ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ-ಚೀನಾ ವಿಷಯದಲ್ಲಿ ಮತ್ತೆ ಮೂಗು ತೂರಿಸಿದ ಟ್ರಂಪ್..!

|
Google Oneindia Kannada News

ವಾಷಿಂಗ್ಟನ್, ಸೆ. 25: ಭಾರತ, ಚೀನಾ ಈಗ ಸಂಕಷ್ಟ ಎದುರಿಸುತ್ತಿವೆ, ಇಂತಹ ಸ್ಥಿತಿಯಲ್ಲಿ ಉಭಯ ದೇಶಗಳ ಮಧ್ಯೆ ಭುಗಿಲೆದ್ದಿರುವ ಗಡಿವಿವಾದ ಬಗೆಹರಿಸಲು ನಾನು ಸಿದ್ಧ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಭಾರತ, ಚೀನಾ ಗಡಿ ವಿವಾದದಲ್ಲಿ ಮತ್ತೆ ಮೂಗು ತೂರಿಸಲು ಟ್ರಂಪ್ ಯತ್ನಿಸಿದ್ದಾರೆ.

ಭಾರತ, ಚೀನಾ ಗಡಿ ಬಿಕ್ಕಟ್ಟನ್ನು ಉಭಯ ದೇಶಗಳು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಭರವಸೆ ನಮಗಿದೆ. ಆದರೆ ಎರಡೂ ದೇಶಗಳು ನನ್ನ ಮಧ್ಯಸ್ಥಿಕೆ ಬಯಸಿದರೆ ನಾನು ಸಂಧಾನಕ್ಕೆ ಸಿದ್ಧನಿದ್ದೇನೆ ಎಂದಿದ್ದಾರೆ ಟ್ರಂಪ್. ಕಳೆದ 2 ತಿಂಗಳಿಂದಲೂ ಭಾರತ ಹಾಗೂ ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆಭಾರತೀಯರ ಮನಗೆದ್ದ ಜೋ ಬಿಡೆನ್, ಟ್ರಂಪ್‌ಗೆ ಹಿನ್ನಡೆ

ಆದರೆ ಇಂತಹ ಪರಿಸ್ಥಿತಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ನೀಡಿರುವ ಹೇಳಿಕೆ ಭಾರಿ ಕುತೂಹಲ ಕೆರಳಿಸಿದೆ. ಒಂದ್ಕಡೆ ಟ್ರಂಪ್ ಭಾರತದ ಗಡಿ ವಿಚಾರದಲ್ಲಿ ಮೂಗು ತೂರಿಸಲು ಮುಂದಾಗಿದ್ದರೆ ಇನ್ನೊಂದ್ಕಡೆ ಅಮೆರಿಕದ ವಾಲ್ ಸ್ಟ್ರೀಟ್ ಜನರಲ್, ಗಡಿ ಬಿಕ್ಕಟ್ಟಿನ ಸಂಕಷ್ಟ ಬಗೆಹರಿಸಲು ಭಾರತ ಬಾಹ್ಯ ಬೆಂಬಲ ನಿರೀಕ್ಷಿಸುತ್ತಿದೆ ಎಂದು ವರದಿ ಪ್ರಕಟಿಸಿದೆ. ಆದರೆ ಟ್ರಂಪ್ ಹೇಳಿಕೆ ಬಗ್ಗೆ ಭಾರತ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಈ ಹಿಂದೆಯೂ ಟ್ರಂಪ್ ಆಫರ್ ಕೊಟ್ಟಿದ್ದರು

