• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಟ್ರಂಪ್- ದಿ ರೇಸಿಸ್ಟ್': ಅಧ್ಯಕ್ಷರ ಟ್ವೀಟ್, ಕಾಂಗ್ರೆಸ್‌ ಛೀಮಾರಿ ಕತೆ

By ಪ್ರಶಾಂತ್‌
|

ವಾಷಿಂಗ್ಟನ್ ಡಿಸಿ, ಜುಲೈ 17: ಅಮೆರಿಕಾ ರಾಜಕೀಯದಲ್ಲೀಗ ರೇಸಿಸಂ ವಿರೋಧಿ ಬಿರುಗಾಳಿ ಎದ್ದಿದೆ.

ಕೆಲವು ದಿನಗಳ ಹಿಂದೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಕಪ್ಪು ವರ್ಣದ ಮಹಿಳಾ ಜನಪ್ರತಿನಿಧಿಗಳ ವಿರುದ್ಧ ಟ್ವೀಟ್‌ ಮಾಡಿದ್ದರು. 'ನೀವುಗಳು ನಿಮ್ಮ ದೇಶದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಾಪಾಸ್ ಹೋಗಿ' ಎಂಬರ್ಥದಲ್ಲಿ ಟ್ರಂಪ್ ಯಾರ ಹೆಸರನ್ನೂ ಉಲ್ಲೇಖಿಸದೆ ಟ್ವೀಟ್ ಮಾಡಿದ್ದರು.

'ಇನ್ನು ಸಹಿಸೋಕಾಗಲ್ಲ', ಭಾರತಕ್ಕೆ ಡೊನಾಲ್ಡ್ ಟ್ರಂಪ್ ಟ್ವೀಟ್ ಬಾಣ

ಆದರೆ, ಟ್ರಂಪ್ ಮಾಡಿದ್ದ ಟ್ವೀಟ್‌ನ ಗುರಿ ಡೆಮಾಕ್ರಟಿಕ್ ಪಕ್ಷದ ಯುಎಸ್ ಕಾಂಗ್ರೆಸ್‌ ಪ್ರತಿನಿಧಿಸುತ್ತಿರುವ ಅಯಾನ್ನಾ ಪ್ರೆಸ್ಲೆ, ಇಲಾನ ಓಮರ್, ಅಲೆಗ್ಸಾಂಡ್ರಿಯಾ ಒಕಾಸಿಯೋ ಕಾರ್ಟೆಸ್‌ ಹಾಗೂ ರಶೀದ ತ್ಲೈಬ್‌ ಎಂಬುದನ್ನು ಜನ ಮನಗೊಂಡಿದ್ದರು. ಮೂಲತಃ ಅಮೆರಿಕಾದಲ್ಲೇ ಹುಟ್ಟಿ ಬೆಳೆದ ಇವರೆಲ್ಲರನ್ನೂ 'ದೇಶ ಬಿಟ್ಟು ಹೋಗಿ' ಎಂದು ಪರೋಕ್ಷವಾಗಿ ಜರಿದ ಟ್ರಂಪ್ ಮಾತುಗಳಿಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

2020ರಲ್ಲಿ ನಡೆಯಲಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಟ್ರಂಪ್ ಟ್ವೀಟ್‌ 'ವಿಷಯಾಂತರದ ಪ್ರಯತ್ನ' ಎಂದು ಡೆಮಾಕ್ರಟಿಕ್ ಪಕ್ಷದ ನಾಯಕರು ಟೀಕಿಸಿದ್ದರು.

ಈ ನಡುವೆ ಮಂಗಳವಾರ ಯುಎಸ್‌ ಕಾಂಗ್ರೆಸ್‌ನಲ್ಲಿ ಅಧ್ಯಕ್ಷ ಟ್ರಂಪ್‌ ಜನಾಂಗೀಯ ದ್ವೇಷದಿಂದ ಕೂಡಿರುವ ಟ್ವೀಟ್‌ ಹಾಗೂ ಅದನ್ನು ಬೆಂಬಲಿಸುತ್ತಿರುವ ರಿಪಬ್ಲಿಕನ್ ನಾಯಕರ ವಿರುದ್ಧ ಸಂಕೇತಿಕವಾಗಿ ನಿರ್ಣಯವೊಂದನ್ನು ತೆಗೆದುಕೊಂಡಿರುವುದು ಜಗತ್ತಿನ ಗಮನ ಸೆಳೆದಿದೆ.

