ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

US: ಪ್ರತಿಭಟನಾಕಾರರ ಕಿಚ್ಚಿನಿಂದ 200 ವರ್ಷಗಳ ಐತಿಹಾಸಿಕ ಚರ್ಚ್ ಬೆಂಕಿಗೆ ಆಹುತಿ.!

|
Google Oneindia Kannada News

ವಾಷಿಂಗ್ಟನ್, ಜೂನ್ 1: ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ ಬಳಿಕ ಪ್ರಾರಂಭವಾದ ಪ್ರತಿಭಟನೆ ಹಿಂಸಾಚಾರ ರೂಪ ಪಡೆದುಕೊಂಡಿದ್ದು, ಉದ್ರಿಕ್ತ ಪ್ರತಿಭಟನಾಕಾರರ ಕಿಚ್ಚಿಗೆ ವೈಟ್ ಹೌಸ್ ಬಳಿ ಇರುವ 200 ವರ್ಷಗಳ ಹಳೆಯ ಐತಿಹಾಸಿಕ ಸೇಂಟ್ ಜಾನ್ಸ್ ಚರ್ಚ್ ಬೆಂಕಿಗೆ ಆಹುತಿಯಾಗಿದೆ.

Recommended Video

Padarayanapura corporator Imran Pasha shares special video from quaratine centre | Oneindia Kannada

''1800 ರ ದಶಕದ ಆರಂಭದಿಂದಲೂ ಸೇಂಟ್ ಜಾನ್ಸ್ ಚರ್ಚ್ ಈ ನಗರದಲ್ಲಿದೆ. ದಯವಿಟ್ಟು ಈ ಪ್ರದೇಶದಲ್ಲಿ ಗಲಭೆ ನಿಲ್ಲಿಸಿ'' ಎಂದು ಕೊಲಂಬಿಯಾದ ಮೆಟ್ರೋಪಾಲಿಟನ್ ಪೊಲೀಸ್ ಡಿಪಾರ್ಟ್ಮೆಂಟ್ ಕೇಳಿಕೊಂಡಿತ್ತು. ಆದರೂ, ಉದ್ರಿಕ್ತ ಪ್ರತಿಭಟನಾಕಾರರ ಕೆಂಗಣ್ಣಿಗೆ ಸೇಂಟ್ ಜಾನ್ಸ್ ಚರ್ಚ್ ಗುರಿಯಾಗಿದೆ.

ಅಮೇರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ: 40 ಸಿಟಿಗಳಲ್ಲಿ ಕರ್ಫ್ಯೂ ಜಾರಿ.!ಅಮೇರಿಕದಲ್ಲಿ ಹಿಂಸಾತ್ಮಕ ಪ್ರತಿಭಟನೆ: 40 ಸಿಟಿಗಳಲ್ಲಿ ಕರ್ಫ್ಯೂ ಜಾರಿ.!

ಅಷ್ಟಕ್ಕೂ, 1816 ರಲ್ಲಿ ನಿರ್ಮಾಣಗೊಂಡ ಸೇಂಟ್ ಜಾನ್ಸ್ ಚರ್ಚ್ ''ಚರ್ಚ್ ಆಫ್ ಪ್ರೆಸಿಡೆಂಟ್ಸ್'' ಎಂದೇ ಖ್ಯಾತಿ ಪಡೆದಿದೆ. ಜೇಮ್ಸ್ ಮ್ಯಾಡಿಸನ್ ನಿಂದ ಹಿಡಿದು ಇಲ್ಲಿಯವರೆಗೂ ಅಮೇರಿಕಾದ ಅಧ್ಯಕ್ಷರುಗಳು ಚರ್ಚ್ ನಲ್ಲಿನ ಹಲವು ಕಾರ್ಯಕ್ರಮಗಳಿಗೆ ಹಾಜರ್ ಆಗಿದ್ದರು.

ಬೆಂಕಿ ಹೊತ್ತಿಕೊಂಡಿದ್ದು ಹೇಗೆ.?

ಬೆಂಕಿ ಹೊತ್ತಿಕೊಂಡಿದ್ದು ಹೇಗೆ.?

