• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಲೈಂಗಿಕ ಆರೋಪ ಹೊತ್ತ ಅಧಿಕಾರಿಗೆ ಬೋನಸ್ ಕೊಟ್ಟು ರಕ್ಷಿಸಿದ್ದ ಗೂಗಲ್!

|

ನ್ಯೂಯಾರ್ಕ್, ಅಕ್ಟೋಬರ್ 26: ಭಾರತದಲ್ಲಿ ಮೀಟೂ ಅಭಿಯಾನ ಈಗ ತುಂಬಾ ಪ್ರಚಾರ ಪಡೆದುಕೊಳ್ಳುತ್ತಿದೆ. ಆದರೆ, ಜಾಗತಿಕವಾಗಿ ಈ ಬಗ್ಗೆ ಈ ಮುಂಚೆ ಕೂಡಾ ಜಾಗೃತಿ ಮೂಡಿಸಲಾಗಿತ್ತು. ಸರ್ಚ್ ಇಂಜಿನ್ ದೈತ್ಯ ಗೂಗಲ್ ಸಂಸ್ಥೆ ಕೂಡಾ ಲೈಂಗಿಕ ಕಿರುಕುಳ ಆರೋಪ ಪ್ರಕರಣಗಳನ್ನು ಎದುರಿಸಿತ್ತು ಎಂದು ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.

ಭದ್ರತಾ ಲೋಪ: ಸಾಮಾಜಿಕ ಜಾಲತಾಣ 'ಗೂಗಲ್ +' ಸ್ಥಗಿತ!

ಈ ರೀತಿ ಆರೋಪ ಎದುರಿಸುತ್ತಿದ್ದ ಸುಮಾರು 48 ಸಿಬ್ಬಂದಿಗಳನ್ನು ಕಳೆದ 2 ವರ್ಷಗಳ ಅವಧಿಯಲ್ಲಿ ವಜಾ ಮಾಡಲಾಗಿದೆ ಎಂದಿದ್ದಾರೆ. ಆದರೆ, 2014ರಲ್ಲಿ ಲೈಂಗಿಕ ಆರೋಪ ಹೊತ್ತುಕೊಂಡಿದ್ದ ಉನ್ನತಾಧಿಕಾರಿ ಆಂಡಿ ರುಬಿನ್ ಅವರಿಗೆ ಭರ್ಜರಿ ಎಕ್ಸಿಟ್ ಪ್ಯಾಕೇಜ್ ಕೊಟ್ಟು ಕಳಿಸಿದ ಉದಾಹರಣೆ ಕಣ್ಣಮುಂದಿದೆ.

ಫಾದರ್ ಆಫ್ ಆಂಡ್ರಾಯ್ಸ್ ಎಂದೇ ಕರೆಸಿಕೊಳ್ಳುವ ಗೂಗಲ್ ನ ಉನ್ನತಾಧಿಕಾರಿ, ಆಂಡ್ರಾಯ್ಡ್ ಮೊಬೈಲ್ ಸಾಫ್ಟ್ ವೇರ್ ವಿನ್ಯಾಸಕ ಆಂಡಿ ರುಬಿನ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕೇಳಿ ಬಂದಿತ್ತು. ಆದರೆ, 2014ರಲ್ಲೇ ಗೂಗಲ್ ಈ ಕೇಸ್ ಸೆಟ್ಲ್ ಮಾಡಿಕೊಂಡಿಬಿಟ್ಟಿತ್ತು.