ವೇದಿಕೆಯಲ್ಲಿ ಮಗಳ ಬಗ್ಗೆಯೇ ಅನುಚಿತವಾಗಿ ಮಾತನಾಡಿದ ಟ್ರಂಪ್

ಸರಿಯಾದುದ್ದನ್ನೇ ಮಾಡಿ:

ಮತದಾನಕ್ಕೂ ಮುನ್ನ ಯುಎಸ್ ಕಾಂಗ್ರೆಸ್‌ನ ಪ್ರತಿನಿಧಿಯೂ ಆಗಿರುವ ನಾಗರಿಕ ಹಕ್ಕುಗಳ ಹೋರಾಟಗಾರ ಜಾನ್ ಲೇವಿಸ್, "ಸರಿಯಾದುದ್ದನ್ನೇ ಮಾಡಿ," ಎಂದು ಕಾಂಗ್ರೆಸ್ ಸದಸ್ಯರಿಗೆ ಮನವಿ ಮಾಡಿಕೊಂಡರು. 1960ರಲ್ಲಿ ಮಾರ್ಟಿನ್ ಲೂಥರ್ ಕಿಂಗ್ ಜ್ಯೂನಿಯರ್ ಜತೆ ನಾಗರಿಕ ಹಕ್ಕುಗಳಿಗಾಗಿ ಹೆಜ್ಜೆ ಹಾಕಿದ್ದ ಲೇವಿಸ್, ಅಧ್ಯಕ್ಷರ ಮಾತುಗಳನ್ನು ಖಂಡಿಸಲು ಕರೆ ನೀಡಿದರು.

"ಇಡೀ ಜಗತ್ತು ನಮ್ಮನ್ನು ನೋಡುತ್ತಿದೆ. ನಾವು ಗೌರವಾನ್ವಿತ ಹಾಗೂ ಘನತೆಯುಳ್ಳ ಜನ ಎಂಬ ಹಿರಿಮೆಯನ್ನು ಕಳೆದುಕೊಂಡಿದ್ದೇವೆ,'' ಎಂದು 79 ವರ್ಷದ ಲೇವಿಸ್ ತಿಳಿಸಿದರು. "ನಾನು ನೋಡುತ್ತಲೇ ಜನಾಂಗೀಯ ದ್ವೇಷವನ್ನು ಗುರುತಿಸಬಲ್ಲೆ. ನಾನು ಜನಾಂಗೀಯ ದ್ವೇಷವನ್ನು ಅರ್ಥಮಾಡಕೊಳ್ಳಬಲ್ಲೆ. ಅಂತಹ ವರ್ತನೆಗೆ ಸರಕಾರ ಉನ್ನತ ಸ್ಥರದಲ್ಲಿ ಅವಕಾಶ ಇರಬಾರದು,'' ಎಂದವರು ತಿಳಿಸಿದರು.

ಎಂದೂ ಇಲ್ಲದಷ್ಟು ಆಪ್ತ ಸ್ನೇಹಿತರಾಗಿದ್ದೇವೆ: ಮೋದಿ ಟ್ರಂಪ್ ಮಾತುಕತೆ

ಯುಎಸ್ ಕಾಂಗ್ರೆಸ್‌ ಒಟ್ಟು 240-187ರ ಅಂತರದಲ್ಲಿ ಟ್ರಂಪ್ ಟ್ವೀಟ್ ವಿರುದ್ಧ ನಿರ್ಣಯವನ್ನು ತೆಗೆದುಕೊಂಡಿತು. ವಿಶೇಷ ಅಂದರೆ ಡೆಮಾಕ್ರಟಿಕ್ ಪಕ್ಷದ ಪ್ರತಿನಿಧಿಗಳಿಗೆ ನಾಲ್ಕು ರಿಪಬ್ಲಿಕನ್ ಪ್ರತಿನಿಧಿಗಳೂ ಬೆಂಬಲ ಸೂಚಿಸಿದರು. ಒಬ್ಬ ಸ್ವತಂತ್ರ ಸದಸ್ಯರು ಅಧ್ಯಕ್ಷರ ಜನಾಂಗೀಯ ದ್ವೇಷದ ಮಾತುಗಳ ವಿರುದ್ಧ ತೆಗೆದುಕೊಂಡ ನಿರ್ಣಯಕ್ಕೆ ಮತ ಚಲಾಯಿಸಿದರು.

ಈ ನಡುವೆ ಅಧ್ಯಕ್ಷ ಟ್ರಂಪ್, 'ನನ್ನ ದೇಹದಲ್ಲಿ ಜನಾಂಗೀಯ ದ್ವೇಷದ ಯಾವುದೇ ಮೂಳೆಗಳಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ನಿಜ, ನಾಲಗೆಯಲ್ಲಿ ಯಾವುದೇ ಮೂಳೆಗಳು ಇರುವುದಿಲ್ಲ ಎಂದು ಅವರ ವಿರೋಧಿಗಳು ಕಾಲೆಳೆದಿದ್ದಾರೆ.

ಮುಂದಿನ ವರ್ಷ ನವೆಂಬರ್‌ನಲ್ಲಿ ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಟ್ರಂಪ್ ಮರು ಆಯ್ಕೆ ಬಯಸಿದ್ದಾರೆ. ಅಲ್ಲಿನ ಚುನಾವಣಾ ಕಣ ನಿಧಾನವಾಗಿ ರಂಗೇರತೊಡಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
America President Donald Trump's racism will be key issue for next America election. Democratic party already rising the issue.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more