ಐತಿಹಾಸಿಕ ಸೇಂಟ್ಸ್ ಜಾನ್ಸ್ ಚರ್ಚ್ ನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಹೇಗೆ ಎಂಬುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಆದ್ರೆ, ಬೆಂಕಿಯಿಂದ ಮಾತ್ರ ಚರ್ಚ್ ಗೆ ಭಾರೀ ಹಾನಿಯಾಗಿದೆ.

ಕಳೆದ ಆರು ದಿನಗಳಿಂದ ಅಮೇರಿಕಾದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಭಾನುವಾರದವರೆಗೂ 50 ಕ್ಕೂ ಹೆಚ್ಚು ಸೀಕ್ರೆಟ್ ಸರ್ವೀಸ್ ಆಫೀಸರ್ ಗಳು ಗಂಭೀರವಾಗಿ ಗಾಯಗೊಂಡಿರುವುದು ವರದಿಯಾಗಿದೆ.

ಮೊದಲು ಶಾಂತವಾಗಿ ಆರಂಭವಾದ ಪ್ರತಿಭಟನೆ, ಬಳಿಕ ತೀವ್ರ ಸ್ವರೂಪ ಪಡೆದುಕೊಂಡಿತು. ಉದ್ರಿಕ್ತರ ಕಿಚ್ಚಿಗೆ ಹಲವು ವಾಣಿಜ್ಯ ಮಳಿಗೆಗಳು, ಹೋಟೆಲ್ ಗಳು, ಕಾರ್ ಗಳು, ಕಟ್ಟಡಗಳು ಸುಟ್ಟು ಭಸ್ಮವಾಗಿವೆ. ಪ್ರತಿಭಟನಾಕಾರರ ಕ್ರೋಧಕ್ಕೆ ಅಮೇರಿಕಾದಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ನಷ್ಟ ಉಂಟಾಗಿದೆ.

ಕರ್ಫ್ಯೂ ಜಾರಿ

ಕರ್ಫ್ಯೂ ಜಾರಿ

ಅಮೇರಿಕಾದ ಹಲವು ಕಡೆ ಶಾಂತಿ-ಸುವ್ಯವಸ್ಥೆಗೆ ಧಕ್ಕೆ ಉಂಟಾಗಿದ್ದು, ಪರಿಸ್ಥಿತಿ ಕೈ ಮೀರುತ್ತಿರುವ ಕಾರಣ ವಾಷಿಂಗ್ಟನ್ ಡಿ.ಸಿ ಸೇರಿದಂತೆ 40 ಸಿಟಿಗಳಲ್ಲಿ ಕರ್ಫ್ಯೂ ಹೇರಲಾಗಿದೆ.

ವಿಶ್ವದ ದೊಡ್ಡಣ್ಣ.. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋಗಿ ಹೋಗಿ ಹೀಗೆ ಮಾಡೋದಾ?ವಿಶ್ವದ ದೊಡ್ಡಣ್ಣ.. ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೋಗಿ ಹೋಗಿ ಹೀಗೆ ಮಾಡೋದಾ?

ವಾಷಿಂಗ್ಟನ್ ಡಿ.ಸಿ ಸೇರಿದಂತೆ 24 ಸ್ಟೇಟ್ ಗಳಲ್ಲಿ ಶಾಂತಿ ಸ್ಥಾಪಿಸಲು 16 ಸಾವಿರ ನ್ಯಾಷನಲ್ ಗಾರ್ಡ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ಬಂಕರ್ ನಲ್ಲಿ ಅಡಗಿ ಕುಳಿತಿದ್ದ ಡೊನಾಲ್ಡ್ ಟ್ರಂಪ್

ಬಂಕರ್ ನಲ್ಲಿ ಅಡಗಿ ಕುಳಿತಿದ್ದ ಡೊನಾಲ್ಡ್ ಟ್ರಂಪ್

ವೈಟ್ ಹೌಸ್ ಮುಂದೆ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಾಗ, ಸೀಕ್ರೆಟ್ ಸರ್ವೀಸ್ ಏಜೆಂಟ್ ಗಳು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನ ಅಂಡರ್ ಗ್ರೌಂಡ್ ಬಂಕರ್ ಗೆ ಕರೆದೊಯ್ದಿದ್ದರು. ಬಂಕರ್ ನಲ್ಲೇ ಸುಮಾರು ಒಂದು ಗಂಟೆ ಕಾಲ ಡೊನಾಲ್ಡ್ ಟ್ರಂಪ್ ಅಡಗಿ ಕುಳಿತಿದ್ದರು ಎನ್ನಲಾಗಿದೆ.

