ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೆದ್ದಾರಿಗೆ ಬಂದು ಕಾರಿಗೆ ಡಿಕ್ಕಿ ಹೊಡೆದ ವಿಮಾನ, ಜನ ಕಂಗಾಲು!

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 13: ಲಘು ವಿಮಾನವೊಂದು ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಹೆದ್ದಾರಿಗೆ ಬಂದು, ಕಾರಿಗೆ ಡಿಕ್ಕಿ ಹೊಡೆದ ಘಟನೆ ಅಮೆರಿಕದ ಮೇರಿಲ್ಯಾಂಡ್ ನಲ್ಲಿ ನಡೆದಿದೆ.

ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಕೆಲವು ವಾಹನಗಳು ಜಖಂಗೊಂಡಿವೆ.

ವಿಮಾನವನ್ನು ಜೋಳದ ಗದ್ದೆಗಿಳಿಸಿ 233 ಜನರ ಪ್ರಾಣ ಉಳಿಸಿದ 'ಹೀರೋ' ಪೈಲಟ್ವಿಮಾನವನ್ನು ಜೋಳದ ಗದ್ದೆಗಿಳಿಸಿ 233 ಜನರ ಪ್ರಾಣ ಉಳಿಸಿದ 'ಹೀರೋ' ಪೈಲಟ್

ಇದೊಂದು ಖಾಸಗಿ ವಿಮಾನವಾಗಿದ್ದು, ಅದು ಪತನವಾಗಲು ತಾಂತ್ರಿಕ ದೋಷ ಕಾರಣವಿದ್ದಿರಬ ಹುದು ಎಂದು ಅಂದಾಜಿಸಲಾಗಿದೆ. ವಿಮಾನ ಡಿಕ್ಕಿ ಹೊಡೆದ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

 Plane Hits Car After Takeoff In Maryland, America

"ಸಾಮಾನ್ಯವಾಗಿ ಖಾಸಗೀ ವಿಮಾನ ಪಥನದಂಥ ಇಂಥ ಘಟನೆಗಳು ನಡೆದಾಗ ನಾವು ಪ್ರಕರಣ ದಾಖಲಿಸಿಕೊಂಡು, ಕಾರಣ ಏನು ಎಂಬ ಬಗ್ಗೆ ತನಿಖೆ ನಡೆಸುತ್ತೇವೆ" ಎಂದು ಪೊಲೀಸರು ತಿಳಿಸಿದ್ದಾರೆ.

ಕರಾಳ ರಾತ್ರಿ: ನಿದ್ದೆಯಲ್ಲಿ ಮುಳುಗಿ ವಿಮಾನ ಇಳಿಯುವುದನ್ನೇ ಮರೆತ ಮಹಿಳೆ, ಮುಂದೇನಾಯ್ತು? ಕರಾಳ ರಾತ್ರಿ: ನಿದ್ದೆಯಲ್ಲಿ ಮುಳುಗಿ ವಿಮಾನ ಇಳಿಯುವುದನ್ನೇ ಮರೆತ ಮಹಿಳೆ, ಮುಂದೇನಾಯ್ತು?

ಟೇಕಾಫ್ ಆದ ವಿಮಾನ ಇದ್ದಕ್ಕಿದ್ದಂತೆ ಬಂದು ಹೆದ್ದಾರಿಗೆ ಅಪ್ಪಳಿಸಿ, ರಸ್ತೆಯಲ್ಲಿದ್ದ ವಾಹನಗಳಿಗೆ ಡಿಕ್ಕಿಹೊಡೆದಿತ್ತು. ಆ ದೃಶ್ಯ ನಿಜಕ್ಕೂ ಭೀಕರವಾಗಿತ್ತು. ಆದರೆ ಯಾರ ಪ್ರಾಣಕ್ಕೂ ಅಪಾಯವಾಗದಿರುವುದು ಪವಾಡವೇ ಸರಿ ಎನ್ನುತ್ತಾರೆ ಪ್ರತ್ಯಕ್ಷದರ್ಶಿಗಳು.

ವಿಂಗ್ ಸೂಟ್‌ನಲ್ಲಿ 8,500 ಅಡಿ ಎತ್ತರದಿಂದ ಜಿಗಿದು ಐಎಎಫ್ ಪೈಲಟ್ ಸಾಧನೆವಿಂಗ್ ಸೂಟ್‌ನಲ್ಲಿ 8,500 ಅಡಿ ಎತ್ತರದಿಂದ ಜಿಗಿದು ಐಎಎಫ್ ಪೈಲಟ್ ಸಾಧನೆ

ಇತ್ತೀಚೆಗಷ್ಟೆ ರಷ್ಯಾದ ಮಾಸ್ಕೋದಲ್ಲಿ ವಿಮಾನ ಅಪಘಾತವನ್ನು ತಪ್ಪಿಸುವ ಸಲುವಾಗಿ ಪೈಲಟ್ ವಿಮಾನವನ್ನು ಜೋಳದ ಗದ್ದೆಯಲ್ಲಿ ಇಳಿಸಿದ್ದರು. ಹಕ್ಕಿಗಳ ಹಿಂಡು ಏಕಾಏಕಿ ಬಂದು ವಿಮಾನ ಪ್ರಯಾಣಕ್ಕೆ ಅಡ್ಡಿಮಾಡಿದ್ದರಿಂದ ವಿಮಾನ ದಿಕ್ಕಾಪಾಲಾಗಿ ಹಾರಲು ಆರಂಭಿಸಿತ್ತು. ತಕ್ಷಣವೇ ಸಮಯ ಪ್ರಜ್ಞೆ ಮೆರೆದ ಪೈಲಟ್ ಪ್ರಯಾಣಿಕರ ಪ್ರಾಣ ಉಳಿಸುವ ಸಲುವಾಗಿ ಹತ್ತಿರದಲ್ಲೇ ಇದ್ದ ಜೋಳದ ಗದ್ದೆಯಲ್ಲಿ ವಿಮಾನವನ್ನು ಲ್ಯಾಂಡ್ ಮಾಡಿದ್ದರು.

English summary
In a Shocking incident a small crashed after takeoff and struck a car in Maryloand, America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X