ರುಬಿನ್ ಗೆ ಸಿಕ್ಕಿತ್ತು ಭರ್ಜರಿ ಎಕ್ಸಿಟ್ ಪ್ಯಾಕೇಜ್

ರುಬಿನ್ ಗೆ ಸಿಕ್ಕಿತ್ತು ಭರ್ಜರಿ ಎಕ್ಸಿಟ್ ಪ್ಯಾಕೇಜ್

ಕಳೆದ 2 ವರ್ಷಗಳಲ್ಲಿ 13 ಹಿರಿಯ ಅಧಿಕಾರಿಗಳೂ ಸೇರಿದಂತೆ 48 ನೌಕರರನ್ನು ವಜಾ ಮಾಡಲಾಗಿದೆ. ಕಂಪನಿಯಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ಕಲ್ಪಿಸಲು ನಾವು ಬದ್ಧರಾಗಿದ್ದೇವೆ. ವಜಾಗೊಂಡ ಸಿಬ್ಬಂದಿ ಹೆಚ್ಚುವರಿ ನಗದು ಮೊತ್ತವನ್ನು ನೀಡಿ ಪ್ರಕರಣವನ್ನು ಸುಖಾಂತ್ಯಗೊಳಿಸಲಾಗಿದೆ ಎಂದು ಗೂಗಲ್ ಸಂಸ್ಥೆ ಹೇಳಿದೆ.

ಲೈಂಗಿಕ ಕಿರುಕುಳ: 48 ಸಿಬ್ಬಂದಿಯನ್ನು ಕಿತ್ತೆಸೆದ ಗೂಗಲ್

ರುಬಿನ್ ಮೇಲೆ ಓರಲ್ ಸೆಕ್ಸ್ ಆರೋಪ

ರುಬಿನ್ ಮೇಲೆ ಓರಲ್ ಸೆಕ್ಸ್ ಆರೋಪ

2013ರಲ್ಲಿ ಗೂಗಲ್ ನಲ್ಲಿ ಸಹೋದ್ಯೋಗಿಯಾಗಿದ್ದ ಮಹಿಳೆಯೊಬ್ಬರ ಜತೆ ರುಬಿನ್ ಅನೈತಿಕ ಸಂಬಂಧ ಹೊಂದಿದ್ದರು. ಆದರೆ, ರುಬಿನ್ ಒಮ್ಮೆ ನನ್ನನ್ನು ಬಲವಂತಪಡಿಸಿ ಓರಲ್ ಸೆಕ್ಸ್ ಮಾಡುವಂತೆ ಹೋಟೆಲ್ ರೂಮಿನಲ್ಲಿ ಒತ್ತಾಯಪಡಿಸಿದರು.. ಈ ಬಗ್ಗೆ ಇನ್ನಿಬ್ಬರು ಉನ್ನತಾಧಿಕಾರಿಗಳಿಗೆ ಗೊತ್ತಿತ್ತು. ಆದರೆ, ತಕ್ಷಣಕ್ಕೆ ಕ್ರಮ ಜರುಗಿಸಿರಲಿಲ್ಲ ಎಂದು ಮಹಿಳೆ ಆರೋಪಿಸಿದ್ದರು. ಆದರೆ, ನಂತರ ಈ ಬಗ್ಗೆ ಆಂತರಿಕ ಸಮಿತಿ ದೂರು ದಾಖಲಿಸಿಕೊಂಡು, ತನಿಖೆ ನಡೆಸಿತ್ತು. ಭಾರಿ ಒತ್ತಡ ಕೇಳಿ ಬಂದಿದ್ದರಿಂದ ಅಂದಿನ ಸಿಇಒ ಲ್ಯಾರಿ ಪೇಜ್ ಅವರು, ರುಬಿನ್ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು.

