ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'1990ರ ದಶಕದ ಈಚೆಗೆ ಭಾರತದಲ್ಲಿನ ಬಡತನ ಪ್ರಮಾಣ ಅರ್ಧಕ್ಕೆ'

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 16: ವಿಶ್ವ ಬ್ಯಾಂಕ್ ನಿಂದ ಬಹಳ ಇಂಟರೆಸ್ಟಿಂಗ್ ಅನಿಸುವಂಥ ವರದಿಯೊಂದು ಬಂದಿದೆ. ಅದರ ಪ್ರಕಾರ 1990ರಿಂದ ಈಚೆಗೆ ಭಾರತದಲ್ಲಿನ ಬಡತನದ ಪ್ರಮಾಣ ಅರ್ಧದಷ್ಟು ಇಳಿದಿದೆ. ಅಷ್ಟೇ ಅಲ್ಲ, ಹದಿನೈದು ವರ್ಷಗಳಿಂದ ಪ್ರತಿ ವರ್ಷವೂ ಭಾರತ ಶೇಕಡಾ ಏಳಕ್ಕಿಂತ ಹೆಚ್ಚು ಪ್ರಗತಿ ದರವನ್ನು ದಾಖಲಿಸುತ್ತಿದೆ ಎಂದು ತಿಳಿಸಲಾಗಿದೆ.

ಬಡತನ ತೊಡೆದು ಹಾಕಲು ಭಾರತ ಪ್ರಯತ್ನಿಸುತ್ತಿರುವ ರೀತಿಯನ್ನು ಮೆಚ್ಚಿಕೊಂಡಿರುವ ವಿಶ್ವ ಬ್ಯಾಂಕ್, ಜಾಗತಿಕ ಅಭಿವೃದ್ಧಿಯಲ್ಲೂ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ ಎಂದು ಶ್ಲಾಘಿಸಿದೆ. ಇನ್ನು ಭಾರತದ ಪ್ರಗತಿ ದರವು ಹೀಗೆಯೇ ಮುಂದುವರಿಯುವ ನಿರೀಕ್ಷೆ ಇದೆ ಎಂದಿದ್ದು, ಇನ್ನು ಹತ್ತು ವರ್ಷಗಳಲ್ಲಿ ತೀವ್ರತರವಾದ ಬಡತನವನ್ನು ಹೋಗಲಾಡಿಸಲಿದೆ ಎಂದು ತಿಳಿಸಿದೆ.

ಬಡತನವನ್ನೂ ಕಿತ್ತು ತಿನ್ನುವ ಹಸಿವನ್ನು ನೀಗಲು ಮದ್ದುಂಟೆ?ಬಡತನವನ್ನೂ ಕಿತ್ತು ತಿನ್ನುವ ಹಸಿವನ್ನು ನೀಗಲು ಮದ್ದುಂಟೆ?

ಆದರೆ, ಭಾರತವು ತನಗೆ ಲಭ್ಯ ಇರುವ ಸಂಪನ್ಮೂಲದ ಸರಿಯಾದ ಬಳಕೆ ಕಡೆಗೆ ಗಮನ ಹರಿಸಬೇಕು ಎಂದು ಸಲಹೆ ಕೂಡ ನೀಡಲಾಗಿದೆ. ನಗರ ಪ್ರದೇಶದ ಭೂಮಿಯ ಪರಿಣಾಮಕಾರಿ ಬಳಕೆ, ಕೃಷಿ ಚಟುವಟಿಕೆ ಬಗ್ಗೆ ಹೆಚ್ಚಿನ ಗಮನ, ಮೂಲಸೌಕರ್ಯದ ಮೇಲೆ ಹೆಚ್ಚಿನ ಹೂಡಿಕೆ ಮಾಡಿದರೆ ಮುಂದಿನ ಹತ್ತು ವರ್ಷಗಳಲ್ಲಿ ಜಿಡಿಪಿ ಎಂಟು ಪರ್ಸೆಂಟ್ ದಾಟಲಿದೆ ಎಂದು ಅಂದಾಜು ಅಂಕಿಯನ್ನು ಸಹ ಮುಂದಿಟ್ಟಿದೆ.

Poverty Rate Halved Since 1990s In India

ಉದ್ಯೋಗ ಸೃಷ್ಟಿಯ ಅಗತ್ಯವನ್ನು ಒತ್ತಿ ಹೇಳಿರುವ ವಿಶ್ವ ಬ್ಯಾಂಕ್, ಸದ್ಯಕ್ಕೆ ಮೂವತ್ತು ಲಕ್ಷ ಉದ್ಯೋಗ ಸೃಷ್ಟಿ ಆಗುತ್ತಿದೆ. ಆದರೆ ಪ್ರತಿ ವರ್ಷ ಒಂದು ಕೋಟಿಗೂ ಹೆಚ್ಚು ಮಂದಿ ಉದ್ಯೋಗದ ಅರ್ಹತೆ ಪಡೆಯುತ್ತಿದ್ದಾರೆ ಎಂದು ತಿಳಿಸಿದೆ.

English summary
World bank report disclosed that, poverty rate in India halved since 1990's. Here is the complete details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X