ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವ್ಯಕ್ತಿಗೆ ಹಂದಿ ಹೃದಯ ಕಸಿ: ಅಮೆರಿಕಾ ವೈದ್ಯರ ಹೊಸ ದಾಖಲೆ

|
Google Oneindia Kannada News

ವಾಷಿಂಗ್ಟನ್ ಜನವರಿ 11: ಹಂದಿ ಅಂದರೆ ಮುಖ ಕಿವಿಚಿಕೊಳ್ಳುವವರು ಅಧಿಕ ಜನ. ಆದರೆ ಹಂದಿಯೊಂದರಿಂದ ವೃದ್ಧನ ಜೀವ ಉಳಿಸಲಾಗಿದೆ. ವೈದ್ಯಕೀಯ ಲೋಕದಲ್ಲಿ ಮೊದಲ ಬಾರಿಗೆ ಅಮೆರಿಕಾದ 57 ವರ್ಷದ ವ್ಯಕ್ತಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಅಳವಡಿಸಿದ್ದಾರೆ. ಈ ಐತಿಹಾಸಿಕ ಸಾಧನೆ ಶುಕ್ರವಾರ ನಡೆದಿದೆ. ಮೇರಿಲ್ಯಾಂಡ್ ಮೆಡಿಕಲ್ ಸ್ಕೂಲ್ ವಿಶ್ವವಿದ್ಯಾಲಯ ಸೋಮವಾರ ಈ ಬಗ್ಗೆ ಹೇಳಿಕೆ ನೀಡಿದೆ. ಸಾವಿನ ಅಂಚಿನಲ್ಲಿರುವ ವ್ಯಕ್ತಿಗೆ ಹಂದಿಯ ಹೃದಯವನ್ನು ಯಶಸ್ವಿಯಾಗಿ ಕಸಿ ಮಾಡುವ ಮೂಲಕ ಅಮೆರಿಕಾ ವೈದ್ಯರು ಹೊಸ ದಾಖಲೆ ಸೃಷ್ಟಿಸಿದ್ದಾರೆ.

ಇದರಿಂದ ಮಾನವನ ದೇಹ ಹಂದಿ ಅಂಗಾಂಗಗಳಿಗೆ ಹೊಂದಿಕೊಳ್ಳುತ್ತದೆ ಎಂದು ತಿಳಿದು ಬಂದಿದೆ. ಹಂದಿಯ ಹೃದಯದಿಂದಲೂ ಮಾನವ ಜೀವನ ಉಳಿಸಬಹುದು ಮತ್ತು ಪ್ರಾಣಿಗಳ ಅಂಗಾಂಗಗಳನ್ನ ಬಳಸಿಕೊಂಡು ಪ್ರಾಣ ಉಳಿಸಬಹುದು ಎಂಬುದನ್ನು ಈ ಅನ್ವೇಷಣೆ ಹಾಗೂ ಶಸ್ತ್ರಚಿಕಿತ್ಸೆ ತೋರಿಸಿಕೊಟ್ಟಿದೆ. ಶಸ್ತ್ರಚಿಕಿತ್ಸೆಯ ಮೂರು ದಿನಗಳ ನಂತರ ರೋಗಿಯು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ ಎಂದು ಮೇರಿಲ್ಯಾಂಡ್ ಸ್ಕೂಲ್ ಆಫ್ ಮೆಡಿಸಿನ್ ವಿಶ್ವವಿದ್ಯಾಲಯದ ವೈದ್ಯರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಅಧಿಕ ಮಕ್ಕಳಿಗೆ ಕೊರೊನಾ: ಆಸ್ಪತ್ರೆಗಳು ಫುಲ್

57 ವರ್ಷದ ಡೇವಿಡ್ ಬೆನೆಟ್ ಅವರಿಗೆ ಈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಆದರೆ ಮಾನವ ಕಸಿ ಮಾಡಲು ಅನರ್ಹ ಎಂದು ಪರಿಗಣಿಸಲಾಗಿದೆ. ಅದಾಗ್ಯೂ ವ್ಯಕ್ತಿ ತೀರಾ ಅನಾರೋಗ್ಯವನ್ನು ಹೊಂದಿರುವಾಗ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಡೇವಿಡ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಹೊಸ ಅಂಗವು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ನೋಡಲು ಎಚ್ಚರಿಕೆಯಿಂದ ಅವರ ಮೇಲ್ವಿಚಾರಣೆ ಮಾಡಲಾಗುತ್ತಿದೆ.

