ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಿಲಿಟರಿ ನಿಯೋಜಿಸುವುದಾಗಿ ಪ್ರತಿಭಟನಾಕಾರರಿಗೆ ಕಟ್ಟೆಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಜೂನ್ 2: ಹಿಂಸಾತ್ಮಕ ಪ್ರತಿಭಟನೆಗಳನ್ನು ತಡೆಯಲು ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಾದ್ಯಂತ ಮಿಲಿಟರಿ ನಿಯೋಜಿಸುವುದಾಗಿ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಹತ್ಯೆಯ ಬಳಿಕ 'ವೈಟ್' ಪೊಲೀಸರ ವಿರುದ್ಧ ಆರಂಭವಾದ ಪ್ರತಿಭಟನೆ ಹಿಂಸಾಚಾರದ ರೂಪ ಪಡೆದುಕೊಂಡಿದೆ. ಪರಿಣಾಮ, ಅಮೇರಿಕಾದ ಹಲವು ನಗರಗಳು ಹೊತ್ತಿಯುರಿದಿವೆ.

ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!

ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಈ ಹಿನ್ನಲೆಯಲ್ಲಿ ಗಲಭೆ ಪ್ರದೇಶಗಳಲ್ಲಿ ಶಾಂತಿ ಸ್ಥಾಪಿಸಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಮಿಲಿಟರಿ ನಿಯೋಜಿಸುವುದಾಗಿ ಪತ್ರಿಭಟನಾಕಾರರಿಗೆ ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ ನೀಡಿದ್ದಾರೆ.

ಕಟ್ಟೆಚ್ಚರಿಕೆ ನೀಡಿದ ಡೊನಾಲ್ಡ್ ಟ್ರಂಪ್

''ಅಧ್ಯಕ್ಷನಾಗಿ ನನ್ನ ಮೊದಲ ಮತ್ತು ಅತ್ಯುನ್ನತ ಕರ್ತವ್ಯವೆಂದರೆ ನಮ್ಮ ಮಹಾನ್ ದೇಶ ಮತ್ತು ಅಮೇರಿಕಾದ ಜನರನ್ನು ರಕ್ಷಿಸುವುದು. ನಮ್ಮ ರಾಷ್ಟ್ರದ ಕಾನೂನುಗಳನ್ನು ಎತ್ತಿಹಿಡಿಯುವುದಾಗಿ ನಾನು ಪ್ರಮಾಣ ಮಾಡಿದ್ದೇನೆ. ಮತ್ತು ಅದನ್ನೇ ನಾನು ಮಾಡುತ್ತೇನೆ''

''ಪ್ರತಿಭಟನೆಯನ್ನು ಸ್ಥಗಿತಗೊಳಿಸಲು ಗವರ್ನರ್ ಗಳು ನ್ಯಾಷನಲ್ ಗಾರ್ಡ್ ಗಳನ್ನು ಸರಿಯಾಗಿ ಬಳಸಿಕೊಳ್ಳದೇ ಇದ್ದರೆ, ಶಾಂತಿ ಕಾಪಾಡಲು 'ಸಾವಿರಾರು' ಸೈನಿಕರನ್ನು ಸಜ್ಜುಗೊಳಿಸುತ್ತೇನೆ'' ಎಂದು ಡೊನಾಲ್ಡ್ ಟ್ರಂಪ್ ಕಟ್ಟೆಚ್ಚರಿಕೆ ನೀಡಿದ್ದಾರೆ.

ತೀವ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ

ತೀವ್ರ ಸ್ವರೂಪ ಪಡೆದುಕೊಂಡ ಪ್ರತಿಭಟನೆ

ವೈಟ್ ಹೌಸ್ ನ ರೋಸ್ ಗಾರ್ಡನ್ ನಲ್ಲಿ ರಾಷ್ಟ್ರವನ್ನುದ್ದೇಶಿಸಿ ಡೊನಾಲ್ಡ್ ಟ್ರಂಪ್ ಮಾತನಾಡುತ್ತಿದ್ದರೆ, ಅತ್ತ ಪೆನ್ಸಿಲ್ವೇನಿಯಾ ಅವೆನ್ಯೂದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು.

ಛೇ.. ಛೇ.. ಇದಕ್ಕೆ ಪ್ರತಿಭಟನೆ ಅಂತಾರಾ.? ಸಾವಿಗೆ ನ್ಯಾಯ ದೊರಕಿಸುವುದು ಹೀಗಾ.?ಛೇ.. ಛೇ.. ಇದಕ್ಕೆ ಪ್ರತಿಭಟನೆ ಅಂತಾರಾ.? ಸಾವಿಗೆ ನ್ಯಾಯ ದೊರಕಿಸುವುದು ಹೀಗಾ.?

ಬಂಕರ್ ನಲ್ಲಿ ಅಡಗಿ ಕುಳಿತಿದ್ದ ಡೊನಾಲ್ಡ್ ಟ್ರಂಪ್

ಬಂಕರ್ ನಲ್ಲಿ ಅಡಗಿ ಕುಳಿತಿದ್ದ ಡೊನಾಲ್ಡ್ ಟ್ರಂಪ್

ಈ ಹಿಂದೆ ವೈಟ್ ಹೌಸ್ ಮುಂದೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದ್ದಾಗ, ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನ ಅಂಡರ್ ಗ್ರೌಂಡ್ ಬಂಕರ್ ಗೆ ಕರೆದೊಯ್ದಿದ್ದರು. ಬಂಕರ್ ನಲ್ಲೇ ಸುಮಾರು ಒಂದು ಗಂಟೆ ಕಾಲ ಡೊನಾಲ್ಡ್ ಟ್ರಂಪ್ ಅಡಗಿ ಕುಳಿತಿದ್ದರು ಎನ್ನಲಾಗಿದೆ. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಡೊನಾಲ್ಡ್ ಟ್ರಂಪ್ ವ್ಯಾಪಕ ಟೀಕೆಗೆ ಗುರಿಯಾಗಿದ್ದರು.

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಮೇ 27 ರಂದು ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಬಲವಾಗಿ ಮಂಡಿಯೂರಿ ಕ್ರೌರ್ಯ ಮೆರೆದಿದ್ದ 'ಬಿಳಿ' ಪೊಲೀಸ್ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಹಾಕಿ ಬಂಧಿಸಲಾಗಿದೆ. ಹಾಗೇ, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

English summary
Protest Against George Floyd Death: Donald Trump threatens to deploy military against Protesters.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X