ಈ ಹಿಂದೆಯೂ ಟ್ರಂಪ್ ಆಫರ್ ಕೊಟ್ಟಿದ್ದರು

ಅಮೆರಿಕ ಹೀಗೆ ಭಾರತದ ಗಡಿ ವಿಚಾರದಲ್ಲಿ ಸಹಾಯ ಮಾಡುವ ಮಾತುಗಳನ್ನು ಆಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅಮೆರಿಕದ ಅಧ್ಯಕ್ಷರು ಭಾರತದ ವಿಚಾರದಲ್ಲಿ ಮೂಗು ತೂರಿಸಲು ಸಾಕಷ್ಟು ಬಾರಿ ಯತ್ನಿಸಿದ್ದರು. ಮೇ ತಿಂಗಳಲ್ಲೂ ಟ್ರಂಪ್ ಭಾರತ ಹಾಗೂ ಚೀನಾ ಮಧ್ಯೆ ಸಂಧಾನ ನಡೆಸಲು ಸಿದ್ಧ ಎಂದಿದ್ದರು. ಆದರೆ ಟ್ರಂಪ್ ನೀಡಿದ್ದ ಆಹ್ವಾನವನ್ನು ಭಾರತ ತಿರಸ್ಕರಿಸಿತ್ತು. ಆ ಮೂಲಕ ನಮ್ಮ ಸಮಸ್ಯೆಯನ್ನ ನಾವೇ ಬಗೆಹರಿಸಿಕೊಳ್ಳುತ್ತೀವಿ ಎಂಬ ಸಂದೇಶ ರವಾನಿಸಿತ್ತು. ಇಷ್ಟೆಲ್ಲಾ ಆಗಿದ್ದರೂ ಟ್ರಂಪ್ ಮಾತ್ರ ಪದೇ ಪದೆ ಇಂತಹ ಹೇಳಿಕೆ ನೀಡುತ್ತಲೇ ಬಂದಿದ್ದಾರೆ.

ಅಮೆರಿಕದ ನಡೆ ನಂಬಲು ಸಾಧ್ಯವಾ..?

ಅಮೆರಿಕದ ನಡೆ ನಂಬಲು ಸಾಧ್ಯವಾ..?

ಈಗೇನೋ ಅಮೆರಿಕ ಭಾರತದ ಬೆನ್ನಿಗೆ ನಿಲ್ಲುವ ಭರವಸೆ ನೀಡುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಚೀನಾ ಜೊತೆ ಸಂಬಂಧ ಸರಿಹೋದರೆ, ಅಮೆರಿಕ ತನ್ನ ಲಾಭಕ್ಕಾಗಿ ಭಾರತವನ್ನು ಎದುರು ಹಾಕಿಕೊಳ್ಳುವುದರಲ್ಲಿ ಅನುಮಾನವೇ ಇಲ್ಲ. ಇದನ್ನು ನಾವು ಈ ಹಿಂದೆಯೂ ನೋಡಿದ್ದೇವೆ. ಕೆಲ ವರ್ಷಗಳ ಹಿಂದೆ ಪಾಕಿಸ್ತಾನದ ಪರ ನಿಂತಿದ್ದ ಅಮೆರಿಕ, ಭಾರತವನ್ನು ಈ ವಿಚಾರದಲ್ಲಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುತ್ತಿತ್ತು. ಆದರೆ ಇದೀಗ ಎಲ್ಲವೂ ಉಲ್ಟಾ ಆಗಿದೆ.

ಚೀನಾ-ಅಮೆರಿಕ ಕಚ್ಚಾಟದಲ್ಲಿ ಅಧಿಕಾರಿಗಳು ಅಪ್ಪಚ್ಚಿ..!ಚೀನಾ-ಅಮೆರಿಕ ಕಚ್ಚಾಟದಲ್ಲಿ ಅಧಿಕಾರಿಗಳು ಅಪ್ಪಚ್ಚಿ..!

ಪಾಕಿಸ್ತಾನ ಅಮೆರಿಕದ ಬೆನ್ನಿಗೆ ಚೂರಿ ಹಾಕಿದೆ.

ಪಾಕಿಸ್ತಾನ ಅಮೆರಿಕದ ಬೆನ್ನಿಗೆ ಚೂರಿ ಹಾಕಿದೆ.

