ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಚೀನಾ ಗಡಿ ವಿವಾದ: ಮೋದಿ ಉತ್ತಮ ಮನಸ್ಥಿತಿಯಲ್ಲಿಲ್ಲ ಎಂದ ಟ್ರಂಪ್

|
Google Oneindia Kannada News

ವಾಷಿಂಗ್ಟನ್, ಮೇ 29: ಭಾರತ ಹಾಗೂ ಚೀನಾ ಗಡಿ ವಿವಾದ ತಾರಕಕ್ಕೇರಿದೆ. ಎರಡೂ ಸೇನೆಯು ಯುದ್ಧಕ್ಕೆ ಟೊಂಕಕಟ್ಟಿ ನಿಂತಿದೆ.

ಈ ಗಡಿ ವಿವಾದ ಕುರಿತು ಪ್ರಧಾನಿ ನರೇಂದ್ರ ಮೋದಿ ತಲೆಕೆಡಿಸಿಕೊಂಡಿದ್ದಾರೆ. ಅವರ ಮನಸ್ಥಿತಿ ಉತ್ತಮವಾಗಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತ-ಚೀನಾ ಗಡಿ ಹಂಚಿಕೆ ಬಗ್ಗೆ ಗೊತ್ತಿರದ ಟ್ರಂಪ್ ಮಧ್ಯಸ್ಥಿಕೆ ಮಾತಾಡಿದ್ದೇಕೆ?ಭಾರತ-ಚೀನಾ ಗಡಿ ಹಂಚಿಕೆ ಬಗ್ಗೆ ಗೊತ್ತಿರದ ಟ್ರಂಪ್ ಮಧ್ಯಸ್ಥಿಕೆ ಮಾತಾಡಿದ್ದೇಕೆ?

'ಭಾರತ ಹಾಗೂ ಚೀನಾದ ನಡುವೆ ಬಹುದೊಡ್ಡ ವಿವಾದ ನಡೆಯುತ್ತಿದೆ. ಭಾರತವು ನನ್ನನ್ನು ಇಷ್ಟ ಪಡುತ್ತದೆ. ಇಲ್ಲಿನ ಮಾಧ್ಯಮಗಳು ಇಷ್ಟಪಡುವುದಕ್ಕಿಂತ ಹೆಚ್ಚಾಗಿ ಭಾರತ ನನ್ನನ್ನು ಇಷ್ಟ ಪಡುತ್ತದೆ. ಮೋದಿ ನನಗೆ ನೆಚ್ಚಿನ ರಾಜಕಾರಣಿ' ಎಂದು ಟ್ರಂಪ್ ಹೊಗಳಿಕೆಯ ಮಾತನಾಡಿದ್ದಾರೆ.

PM Modi Not In Good Mood Over Border Row With China

'ಈ ಎರಡೂ ದೇಶಗಳಲ್ಲೂ ಬಿಲಿಯನ್ ಜನಸಂಖ್ಯೆಯಿದೆ. ಹಾಗೆಯೇ ಸೇನೆಯು ಕೂಡ ಶಕ್ತಿಭರಿತವಾಗಿವೆ. ಎರಡೂ ದೇಶಗಳ ನಡುವೆ ಮಧ್ಯಸ್ಥಿಕೆ ವಹಿಸಲು ನಾನು ಸಿದ್ಧನಿದ್ದೇನೆ ಆದರೆ ಮೋದಿ ಮನಸ್ಸು ಮಾಡುತ್ತಿಲ್ಲ. ಈ ವಿಚಾರದ ಕುರಿತು ಮಾತನಾಡಲು ಅವರಿಗೆ ಇಷ್ಟವಿಲ್ಲ' ಎಂದರು.

ನನಗೆ ಸಹಾಯಕ್ಕೆ ಬನ್ನಿ ಎಂದು ಕರೆದರೆ ನಾನು ಹೋಗಲು ಸಿದ್ಧನಿದ್ದೇನೆ, ಮಧ್ಯಸ್ಥಿಕೆ ಅಥವಾ ಯಾವುದೋ ಒಂದು ದೇಶಕ್ಕೆ ಬೆಂಬಲವನ್ನೂ ನೀಡುತ್ತೇನೆ. ಆದರೆ ಈ ವಿವಾದ ಶಾಂತಿಯುತವಾಗಿ ಅಂತ್ಯಗೊಳ್ಳಬೇಕು.

ಗಡಿ ವಿವಾದ: ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಅಮೇರಿಕಾಗಡಿ ವಿವಾದ: ಭಾರತ-ಚೀನಾ ನಡುವೆ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದ ಅಮೇರಿಕಾ

ಎರಡೂ ದೇಶಗಳ ಪ್ರತಿನಿಧಿಗಳು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ನಮಗೆ ಮಧ್ಯಸ್ಥಿಕೆಯ ಅಗತ್ಯವಿಲ್ಲ ಎಂದು ಚೀನಾ ವಿದೇಶಾಂಗ ವಕ್ತಾರ ಝಾವೋ ಲಿಜಿಯನ್ ಹೇಳಿದ್ದಾರೆ.

English summary
Reiterating his offer to mediate on the border dispute between India and China, US President Donald Trump has said that he spoke to Prime Minister Narendra Modi, who is not in a "good mood" over the "big conflict" between the two countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X