ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ- ಯುಎಸ್ ಸಂಬಂಧಕ್ಕೆ ಹೊಸ ದೃಷ್ಟಿಕೋನ ಬೆಸೆದ ಮೋದಿ- ಬೈಡನ್ ಭೇಟಿ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 24: ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಅಮೆರಿಕ ಅಧ್ಯಕ್ಷ ಜೋ ಬಿಡೆನ್‌ರನ್ನು ಮೊದಲ ಬಾರಿ ಭೇಟಿ ಮಾಡಿದರು.

ಆತ್ಮೀಯ ಸ್ವಾಗತಕ್ಕಾಗಿ ಕೃತಜ್ಞತೆಯನ್ನು ಪ್ರಧಾನಿ ಮೋದಿ ವ್ಯಕ್ತಪಡಿಸಿದ್ದು, "ನನಗೆ ಮತ್ತು ನನ್ನ ನಿಯೋಗಕ್ಕೆ ನೀಡಿದ ಆತ್ಮೀಯ ಸ್ವಾಗತಕ್ಕಾಗಿ ನಾನು ನಿಮಗೆ ಧನ್ಯವಾದ ತಿಳಿಸುತ್ತೇನೆ. ಮೊದಲು ನಮಗೆ ಚರ್ಚೆಗಳನ್ನು ನಡೆಸಲು ಅವಕಾಶವಿತ್ತು ಮತ್ತು ಈ ಸಮಯದಲ್ಲಿ ನೀವು ಭಾರತ-ಯುಎಸ್ ದ್ವಿಪಕ್ಷೀಯ ಸಂಬಂಧಗಳ ದೃಷ್ಟಿಕೋನವನ್ನು ರೂಪಿಸಿದ್ದೀರಿ. ಇಂದು ನೀವು ಭಾರತ- ಅಮೆರಿಕ ಸಂಬಂಧಗಳಿಗಾಗಿ ನಿಮ್ಮ ದೃಷ್ಟಿಕೋನವನ್ನು ಕಾರ್ಯಗತಗೊಳಿಸಲು ಉಪಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೀರಿ," ಎಂದರು.

ಜಪಾನ್ ಪಿಎಂ ಸುಗಾ ಯೋಶಿಹಿದೆ ಜೊತೆ ಮೋದಿ ಸಮಾಲೋಚನೆಜಪಾನ್ ಪಿಎಂ ಸುಗಾ ಯೋಶಿಹಿದೆ ಜೊತೆ ಮೋದಿ ಸಮಾಲೋಚನೆ

ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಆರಂಭಿಕ ಮಾತುಗಳಲ್ಲಿ, "ನಿಮ್ಮ ನಾಯಕತ್ವದಲ್ಲಿ ಭಾರತ- ಯುಎಸ್ ಸಂಬಂಧ ವಿಸ್ತರಿಸಲು ಭರವಸೆಯ ಬೀಜಗಳನ್ನು ಬಿತ್ತಲಾಗಿದೆ ಎಂದು ನಾನು ನೋಡುತ್ತೇನೆ," ಎಂದು ಹೇಳಿದರು.

PM Narendra Modi And US President Joe Biden Hold Bilateral Meeting In The White House

ಈ ದ್ವಿಪಕ್ಷೀಯ ಭೇಟಿಯು ಈ ವರ್ಷದ ಜನವರಿಯಲ್ಲಿ ಯುಎಸ್ ಅಧ್ಯಕ್ಷರಾಗಿ ಜೋ ಬಿಡೆನ್ ಅಧಿಕಾರ ಸ್ವೀಕರಿಸಿದ ನಂತರ ಪ್ರಧಾನಿ ಮೋದಿ ನಡುವಿನ ಮೊದಲ ವೈಯಕ್ತಿಕ ಭೇಟಿಯಾಗಿದೆ.

"ಇಂದಿನ ದ್ವಿಪಕ್ಷೀಯ ಶೃಂಗಸಭೆ ಮುಖ್ಯವಾಗಿದ್ದು, ನಾವು ಈ ಶತಮಾನದ ಮೂರನೇ ದಶಕದ ಆರಂಭದಲ್ಲಿ ಭೇಟಿಯಾಗುತ್ತಿದ್ದೇವೆ. ಈ ದಶಕವು ಹೇಗೆ ರೂಪುಗೊಳ್ಳುತ್ತದೆ ಎಂಬುದರಲ್ಲಿ ನಿಮ್ಮ ನಾಯಕತ್ವವು ಖಂಡಿತವಾಗಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಭಾರತ ಮತ್ತು ಅಮೆರಿಕ ನಡುವಿನ ಬಲವಾದ ಸ್ನೇಹ ಬೀಜಗಳನ್ನು ಬಿತ್ತಲಾಗಿದೆ," ಎಂದು ಪ್ರಧಾನಿ ಮೋದಿ ಹೇಳಿದರು.

