತಿಗಳನ್ನು ಪ್ರಕಟಿಸಲಾಗಿದೆ.

ಈ ವರ್ಷ ರಷ್ಯಾ ಆಕ್ರಮಣ ವಿದ್ಯಮಾನದಲ್ಲೂ ಎದೆಗುಂದದೆ ಕೆಲಸ ಮಾಡಿದ ಉಕ್ರೇನ್ ಪತ್ರಕರ್ತರಿಗೆ ವಿಶೇಷ ಗೌರವ ನೀಡಲಾಗಿದೆ. ಇರಾಕ್, ಸಿರಿಯಾ ಮತ್ತು ಅಫ್ಘಾನಿಸ್ತಾನ್ ದೇಶಗಳಲ್ಲಿ ಅಮೆರಿಕ ಸೇನೆ ನಡೆಸಿದ ಕಾರ್ಯಾಚರಣೆಯಿಂದ ನಾಗರಿಕರಿಗೆ ಎಷ್ಟು ಸಾವುನೋವು ಆಗಿದೆ ಎಂಬುದನ್ನು ಬೆಳಕಿಗೆ ತಂದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆಯ ಸಿಬ್ಬಂದಿಗೆ ಪುಲಿಟ್ಜರ್ ಪ್ರಶಸ್ತಿ ಕೊಡಲಾಗಿದೆ.

ಹಾಗೆಯೇ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಬಳಿಕ ಕಳೆದ ವರ್ಷ ಕ್ಯಾಪಿಟಲ್ ಹಿಲ್ (ಅಮೆರಿಕ ಸಂಸತ್ತು) ಮೇಲೆ ಟ್ರಂಪ್ ಬೆಂಬಲಿಗರು ದಾಳಿ ಮಾಡಿದ ಘಟನೆಯನ್ನು ವರದಿ ಮಾಡಿದ ಪತ್ರಕರ್ತರಿಗೆ ವಿಶೇಷ ಗೌರವ ನೀಡಲಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Reuters' 4 Indian photojournalists get Pulitzer award for covering Covid-19 in photos. Late Danish Siddique is among the four Indian winners.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X