ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಟಿಕ್ ಟಾಕ್ ಬೆನ್ನಲ್ಲೇ ಅಲಿಬಾಬಾ ನಿಷೇಧ?

|
Google Oneindia Kannada News

ವಾಶಿಂಗ್ಟನ್, ಆಗಸ್ಟ್.17: ದೇಶದಲ್ಲಿ ಚೀನಾ ಮಾಲೀಕತ್ವ ಹೊಂದಿರುವ ಕಂಪನಿಗಳನ್ನು ನಿಷೇಧಿಸುವ ನಿಟ್ಟಿನಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಮಹತ್ವದ ಹೆಜ್ಜೆ ಇರಿಸಿದ್ದಾರೆ.

ಅಮೆರಿಕಾದಲ್ಲಿ ಟಿಕ್ ಟಾಕ್ ನಿಷೇಧಕ್ಕೆ ತೀರ್ಮಾನಿಸಿರುವ ಬೆನ್ನಲ್ಲೇ ಚೀನಾದ ಇ-ಕಾಮರ್ಸ್ ಕಂಪನಿ ಆಗಿರುವ ಆಲಿಬಾಬಾ ನಿಷೇಧಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಕಳೆದ ಆಗಸ್ಟ್.14ರಂದು ಈ ಸಂಬಂಧ ಆದೇಶ ಹೊರಡಿಸಿದ್ದರು.

90 ದಿನಗಳಲ್ಲಿ ಅಮೆರಿಕಾದಲ್ಲಿರುವ ಟಿಕ್‌ಟಾಕ್ ಸ್ವತ್ತುಗಳನ್ನ ಮಾರುವಂತೆ ಟ್ರಂಪ್ ವಾರ್ನಿಂಗ್90 ದಿನಗಳಲ್ಲಿ ಅಮೆರಿಕಾದಲ್ಲಿರುವ ಟಿಕ್‌ಟಾಕ್ ಸ್ವತ್ತುಗಳನ್ನ ಮಾರುವಂತೆ ಟ್ರಂಪ್ ವಾರ್ನಿಂಗ್

ಟಿಕ್ ಟಾಕ್ ಕಂಪನಿಯನ್ನು ಮಾರಾಟ ಮಾಡುವಂತೆ ಬೈಟ್ ಡ್ಯಾನ್ಸ್ ಸಂಸ್ಥೆಗೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 90 ದಿನಗಳ ಅವಕಾಶ ನೀಡಿದ್ದರು. ಜೊತೆಗೆ ಅಮೆರಿಕಾದ ಟಿಕ್ ಟಾಕ್ ಬಳಕೆದಾರರಿಂದ ಸಂಗ್ರಹಿಸಿದ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳದಂತೆ ಎಚ್ಚರಿಕೆ ನೀಡಿದ್ದರು.

ದೇಶದ ಭದ್ರತೆಗೆ ಧಕ್ಕೆ ಉಂಟಾಗದಂತೆ ಕ್ರಮ

ದೇಶದ ಭದ್ರತೆಗೆ ಧಕ್ಕೆ ಉಂಟಾಗದಂತೆ ಕ್ರಮ

ಅಮೆರಿಕಾಗೆ ಸಂಬಂಧಿಸಿದ ಆಂತರಿಕ ಮಾಹಿತಿಯು ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು. ಟಿಕ್ ಟಾಕ್ ಬಳಕೆದಾರರು ನೀಡಿರುವ ಮಾಹಿತಿಯನ್ನು ಯಾವುದೇ ಕಾರಣಕ್ಕೂ ಬೈಟ್ ಡ್ಯಾನ್ಸ್ ಕಂಪನಿಯು ಬೇರೆಲ್ಲೂ ಹಂಚಿಕೊಳ್ಳಬಾರದು. ಸಂಸ್ಥೆಯನ್ನು ನಂಬುವುದಕ್ಕೂ ಸೂಕ್ತ ದಾಖಲೆಗಳು ಬೇಕಾಗುತ್ತವೆ ಎಂದು ಟ್ರಂಪ್ ಹೇಳಿದ್ದರು.