ಪಾಕಿಸ್ತಾನ ಅಮೆರಿಕದ ಬೆನ್ನಿಗೆ ಚೂರಿ ಹಾಕಿದೆ. ಇದೇ ಕಾರಣಕ್ಕೆ ಅಮೆರಿಕ ಕೂಡ ಪಾಕ್‌ನಿಂದ ದೂರ ಬಂದಿದೆ. ಇಂತಹ ಹೊತ್ತಲ್ಲಿ ಅಮೆರಿಕ ಏಷ್ಯಾದಲ್ಲಿ ಭದ್ರ ಸೇನಾ ನೆಲೆ ಹುಡುಕುತ್ತಿದೆ. ಈಗ ಭಾರತಕ್ಕೆ ಸಹಾಯ ಮಾಡುವ ನೆಪದಲ್ಲಿ ಬಂದು, ಮುಂದೆ ನಮ್ಮ ವಿರುದ್ಧವೇ ತಿರುಗಿಬೀಳಬಹುದು ಎಂಬ ಅಭೀಪ್ರಾಯ ತಜ್ಞರದ್ದಾಗಿದೆ. ಇದೇ ಕಾರಣಕ್ಕೆ ಭಾರತ ಅಮೆರಿಕದ ಆಫರ್‌ನ್ನು ಪದೇ ಪದೆ ತಿರಸ್ಕರಿಸುತ್ತಿದೆ.

Recommended Video

ಭಾರತದ ಪವರ್ ಗೆ ಶಾಕ್ ಆದ China | Oneindia Kannada
ಅಧ್ಯಕ್ಷೀಯ ಚುನಾವಣೆಯಲ್ಲೂ ಲಾಭವಾಗುತ್ತೆ..!

ಅಧ್ಯಕ್ಷೀಯ ಚುನಾವಣೆಯಲ್ಲೂ ಲಾಭವಾಗುತ್ತೆ..!

ಒಂದು ವೇಳೆ ಭಾರತ ಹಾಗೂ ಚೀನಾ ಗಡಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಇದರ ಸಂಪೂರ್ಣ ಲಾಭ ಪಡೆಯಬಹುದು. ಏಕೆಂದರೆ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಎದುರಾಗಿದೆ. ಇಂತಹ ಹೊತ್ತಲ್ಲಿ ಭಾರತೀಯರ ಮನ ಗೆಲ್ಲುವುದು ಟ್ರಂಪ್‌ಗೆ ಅನಿವಾರ್ಯವಾಗಿದೆ. ಇದನ್ನು ಕೂಡ ಟ್ರಂಪ್ ಅಳೆದು ತೂಗಿ ಹೊಸ ದಾಳ ಉರುಳಿಸಿದ್ದಾರೆ. ಆದರೆ ಟ್ರಂಪ್ ನೀಡಿರುವ ಆಫರ್ ಅನ್ನ ಭಾರತ ಒಪ್ಪುತ್ತದೋ, ಇಲ್ಲ ತಿರಸ್ಕರಿಸುತ್ತದೋ ಎಂಬುದೇ ಬಿಲಿಯನ್ ಡಾಲರ್ ಪ್ರಶ್ನೆಯಾಗಿದೆ.

ಭಾರತ-ಚೀನಾ ಜಗಳ ಶಮನಕ್ಕೆ ಸಹಾಯ ಮಾಡಲು ಸಿದ್ಧ: ಡೊನಾಲ್ಡ್ ಟ್ರಂಪ್ಭಾರತ-ಚೀನಾ ಜಗಳ ಶಮನಕ್ಕೆ ಸಹಾಯ ಮಾಡಲು ಸಿದ್ಧ: ಡೊನಾಲ್ಡ್ ಟ್ರಂಪ್

English summary
American president Donald Trump once again offered mediation in India-China border issue. But Indian govt not replied for Trumps offer.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X