ಕೆಲಸದಿಂದ ವಜಾಗೊಂಡ ಪೊಲೀಸ್

ಕೆಲಸದಿಂದ ವಜಾಗೊಂಡ ಪೊಲೀಸ್

ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಕುತ್ತಿಗೆ ಮೇಲೆ ಬಲವಾಗಿ ಮಂಡಿಯೂರಿ ಕ್ರೌರ್ಯ ಮೆರೆದಿದ್ದ 'ಬಿಳಿ' ಪೊಲೀಸ್ ಡೆರೆಕ್ ಚೌವಿನ್ ವಿರುದ್ಧ ಮರ್ಡರ್ ಕೇಸ್ ಹಾಕಿ ಬಂಧಿಸಲಾಗಿದೆ. ಹಾಗೇ, ಆತನನ್ನು ಕೆಲಸದಿಂದ ವಜಾಗೊಳಿಸಲಾಗಿದೆ.

ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!ಅಮೇರಿಕಾದಲ್ಲಿ ಹಿಂಸಾತ್ಮಕ ಪ್ರತಿಭಟನೆ: ಧಗ ಧಗ ಹೊತ್ತಿಯುರಿದ ಭಾರತೀಯ ಹೋಟೆಲ್!

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಜಾರ್ಜ್ ಫ್ಲಾಯ್ಡ್ ಸತ್ತಿದ್ದು ಹೇಗೆ.?

ಕಳೆದ ಸೋಮವಾರ (ಮೇ 27) ರಾತ್ರಿ 8 ಗಂಟೆ ಸುಮಾರಿಗೆ 46 ವರ್ಷ ವಯಸ್ಸಿನ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಮೇಲೆ 'ಬಿಳಿ' ಪೊಲೀಸರು ಅಟ್ಟಹಾಸ ಮೆರೆದಿದ್ದರು. ರಸ್ತೆ ಮೇಲೆ ಬಿದ್ದ 'ಬ್ಲಾಕ್' ಜಾರ್ಜ್ ಫ್ಲಾಯ್ಡ್ ಕುತ್ತಿಗೆಯ ಮೇಲೆ 'ಬಿಳಿ' ಪೊಲೀಸ್ ಹಲವು ನಿಮಿಷಗಳ ಕಾಲ ಬಲವಾಗಿ ಮಂಡಿಯೂರಿದ್ದ ಪರಿಣಾಮ, ಜಾರ್ಜ್ ಫ್ಲಾಯ್ಡ್ ಸಾವನ್ನಪ್ಪಿದ್ದರು.

ಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯಅಮೇರಿಕಾದಲ್ಲಿ ಅಮಾನವೀಯ ಘಟನೆ: ಬಿಳಿ ಪೊಲೀಸರ ಅಟ್ಟಹಾಸಕ್ಕೆ ಬಲಿಯಾದ ಕಪ್ಪು ವರ್ಣೀಯ

''ಉಸಿರಾಡಲು ಸಾಧ್ಯವಾಗುತ್ತಿಲ್ಲ'', ''ನನ್ನನ್ನು ಕೊಲ್ಲಬೇಡಿ'' ಎಂದು ಪದೇ ಪದೇ ಜಾರ್ಜ್ ಫ್ಲಾಯ್ಡ್ ಹೇಳುತ್ತಿದ್ದರೂ, ಆತನ ಕುತ್ತಿಗೆಯ ಮೇಲಿಂದ 'ವೈಟ್' ಪೊಲೀಸ್ ಕಾಲು ತೆಗೆಯಲಿಲ್ಲ.

ಜಾರ್ಜ್ ಫ್ಲಾಯ್ಡ್ ಮೇಲೆ ಪೊಲೀಸರು ತೋರಿದ ಮೃಗೀಯ ವರ್ತನೆ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಜನತೆ ಬಿಳಿ ಪೊಲೀಸರ ಅಟ್ಟಹಾಸವನ್ನು ಖಂಡಿಸಿ ಪ್ರತಿಭಟನೆ ಆರಂಭಿಸಿದರು.

English summary
200 year old historic St John’s Church has been set on fire as protests over the death of George Floyd escalated into multiple fires in US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X