ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿಯಮಗಳಿಗೆ ಅನುಗುಣವಾಗಿ ಚೀನಾ ನಡೆದುಕೊಳ್ಳಲಿ: ಬೈಡನ್

|
Google Oneindia Kannada News

ವಾಷಿಂಗ್ಟನ್, ನವೆಂಬರ್ 20: ತಮ್ಮ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆಯನ್ನು ಮರಳಿ ಸೇರಿಕೊಳ್ಳಲಿದೆ ಎಂದು ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ. ಹಾಗೆಯೇ ಚೀನಾವು ನಿಯಮಾವಳಿಗಳಿಗೆ ಅನುಗುಣವಾಗಿ ನಡೆದುಕೊಳ್ಳುವುದನ್ನು ಬಯಸಿರುವುದಾಗಿ ಅವರು ತಿಳಿಸಿದ್ದಾರೆ.

ಅಧ್ಯಕ್ಷೀಯ ಸಂವಾದದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಬೈಡನ್, ಚೀನಾ ವರ್ತಿಸುತ್ತಿರುವ ರೀತಿಗಾಗಿ ಅದನ್ನು ಶಿಕ್ಷಿಸಲು ಬಯಸಿರುವುದಾಗಿ ಹೇಳಿದ್ದರ ಕುರಿತು ಗುರುವಾರ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ. ಚೀನಾ ಮೇಲೆ ಆರ್ಥಿಕ ನಿರ್ಬಂಧಗಳು ಅಥವಾ ಟಾರಿಫ್‌ಗಳನ್ನು ವಿಧಿಸುವ ಸಾಧ್ಯತೆ ಇದೆಯೇ ಎಂದೂ ಅವರನ್ನು ಪ್ರಶ್ನಿಸಲಾಯಿತು.

ಅಧಿಕಾರ ಹಸ್ತಾಂತರ ತಡವಾದರೆ ಕೊರೊನಾ ಲಸಿಕೆಯೂ ವಿಳಂಬ: ಬೈಡನ್ ಎಚ್ಚರಿಕೆಅಧಿಕಾರ ಹಸ್ತಾಂತರ ತಡವಾದರೆ ಕೊರೊನಾ ಲಸಿಕೆಯೂ ವಿಳಂಬ: ಬೈಡನ್ ಎಚ್ಚರಿಕೆ

ಚೀನಾದಲ್ಲಿ ಕೊರೊನಾ ವೈರಸ್ ಸೋಂಕು ಹರಡಲು ಆರಂಭವಾದಾಗ ಅದರ ಅಪಾಯವನ್ನು ಗ್ರಹಿಸುವಲ್ಲಿ ವಿಫಲವಾದ ವಿಶ್ವ ಸಂಸ್ಥೆಯ ಭಾಗವಾದ ವಿಶ್ವ ಆರೋಗ್ಯ ಸಂಸ್ಥೆಯೊಂದಿಗೆ ತಾನು ಇರುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಏಪ್ರಿಲ್‌ನಲ್ಲಿ ಘೋಷಿಸಿದ್ದರು.

 President Elect Joe Biden Says China Will Have To Play By The Rules

'ಚೀನಾವನ್ನು ಶಿಕ್ಷಿಸುವುದು ಇಲ್ಲಿ ಮುಖ್ಯವಲ್ಲ. ಆದರೆ ತಾನು ನಿಯಮಾವಳಿಗಳಿಗೆ ಬದ್ಧವಾಗಿ ಇರಬೇಕಾಗುತ್ತದೆ ಎಂಬುದನ್ನು ಚೀನಾ ಅರ್ಥ ಮಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕಿದೆ. ಇದು ಬಹಳ ಸರಳ ಪ್ರಸ್ತಾಪ' ಎಂದು ಬೈಡನ್ ಅವರು ತಮ್ಮ ತವರು ಪಟ್ಟಣ ವಿಲ್ಮಿಂಗ್ಟನ್‌ನಲ್ಲಿ ವಿವಿಧ ಪಕ್ಷಗಳ ಗವರ್ನರ್‌ಗಳ ಸಭೆಯ ವೇಳೆ ಹೇಳಿದ್ದಾರೆ.

ಅಮೆರಿಕಾದಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಿದ ಅಭ್ಯರ್ಥಿಗೆ 8 ಕೋಟಿ ಮತ!ಅಮೆರಿಕಾದಲ್ಲಿ ಟ್ರಂಪ್ ವಿರುದ್ಧ ಸ್ಪರ್ಧಿಸಿದ ಅಭ್ಯರ್ಥಿಗೆ 8 ಕೋಟಿ ಮತ!

ತಮ್ಮ ಆಡಳಿತವು ವಿಶ್ವ ಆರೋಗ್ಯ ಸಂಸ್ಥೆಯನ್ನು ಮತ್ತೆ ಸೇರಿಕೊಳ್ಳುವುದು ಏಕೆ ಎಂಬುದಕ್ಕೆ ಕಾರಣಗಳಲ್ಲಿ ಒಂದನ್ನು ಅವರು ವಿವರಿಸಿದ್ದಾರೆ. 'ನಾವು ಮೊದಲ ದಿನದಿಂದಲೇ ವಿಶ್ವ ಆರೋಗ್ಯ ಸಂಸ್ಥೆಯನ್ನು ಸೇರಿಕೊಳ್ಳುತ್ತೇವೆ. ಚೀನಾವು ಅರ್ಥ ಮಾಡಿಕೊಳ್ಳಬೇಕಾದ ಕೆಲವು ಸರಿಯಾದ ಮಾರ್ಗಗಳಿವೆ ಎಂಬುದನ್ನು ನಾವು ಮನವರಿಕೆ ಮಾಡಿಕೊಡಬೇಕಿದೆ' ಎಂದಿದ್ದಾರೆ.

English summary
US Elections: President- elect Joe Biden said he wants to make sure that China plays by the rules.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X