ಅಮೆರಿಕಾದ ಟಿಕ್ ಟಾಕ್ ಬಳಕೆದಾರರ ಮಾಹಿತಿ ನಾಶ

ಅಮೆರಿಕಾದ ಟಿಕ್ ಟಾಕ್ ಬಳಕೆದಾರರ ಮಾಹಿತಿ ನಾಶ

ಯುಎಸ್ಎ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೊರಡಿಸಿರುವ ಇತ್ತೀಚಿನ ಆದೇಶದಲ್ಲಿ ಅಮೆರಿಕಾದ ಟಿಕ್ ಟಾಕ್ ಬಳಕೆದಾರರಿಂದ ಸಂಗ್ರಹಿಸಿದ ಎಲ್ಲ ಮಾಹಿತಿಯನ್ನು ನಾಶಪಡಿಸಬೇಕು ಎಂದು ಸೂಚಿಸಲಾಗಿತ್ತು. ಟಿಕ್ ಟಾಕ್ ಜನರ ವೈಯಕ್ತಿಕ ಮಾಹಿತಿಯನ್ನು ಸೋರಿಕೆ ಮಾಡುತ್ತದೆ ಎಂದು ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಯಾವುದೇ ಸಂದರ್ಭದಲ್ಲಿ, ಅಮೆರಿಕಾದ ಬಳಕೆದಾರರ ಸಂಪೂರ್ಣ ಮಾಹಿತಿಯನ್ನು ಸರ್ವರ್‌ನಿಂದ ಹೊಸ ಕ್ರಮದಲ್ಲಿ ತೆಗೆದುಹಾಕಲು ಯುನೈಟೆಡ್ ಸ್ಟೇಟ್ಸ್ ಬೈಟ್ ಡ್ಯಾನ್ಸ್ ಅನ್ನು ಕೇಳಿತ್ತು.

ಟಿಕ್ ಟಾಕ್ ಸಂಸ್ಥೆಗೆ ಕಮ್ಯುನಿಸ್ಟ್ ಪಕ್ಷದ ಜೊತೆಗೆ ನಂಟು

ಟಿಕ್ ಟಾಕ್ ಸಂಸ್ಥೆಗೆ ಕಮ್ಯುನಿಸ್ಟ್ ಪಕ್ಷದ ಜೊತೆಗೆ ನಂಟು

ಅಮೆರಿಕಾದಲ್ಲಿ ಟಿಕ್ ಟಾಕ್ ಸೇರಿದಂತೆ ಚೀನಾದ ಅಪ್ಲಿಕೇಷನ್ ಗಳನ್ನು ರದ್ದುಗೊಳಿಸುವುದೇ ಉತ್ತಮ ಎಂದು ಯುನೈಟೆಡ್ ಸ್ಟೇಟ್ಸ್ ಕಾರ್ಯದರ್ಶಿ ಮೈಕ್ ಪೊಂಪಿಯೋ ಹೇಳಿದ್ದಾರೆ. ಚೀನೀ ಆ್ಯಪ್ ಗಳು ಬೇರೆ ದೇಶಗಳಿಗೆ ಸಂಬಂಧಿಸಿದ ದತ್ತಾಂಶವನ್ನು ಚೀನಾ ಸರ್ಕಾರದ ಜೊತೆಗೆ ಹಂಚಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು. ಅದರಲ್ಲೂ ಬೀಜಿಂಗ್ ಮೂಲದ ಬೈಟ್ ಡ್ಯಾನ್ಸ್ ಮಾಲೀಕತ್ವದ ಟಿಕ್ ಟಾಕ್ ಸಂಸ್ಥೆಯು ಚೀನಾದ ಕಮ್ಯೂನಿಸ್ಟ್ ಪಕ್ಷದ ಜೊತೆಗೆ ಸಂಪರ್ಕವನ್ನು ಹೊಂದಿದೆ ಎಂದು ಮೈಕ್ ಪೊಂಪಿಯೋ ದೂರಿದ್ದರು.

ಭಾರತದಲ್ಲಿ ಚೀನಾದ 59 ಅಪ್ಲಿಕೇಷನ್ ನಿಷೇಧ

ಭಾರತದಲ್ಲಿ ಚೀನಾದ 59 ಅಪ್ಲಿಕೇಷನ್ ನಿಷೇಧ

ಜನಪ್ರಿಯ ವಿಡಿಯೋ ಹಂಚಿಕೆ ಅಪ್ಲಿಕೇಷನ್ ಟಿಕ್ ಟಾಕ್ ಸೇರಿದಂತೆ ಚೀನಾ ಮೂಲದ 59 ಮೊಬೈಲ್ ಅಪ್ಲಿಕೇಷನ್ ಗಳ ಬಳಕೆಯನ್ನು ಭಾರತದ ಕೇಂದ್ರ ಸರ್ಕಾರವು ಜೂನ್.29ರಂದೇ ನಿಷೇಧಿಸಿ ಆದೇಶ ಹೊರಡಿಸಿತ್ತು. ಟಿಕ್ ಟಾಕ್, ಟಿಕ್ ಟಾಕ್ ಲೈಟ್, ಹೆಲೋ ಲೈಟ್, ಶೇರ್ ಇಟ್ ಲೈಟ್, ಬಿಗೋ ಲೈವ್ ಲೈಟ್ ಮತ್ತು ವಿಎಫ್ ವೈ ಲೈಟ್ ಸೇರಿದಂತೆ ಒಟ್ಟು 59 ಅಪ್ಲಿಕೇಷನ್ ಗಳ ಬಳಕೆಯನ್ನು ರದ್ದುಗೊಳಿಸಲಾಗಿತ್ತು.

English summary
President Donald Trump Indicate To Banning Alibaba And Other Chinese Firms In America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X