ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಭಾರತಕ್ಕಿದೆ ಸುವರ್ಣಾವಕಾಶ' ಎಂದು ಅಮೆರಿಕ ರಾಜತಂತ್ರಜ್ಞೆ ಹೇಳಿದ್ಯಾಕೆ?

|
Google Oneindia Kannada News

ವಾಷಿಂಗ್ಟನ್,ಮೇ 21: ಕೊವಿಡ್ 19 ಬಳಿಕ ಭಾರತಕ್ಕೆ ಸುವರ್ಣಾವಕಾಶವಿದೆ ಎಂದು ಅಮೆರಿಕದ ರಾಜತಂತ್ರಜ್ಞೆ ಅಭಿಪ್ರಾಯಪಟ್ಟಿದ್ದಾರೆ. ಆದರೆ ಕ್ಷಿಪ್ರಗತಿಯಲ್ಲಿ ಆರ್ಥಿಕ ಸುಧಾರಣೆಗಳಿಗೆ ಚಾಲನೆ ನೀಡಿದರೆ ಮಾತ್ರ ಈ ಅವಕಾಶಗಳನ್ನು ಬಳಸಿಕೊಳ್ಳಲು ಸಾಧ್ಯವಿದೆ ಎಂದು ಹೇಳಿದ್ದಾರೆ.

Recommended Video

ಚೀನಾ ವಿಜ್ಞಾನಿಗಳು ಕಂಡುಹಿಡಿದಿರೋ ಔಷಧಿಯಿಂದ ಕೊರೊನಾ ಗುಣವಾಗುತ್ತಾ? | Oneindia Kannada

ನಮ್ಮದು ವ್ಯಾಪಾರ ಒಪ್ಪಂದಗಳಿಗೆ ಒತ್ತುಕೊಡುವ ದೇಶ ಆದರೆ ನಮ್ಮೊಂದಿಗೆ ಗಟ್ಟಿಯಾದ ಒಪ್ಪಂದವನ್ನು ಮಾಡಿಕೊಳ್ಳಲು ಭಾರತಕ್ಕೆ ಸಾಧ್ಯವಾಗಿಲ್ಲ. ಭಾರತಕ್ಕೆ ಕೇವಲ ಅಮೆರಿಕದೊಂದಿಗೆ ಮಾತ್ರವಲ್ಲ ಆಸ್ಟ್ರೇಲಿಯಾ ಸೇರಿ ಇತರೆ ದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲು ಕೂಡ ಸಾಧ್ಯವಾಗಿಲ್ಲ ಎಂದಿದ್ದಾರೆ.

ಕೆಲಸ ಕಳೆದುಕೊಂಡ ಎಚ್-1 ಬಿ ಉದ್ಯೋಗಿಗಳಿಗೆ ಹೊರೆಯಾದ 'ಆರೋಗ್ಯ ವಿಮೆ'ಕೆಲಸ ಕಳೆದುಕೊಂಡ ಎಚ್-1 ಬಿ ಉದ್ಯೋಗಿಗಳಿಗೆ ಹೊರೆಯಾದ 'ಆರೋಗ್ಯ ವಿಮೆ'

ಕೊರೊನಾ ಪಿಡುಗಿನ ನಂತರ ಎಲ್ಲಾ ದೇಶಗಳೂ ಅಗತ್ಯ ವಸ್ತುಗಳ ಉತ್ಪಾದನಾ ಘಟಕಗಳು ತಮ್ಮ ದೇಶದಲ್ಲಿಯೇ ಇರಬೇಕು ಎಂಬ ನಿಲುವಿಗೆ ಬರುತ್ತದೆ. ಪೂರೈಕೆ ಜಾಲವೂ ಒಂದು ದೇಶಕ್ಕೆ ಸೀಮಿತವಾಗಬಾರದು ಎಂಬ ನಿಲುವನ್ನೂ ಹಲವು ದೇಶಗಳು ವ್ಯಕ್ತಪಡಿಸಿವೆ.

ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಅಮೆರಿಕಕ್ಕೆ ಆಸಕ್ತಿ

ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಅಮೆರಿಕಕ್ಕೆ ಆಸಕ್ತಿ

ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಅಮೆರಿಕಕ್ಕೆ ಆಸಕ್ತಿ ಇದೆ. ಆದರೆ ಅದು ಇದುವರೆಗೂ ಸಾಧ್ಯವಾಗಿಲ್ಲ ಎಂದು ಅಮೆರಿಕ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾ ವಿದ್ಯಾಮಾನಗಳ ಉಸ್ತುವಾರಿ ಹೊತ್ತಿದ್ದ ಇನ್ನೇನು ನಿವೃತ್ತರಾಗಲಿರುವ ಪ್ರಧಾನ ಕಾರ್ಯದರ್ಶಿ ಅಲಿಸ್ ವೆಲ್ಸ್ ಮಾತಾಗಿದೆ.