ಗೂಗಲ್ 20ರ ಹುಟ್ಟುಹಬ್ಬದ ಸಂಭ್ರಮಕ್ಕೆ ವಿಶೇಷ ವಿಡಿಯೋ

ಆಂಡಿ ರುಬಿನ್ ಬಗ್ಗೆ ಸರಿಯಾದ ಪ್ರತಿಕ್ರಿಯೆ ಇಲ್ಲ

ಆಂಡಿ ರುಬಿನ್ ಬಗ್ಗೆ ಸರಿಯಾದ ಪ್ರತಿಕ್ರಿಯೆ ಇಲ್ಲ

ಮಹಿಳೆಯರ ಸುರಕ್ಷತೆಗಾಗಿ ಮತ್ತು ಲೈಂಗಿಕ ಕಿರುಕುಳ ಆರೋಪ ಎದುರಿಸುವ ನೌಕರರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಕಷ್ಟು ನಿಯಮಾವಳಿಗಳನ್ನು ರೂಪಿಸಿದ್ದೇವೆ. 2015ರಲ್ಲೇ ಗೂಗಲ್ ಈ ರೀತಿ ನಿಯಮಾವಳಿಗಳನ್ನು ಅಳವಡಿಸಿಕೊಂಡಿದೆ ಎಂದು ಗೂಗಲ್​ನ ಸಿಇಒ ಸುಂದರ್​ ಪಿಚೈ ಹೇಳಿದರು. ಆದರೆ, ಆಂಡ್ರಾಯ್ಡ್ ನ ಮಾಜಿ ಎಕ್ಸಿಕ್ಯೂಟಿವ್ ಆಂಡಿ ರುಬಿನ್ ಮೇಲೆ ಆರೋಪ ಹೊರೆಸಿ ಟೈಮ್ಸ್ ನಲ್ಲಿ ಬಂದಿರುವ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಪಿಚೈ ನಿರಾಕರಿಸಿದ್ದಾರೆ. ಇಂಥ ಸುದ್ದಿಗಳನ್ನು ಓದಲು ಕಷ್ಟವಾಗುತ್ತದೆ ಎಂದಷ್ಟೆ ಉತ್ತರಿಸಿದ್ದಾರೆ.

ಆಪಲ್ ಸಂಸ್ಥೆಗೆ 68000 ಕೋಟಿ ರೂಪಾಯಿ ಕೊಡ್ತಿದೆ ಗೂಗಲ್!

ರುಬಿನ್ ಗೆ 90 ಮಿಲಿಯನ್ ಡಾಲರ್ ಎಕ್ಸಿಟ್ ಪ್ಯಾಕೇಜ್

ರುಬಿನ್ ಗೆ 90 ಮಿಲಿಯನ್ ಡಾಲರ್ ಎಕ್ಸಿಟ್ ಪ್ಯಾಕೇಜ್

ರುಬಿನ್ ಗೆ 90 ಮಿಲಿಯನ್ ಡಾಲರ್ ಎಕ್ಸಿಟ್ ಪ್ಯಾಕೇಜ್ ನೀಡಿ ಕಳಿಸಲಾಗಿತ್ತು. ಗೂಗಲ್ ನ ಅಂದಿನ ಸಿಇಒ ಲ್ಯಾರಿ ಪೇಜ್ ಅವರು, ಆಂಡಿ ರುಬಿನ್ ಗೆ ವಿಷ್ ಮಾಡಿ, ಕೋಟ್ಯಂತರ ಬಳಕೆದಾರರನ್ನು ಸೃಷ್ಟಿಸಿದ ರುಬಿನ್ ಅವರ ಆವಿಷ್ಕಾರಕ್ಕೆ ನನ್ನ ಅಭಿನಂದನೆ ಎಂದು ಹೊಗಳಿದ್ದರು.350ಮಿಲಿಯನ್ ಡಾಲರ್ ಮೌಲ್ಯದ ಸ್ಥಿತಿವಂತ ರುಬಿನ್ ಅವರಿಗೆ 2 ಮಿಲಿಯನ್ ಡಾಲರ್ ಪ್ರತಿ ತಿಂಗಳಿನಂತೆ ಸರ್ವೀಸ್ ಪ್ಯಾಕೇಜ್ ನೀಡಿ ಗೂಗಲ್ ಗೌರವಿಸಿದೆ.

English summary
Google announced that it has fired 48 employees for sexual harassment in the past two years. But, Google gave Andy Rubin, the creator of Android mobile software, a hero’s farewell when he left the company in October 2014.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X