ಭಾರತಕ್ಕೆ ಆಗಮಿಸುವಂತೆ ಕಮಲಾ ಹ್ಯಾರಿಸ್ ಆಹ್ವಾನಿಸಿದ ಮೋದಿ ಭಾರತಕ್ಕೆ ಆಗಮಿಸುವಂತೆ ಕಮಲಾ ಹ್ಯಾರಿಸ್ ಆಹ್ವಾನಿಸಿದ ಮೋದಿ

ಉಭಯ ದೇಶಗಳ ನಡುವಿನ ಸಂಬಂಧದ ಕುರಿತು ಮಾತನಾಡಿದ ಯುಎಸ್ ಅಧ್ಯಕ್ಷ ಜೋ ಬಿಡೆನ್, "ಯುಎಸ್-ಭಾರತದ ಸಂಬಂಧವು ನಮಗೆ ಸಾಕಷ್ಟು ಜಾಗತಿಕ ಸವಾಲುಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ನಾನು ಬಹಳ ಹಿಂದಿನಿಂದಲೂ ನಂಬಿದ್ದೇನೆ. ವಾಸ್ತವವಾಗಿ 2006ರಲ್ಲಿ ನಾನು ಉಪಾಧ್ಯಕ್ಷನಾಗಿದ್ದಾಗ, 2020ರ ವೇಳೆಗೆ ಭಾರತ ಮತ್ತು ಯುಎಸ್ ವಿಶ್ವದ ಅತ್ಯಂತ ಹತ್ತಿರದ ರಾಷ್ಟ್ರಗಳಲ್ಲಿ ಒಂದಾಗಲಿವೆ ಎಂದು ನಾನು ಹೇಳಿದ್ದೆ," ಎಂದು ನೆನಪಿಸಿಕೊಂಡರು.

PM Narendra Modi And US President Joe Biden Hold Bilateral Meeting In The White House

ಈ ವೇಳೆ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, "ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಉಲ್ಲೇಖಿಸಿರುವ ಪ್ರತಿಯೊಂದು ವಿಷಯಗಳು ಭಾರತ-ಅಮೆರಿಕ ಸ್ನೇಹ ವೃದ್ಧಿಸುವ ಮಾತುಗಳಾಗಿವೆ. ಕೋವಿಡ್- 19, ಹವಾಮಾನ ಬದಲಾವಣೆ ಮತ್ತು ಕ್ವಾಡ್ ಅನ್ನು ತಗ್ಗಿಸುವ ಅವರ ಪ್ರಯತ್ನಗಳು ಗಮನಾರ್ಹವಾಗಿವೆ," ಎಂದರು.

ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ: ಮಾರಿಸನ್ -ಮೋದಿ ದ್ವಿಪಕ್ಷೀಯ ಸಭೆ ಕ್ವಾಡ್ ರಾಷ್ಟ್ರಗಳ ನಾಯಕರ ಶೃಂಗಸಭೆ: ಮಾರಿಸನ್ -ಮೋದಿ ದ್ವಿಪಕ್ಷೀಯ ಸಭೆ

"ಅಧ್ಯಕ್ಷ ಜೋ ಬಿಡೆನ್ ಗಾಂಧೀಜಿಯವರ ಜಯಂತಿಯನ್ನು ಪ್ರಸ್ತಾಪಿಸಿದ್ದು, ಗಾಂಧೀಜಿ ಟ್ರಸ್ಟೀಶಿಪ್ ಬಗ್ಗೆ ಮಾತನಾಡಿದ್ದಾರೆ, ಇದು ಮುಂದಿನ ದಿನಗಳಲ್ಲಿ ನಮ್ಮ ಸಂಬಂಧಕ್ಕೆ ಬಹಳ ಮುಖ್ಯವಾದ ಪರಿಕಲ್ಪನೆ," ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದರು.

PM Narendra Modi And US President Joe Biden Hold Bilateral Meeting In The White House

"ಭಾರತ ಮತ್ತು ಯುಎಸ್‌ನಲ್ಲಿ ವ್ಯಾಪಾರವು ತನ್ನದೇ ಆದ ಪ್ರಾಮುಖ್ಯತೆಯನ್ನು ಹೊಂದಿದೆ. ಈ ದಶಕದಲ್ಲಿ ಅಮೆರಿಕದೊಂದಿಗೆ ಅನೇಕ ವಿಷಯಗಳಲ್ಲಿ ಪರಸ್ಪರ ಪೂರಕವಾಗಿ ಕೆಲಸ ನಿರ್ವಹಿಸಬಹುದು. ಅದು ಭಾರತಕ್ಕೆ ಅಗತ್ಯವಾಗಿದೆ ಮತ್ತು ಭಾರತದೊಂದಿಗೆ ಅಮೆರಿಕಕ್ಕೂ ಉಪಯುಕ್ತವಾಗುವ ಅನೇಕ ವಿಷಯಗಳಿವೆ. ಈ ದಶಕದಲ್ಲಿ ವ್ಯಾಪಾರವು ಒಂದು ಪ್ರಮುಖ ಕ್ಷೇತ್ರವಾಗಲಿದೆ," ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

ಪ್ರಧಾನಿ ಮೋದಿ ನೇತೃತ್ವದ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗಿನ ದ್ವಿಪಕ್ಷೀಯ ಸಭೆಗಾಗಿ ಭಾರತೀಯ ನಿಯೋಗದಲ್ಲಿ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್, ರಾಷ್ಟ್ರೀಯ ರಕ್ಷಣಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಕಾರ್ಯದರ್ಶಿ ಎಚ್.ವಿ. ಶೃಂಗ್ಲಾ, ಅಮೆರಿಕದ ಭಾರತದ ರಾಯಭಾರಿ ಟಿ.ಎಸ್. ಸಂಧು, ಜಂಟಿ ಕಾರ್ಯದರ್ಶಿ ಆರ್.ಜಿ. ಶ್ರೇಷ್ಠ್ ಮತ್ತು ಪಿಎಂ ಖಾಸಗಿ ಕಾರ್ಯದರ್ಶಿ ವಿವೇಕ್ ಕುಮಾರ್ ಇದ್ದರು.

English summary
I've long believed that US-India relationship can help us solve a lot of global challenges, US President Joe Biden Said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X