ಭಾರತಕ್ಕೆ ನಿಜವಾಗಿಯೂ ಸುವರ್ಣಾವಕಾಶ

ಭಾರತಕ್ಕೆ ನಿಜವಾಗಿಯೂ ಸುವರ್ಣಾವಕಾಶ

ಈವರೆಗೆ ಚೀನಾದಲ್ಲಿ ಕೇಂದ್ರೀಕೃತವಾಗಿದ್ದ ಪೂರೈಕೆ ಜಾಲವನ್ನು ಇತರೆ ದೇಶಗಳಿಗೆ ವಿಸ್ತರಿಸಲು ಹಲವು ದೇಶಗಳು ಯೋಚಿಸುತ್ತಿವೆ. ಇದು ಭಾರತಕ್ಕೆ ನಿಜವಾಗಿಯೂ ಸುವರ್ಣಾವಕಾಶವನ್ನು ಕಲ್ಪಿಸಿದೆ. ದೇಶೀಯ ಉತ್ಪನ್ನಗಳು ಮತ್ತು ಮಾರುಕಟ್ಟೆಯನ್ನು ರಕ್ಷಿಸಿಕೊಳ್ಳಲು ಹೆಚ್ಚು ಒತ್ತುಕೊಡುವ ದೃಷ್ಟಿಕೋನದಿಂದ ಆಚೆಗೆ ಯೋಚಿಸುವ ಮೂಲಕ ಭಾರತವು ಈ ಬೆಳವಣಿಗೆಗೆ ಪ್ರತಿಕ್ರಿಯಿಸಬೇಕು ಎಂದು ಹೇಳಿದ್ದಾರೆ.

ಕೊರೊನಾ ವೈರಸ್ 50 ಲಕ್ಷದ ಗಡಿ ದಾಟಿದ ಮೇಲೆ WHO ಸಂದೇಶವೇನು?ಕೊರೊನಾ ವೈರಸ್ 50 ಲಕ್ಷದ ಗಡಿ ದಾಟಿದ ಮೇಲೆ WHO ಸಂದೇಶವೇನು?

ಒಪ್ಪಂದಕ್ಕೆ ಭಾರತ ಅಮೆರಿಕ ಶೀಘ್ರ ಸಹಿ ಹಾಕಲಿವೆ

ಒಪ್ಪಂದಕ್ಕೆ ಭಾರತ ಅಮೆರಿಕ ಶೀಘ್ರ ಸಹಿ ಹಾಕಲಿವೆ

ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ನಾವು ಎರಡು ವರ್ಷಗಳಿಂದ ರೂಪಿಸಿದ್ದೇವೆ. ಈ ಒಪ್ಪಂದಕ್ಕೆ ಶೀಘ್ರ ಎರಡು ದೇಶಗಳೂ ಸಹಿ ಹಾಕಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದರು. ಫೆಬ್ರವರಿಯಲ್ಲಿ ಟ್ರಂಪ್ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಕುರಿತು ಚರ್ಚೆ ನಡೆಯಬಹುದು ಎಂದುಕೊಂಡಿದ್ದೆವು. ಆದರೆ ಎರಡೂ ದೇಶಗಳು ಸುಮ್ಮನಿದ್ದವು.

ಅಮೆರಿಕದ ಉತ್ಪನ್ನಗಳಿಗೆ ತೆರಿಗೆ ಭಾರ ಇಲ್ಲದಂತೆ ಮಾಡಬೇಕು

ಅಮೆರಿಕದ ಉತ್ಪನ್ನಗಳಿಗೆ ತೆರಿಗೆ ಭಾರ ಇಲ್ಲದಂತೆ ಮಾಡಬೇಕು

ಅಮೆರಿಕದ ಉತ್ಪನ್ನಗಳಿಗೆ ಭಾರತದಲ್ಲಿ ತೆರಿಗೆ ಭಾರ ಇಲ್ಲದಂತೆ ಮಾಡಬೇಕು ಎನ್ನುವುದು ಟ್ರಂಪ್ ನಿಲುವಾಗಿದೆ. ಆದರೆ ಭಾರತ ಇದಕ್ಕೆ ಒಪ್ಪುತ್ತಿಲ್ಲ. ಯಾವುದೇ ಒಪ್ಪಂದದಲ್ಲಿ ಕೆಲ ಅಡೆತಡೆಗಳು ಇರುತ್ತದೆ. ಅವನ್ನು ಪರಿಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದರು.

English summary
Underlining that India has not been able to crack trade deals, a senior US diplomat on Wednesday said it needs to bring economic reforms to grab the opportunity provided by the coronavirus crisis.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X