Pig Heart Implant In US Man Holds Out Hope For Organ Crisis

"ನನಗೆ ಈ ಕಸಿ ಮಾಡಿ. ನಾನು ಬದುಕಲು ಬಯಸುತ್ತೇನೆ ಎಂದು ಡೇವಿಡ್ ಹೇಳಿಕೊಂಡಿದ್ದರು. ಇದು ಕತ್ತಲೆಯಲ್ಲಿ ಗುಂಡು ಹಾರಿಸುವುದು ಎಂದು ನನಗೆ ತಿಳಿದಿದೆ. ಆದರೆ ಇದು ನನ್ನ ಕೊನೆಯ ಆಯ್ಕೆಯಾಗಿತ್ತು" ಎಂದು ಮೇರಿಲ್ಯಾಂಡ್ ವೈದ್ಯರು ಹೇಳಿದರು. ಹೃದಯ-ಶ್ವಾಸಕೋಶದ ತೊಂದರೆಯಿಂದ ಕಳೆದ ಹಲವು ತಿಂಗಳುಗಳಿಂದ ಹಾಸಿಗೆ ಹಿಡಿದಿರುವ ಡೇವಿಡ್ ಬೆನೆಟ್ ಸಾವಿನ ಅಂಚಿನಲ್ಲಿದ್ದರು. ಆಹಾರ ಮತ್ತು ಔಷಧ ಆಡಳಿತ ಇಲಾಖೆ ಈ ಶಸ್ತ್ರಚಿಕಿತ್ಸೆಗೆ ತುರ್ತು ಅಧಿಕಾರವನ್ನು ನೀಡಿತು. ಸಾಂಪ್ರದಾಯಿಕ ಕಸಿಗೆ ಸೂಕ್ತವಲ್ಲದ ರೋಗಿಗೆ ಕೊನೆಯ ಪ್ರಯತ್ನವಾಗಿ ಹಂದಿ ಹೃದಯ ಕಸಿ ಮಾಡಲಾಗಿದೆ.

ಇದು ಅದ್ಭುತ ಶಸ್ತ್ರಚಿಕಿತ್ಸೆಯಾಗಿದೆ ಮತ್ತು ಅಂಗಗಳ ಕೊರತೆಯ ಬಿಕ್ಕಟ್ಟನ್ನು ಪರಿಹರಿಸಲು ನಮ್ಮನ್ನು ಒಂದು ಹೆಜ್ಜೆ ಮುಂದೆ ಹೋಗಲು ಸಹಕಾರಿಯಾಗಿದೆ ಎಂದು ಹಂದಿ ಹೃದಯವನ್ನು ಶಸ್ತ್ರಚಿಕಿತ್ಸೆಯಿಂದ ಕಸಿ ಮಾಡಿದ ಬಾರ್ಟ್ಲಿ ಗ್ರಿಫಿತ್ ಹೇಳಿದರು.ನಾವು ಎಚ್ಚರಿಕೆಯಿಂದ ಮುಂದುವರಿಯುತ್ತಿದ್ದೇವೆ. ಪ್ರಪಂಚದ ಈ ಮೊದಲ ಶಸ್ತ್ರಚಿಕಿತ್ಸೆಯು ಭವಿಷ್ಯದಲ್ಲಿ ರೋಗಿಗಳಿಗೆ ಪ್ರಮುಖವಾದ ಹೊಸ ಆಯ್ಕೆಯನ್ನು ಒದಗಿಸುತ್ತದೆ ಎಂದು ನಾವು ಆಶಾವಾದಿಗಳಾಗಿದ್ದೇವೆ ಎಂದಿದ್ದಾರೆ.

Pig Heart Implant In US Man Holds Out Hope For Organ Crisis

ಹಿಂದೆ ಇಂತಹ ಅನೇಕ ಹೃದಯ ಕಸಿ ಪ್ರಯೋಗಗಳು ನಡೆದಿದ್ದವು. ಆದರೆ ಅವುಗಳು ವಿಫಲವಾಗಿದ್ದವು. ಪ್ರಾಣಿಗಳ ಅಂಗಗಳನ್ನು ರೋಗಿಗಳ ದೇಹ ತಿರಸ್ಕರಿಸಿದ್ದವು. 1984ರಲ್ಲಿ ಬೇಬಿ ಫೋ ಎಂಬ ಶಿಶುವಿಗೆ ಬಬೂನ್‌ನ ಹೃದಯ ಕಸಿ ಮಾಡಲಾಗಿತ್ತು. ಈ ಮಗು 21 ದಿನಗಳ ಬಳಿಕ ಮೃತಪಟ್ಟಿತ್ತು. ಅಮೆರಿಕದಲ್ಲಿ ಪ್ರತಿ ವರ್ಷ ಸುಮಾರು 6,000 ಜನರು ಹೃದಯ ಕಸಿ ಸಾಧ್ಯವಾಗದೆ ಸಾಯುತ್ತಿದ್ದಾರೆ. ಪ್ರಸ್ತುತ ಸುಮಾರು 1.10 ಲಕ್ಷ ಅಮೆರಿಕನ್ನರು ಅಂಗಾಂಗ ಕಸಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.ಮನುಷ್ಯರ ಹೃದಯ ಚಿಕಿತ್ಸೆಗೆ ಹಂದಿಗಳ ಹೃದಯ ಕವಾಟಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಹಾಗೆಯೇ ಸುಟ್ಟ ಗಾಯಗಳಿಂದ ಬಳಲುತ್ತಿರುವ ಮನುಷ್ಯರ ಚರ್ಮಕ್ಕೆ ಪರ್ಯಾಯವಾಗಿ ಹಂದಿ ಚರ್ಮ ಅಳವಡಿಸಲಾಗುತ್ತಿದೆ. ಹೀಗೆ ಜಗತ್ತಿನಲ್ಲಿ ಅನೇಕ ವೈದ್ಯಕೀಯ ಪ್ರಯೋಗಗಳು ನಡೆಯುತ್ತಿವೆ.

English summary
US surgeons have successfully implanted a heart from a genetically modified pig in a 57-year-old man, a medical first that could one day help solve the chronic shortage of organ donations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X