ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕಿಗೆ ಈ ವರ್ಷಾಂತ್ಯದಲ್ಲಿ ಸಿದ್ಧವಾಗಲಿದೆ ಗುಳಿಗೆ

|
Google Oneindia Kannada News

ನ್ಯೂಯಾರ್ಕ್, ಮೇ 3: ಕೊರೊನಾ ಸೋಂಕಿನ ನಿವಾರಣೆಗೆ ವಿಶ್ವದಾದ್ಯಂತ ಹಲವು ಲಸಿಕೆಗಳು ಅಭಿವೃದ್ಧಿಗೊಳ್ಳುತ್ತಿವೆ. ಔಷಧಿಗಳ ತಯಾರಿಯೂ ಪ್ರಗತಿಯಲ್ಲಿದೆ. ಸದ್ಯಕ್ಕೆ ಕೊರೊನಾಗೆ ಮಾತ್ರೆಗಳ ಅಭಿವೃದ್ಧಿಯಲ್ಲಿ ಅಮೆರಿಕ ಮೂಲದ ಔಷಧ ಕಂಪನಿ ಫೈಜರ್ ತೊಡಗಿಕೊಂಡಿದ್ದು, ಈ ವರ್ಷದ ಕೊನೆಗೆ ಕೊರೊನಾ ಸೋಂಕಿಗೆ ಮಾತ್ರೆಗಳು ಲಭ್ಯವಾಗಲಿವೆ ಎಂದು ಫೈಜರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಲ್ವರ್ಟ್ ಬೌರ್ಲಾ ತಿಳಿಸಿದ್ದಾರೆ.

ಜರ್ಮನ್ ಔಷಧ ತಯಾರಿಕಾ ಸಂಸ್ಥೆ ಬಯೋ ಎನ್‌ಟೆಕ್ ಜೊತೆಗೂಡಿ ಅಮೆರಿಕದ ಫೈಜರ್ ಮೊದಲ ಅಧೀಕೃತ ಕೊರೊನಾ ಲಸಿಕೆ ಅಭಿವೃದ್ಧಿಪಡಿಸಿತ್ತು. ಮಾರ್ಚ್‌ನಲ್ಲಿ ಸೋಂಕು ನಿರೋಧಕ ಲಸಿಕೆಯ ಆರಂಭಿಕ ಹಂತದ ಕ್ಲಿನಿಕಲ್ ಪ್ರಯೋಗ ನಡೆಸಿತ್ತು.

"ಕೊರೊನಾ ಸೋಂಕಿನಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಮತ್ತೊಂದು ಎಡವಟ್ಟು ಮಾಡಿಕೊಳ್ಳಬೇಡಿ"

ಇದೀಗ ಮಾತ್ರೆಗಳ ಅಭಿವೃದ್ಧಿಯಲ್ಲಿ ತೊಡಗಿಕೊಂಡಿದೆ. ಈ ಔಷಧವು ಮಾನವ ಜೀವಕೋಶಗಳಲ್ಲಿ ಕೊರೊನಾ ವೈರಸ್ ದ್ವಿಗುಣಗೊಳಿಸುವ ಕಿಣ್ವವನ್ನು ಪ್ರತಿಬಂಧಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ ಎನ್ನಲಾಗಿದೆ. ಈ ಔಷಧದಲ್ಲಿ ಪ್ರೊಟೀನ್ ಇನ್ಹಿಬಿಟರ್‌ಗಳಿದ್ದು, ಏಡ್ಸ್, ಹೆಪಟೈಟಿಸ್ ಸಿ ಚಿಕಿತ್ಸೆಗೂ ಇದನ್ನು ಬಳಸಲಾಗುತ್ತದೆ.

 Pill To Treat Coronavirus Ready By Year End Says Pfizer CEO

ಈ ಔಷಧದ ವೈದ್ಯಕೀಯ ಪ್ರಯೋಗಗಳು ಸಂಪೂರ್ಣಗೊಂಡು ಅಮೆರಿಕ ಆಹಾರ ಮತ್ತು ಔಷಧೀಯ ಸಂಸ್ಥೆಯು ಅನುಮೋದನೆ ನೀಡಿದರೆ ಅಮೆರಿಕದಲ್ಲಿ ಈ ವರ್ಷಾಂತ್ಯಕ್ಕೆ ಔಷಧ ಲಭ್ಯವಾಗಲಿದೆ ಎಂದು ಬೌರ್ಲಾ ತಿಳಿಸಿದ್ದಾರೆ.

Recommended Video

#Covid19Updates, Bengaluru: 21,199 ಮಂದಿಗೆ ಕೊರೋನಾ ಸೋಂಕು.. 64 ಮಂದಿ ಸಾವು | Oneindia Kannada

ಕಳೆದ ತಿಂಗಳಷ್ಟೆ 12-15 ವರ್ಷದ ಮಕ್ಕಳಿಗೂ ಕೊರೊನಾ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ ನಿಡುವಂತೆ ಫೈಜರ್ ಕೇಳಿಕೊಂಡಿತ್ತು. ಹನ್ನೊಂದು ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ ಅಭಿವೃದ್ಧಿಪಡಿಸುವಲ್ಲಿ ಸಂಸ್ಥೆ ಆರು ತಿಂಗಳಿನಿಂದಲೂ ತೊಡಗಿಕೊಂಡಿದೆ.

English summary
US based pharmaceutical company Pfizer's COVID-19 oral antiviral pill expected to be ready by the end of the year
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X