ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೂರನೇ ಹಂತದ ಕ್ಲಿನಿಕಲ್ ಪ್ರಯೋಗ ಪಾಸ್: ಕೊರೊನಾಗೆ ಸಿಕ್ಕಿತೇ ಮದ್ದು?

|
Google Oneindia Kannada News

ವಾಷಿಂಗ್ಟನ್, ಏಪ್ರಿಲ್ 30: ಅತ್ತ ಮಾರಣಾಂತಿಕ ಕೊರೊನಾ ವೈರಸ್ ನಿಂದ ವಿಶ್ವದಾದ್ಯಂತ ಮರಣ ಮೃದಂಗ ಮುಂದುವರೆಯುತ್ತಿದ್ದರೆ, ಇತ್ತ ಕೊರೊನಾ ವೈರಸ್ ಅನ್ನು ಬಗ್ಗುಬಡಿಯಲು ವಿವಿಧ ಔಷಧಿಗಳನ್ನು ಪ್ರಯೋಗಿಸಲಾಗುತ್ತಿದೆ.

ಕೊರೊನಾ ವೈರಸ್ ವಿರುದ್ಧ Antiviral ಡ್ರಗ್ ರೆಮ್ದೆಸಿವಿರ್ ಪರಿಣಾಮಕಾರಿ ಎಂದು ತಿಳಿದುಬಂದಿದ್ದು, ಅಮೇರಿಕಾದಲ್ಲಿ ನಡೆದ ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ಯಶಸ್ವಿಯಾಗಿದೆ.

ಕೊರೊನಾ ಆತಂಕ ತೊಲಗಿಸಿದ ಔಷಧಿ: ಅಮೇರಿಕಾದಿಂದ ಸಿಹಿ ಸುದ್ದಿ!ಕೊರೊನಾ ಆತಂಕ ತೊಲಗಿಸಿದ ಔಷಧಿ: ಅಮೇರಿಕಾದಿಂದ ಸಿಹಿ ಸುದ್ದಿ!

''5 ದಿನಗಳ ಕಾಲ ರೆಮ್ದೆಸಿವಿರ್ ಡೋಸೇಜ್ ಪಡೆದ ಕೊರೊನಾ ಸೋಂಕಿತರ ಪೈಕಿ 50% ರಷ್ಟು ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಆ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಎರಡು ವಾರಗಳ ಒಳಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ'' ಎಂದು ಕ್ಯಾಲಿಫೋರ್ನಿಯಾ ಮೂಲದ ಫಾರ್ಮ ಕಂಪನಿ ಜಿಲೆಡ್ ಸೈನ್ಸಸ್ ತಿಳಿಸಿದೆ.

ಉತ್ತೇಜನಕಾರಿಯಾಗಿದೆ

ಉತ್ತೇಜನಕಾರಿಯಾಗಿದೆ

''ರೆಮ್ದೆಸಿವಿರ್ ಪ್ರಯೋಗದಿಂದ ಲಭ್ಯವಾಗಿರುವ ಡೇಟಾ ತುಂಬಾ ಉತ್ತೇಜನಕಾರಿಯಾಗಿದೆ. 10 ದಿನಗಳ ಕಾಲ ಚಿಕಿತ್ಸೆ ಪಡೆದವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಂತೆ, 5 ದಿನಗಳ ಕಾಲ ರೆಮ್ದೆಸಿವಿರ್ ಡೋಸೇಜ್ ಪಡೆದವರ ಆರೋಗ್ಯದಲ್ಲೂ ಸುಧಾರಣೆ ಕಾಣಿಸಿದೆ. ಈ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಅವಶ್ಯಕ'' ಎಂದು ಕ್ಲಿನಿಯಲ್ ಪ್ರೊಫೆಸರ್ ಆಫ್ ಮೆಡಿಸಿನ್ ಅರುಣಾ ಸುಬ್ರಮಣಿಯನ್ ತಿಳಿಸಿದ್ದಾರೆ.

ಗುಡ್ ನ್ಯೂಸ್

ಗುಡ್ ನ್ಯೂಸ್

ರೆಮ್ದೆಸಿವಿರ್ ಪ್ರಯೋಗದಿಂದ ಬಂದಿರುವ ಫಲಿತಾಂಶದ ಕುರಿತು ''ಗುಡ್ ನ್ಯೂಸ್'' ಎಂದು ಪ್ರತಿಕ್ರಿಯಿಸಿದ್ದಾರೆ ಅಮೇರಿಕಾದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ. ''ರೆಮ್ದೆಸಿವಿರ್ ಪರಿಣಾಮಕಾರಿಯಾಗಿದೆ. ಸಾವಿನ ಪ್ರಮಾಣ ಕೂಡ ಕಡಿಮೆ ಇದೆ. ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇವೆ'' ಎಂದಿದ್ದಾರೆ ಆಂಥೋನಿ ಫೌಸಿ.

ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!ಬೇಸರದ ಸುದ್ದಿ: ಛೇ.. ಮೊದಲ ಹಂತದಲ್ಲೇ ಕೊರೊನಾ ಔಷಧಿ ಫೇಲ್.!

ವೈರಸ್ ಅನ್ನು ನಿರ್ಬಂಧಿಸುತ್ತದೆ

ವೈರಸ್ ಅನ್ನು ನಿರ್ಬಂಧಿಸುತ್ತದೆ

ಅಮೇರಿಕಾದ ಪ್ರಖ್ಯಾತ ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಆಂಥೋನಿ ಫೌಸಿ, ''ಕೊರೊನಾ ವೈರಸ್ ಚಿಕಿತ್ಸೆಯಲ್ಲಿ ರೆಮ್ದೆಸಿವಿರ್ ಪ್ರಭಾವ 'ಕ್ಲಿಯರ್-ಕಟ್' ಆಗಿದೆ. ಕೊರೊನಾ ವೈರಸ್ ನಿಂದ ಚೇತರಿಸಿಕೊಳ್ಳುವ ಸಮಯವನ್ನು ಕಡಿಮೆ ಮಾಡುವಲ್ಲಿ ರೆಮ್ದೆಸಿವಿರ್ ಸ್ಪಷ್ಟವಾದ, ಗಮನಾರ್ಹವಾದ, ಸಕಾರಾತ್ಮಕವಾದ ಪರಿಣಾಮ ಹೊಂದಿರುವುದು ಪ್ರಯೋಗದ ಮೂಲಕ ಗೊತ್ತಾಗಿದೆ. ರೆಮ್ದೆಸಿವಿರ್ ಔಷಧಿ ವೈರಸ್ ಅನ್ನು ನಿರ್ಬಂಧಿಸಿರುವುದು ಪ್ರಯೋಗದಿಂದ ಸಾಬೀತಾಗಿದೆ'' ಎಂದು ಹೇಳಿದ್ದಾರೆ.

ಸುರಕ್ಷಿತ ಎಂದು ಪರಿಗಣಿಸಿಲ್ಲ

ಸುರಕ್ಷಿತ ಎಂದು ಪರಿಗಣಿಸಿಲ್ಲ

ಕೋವಿಡ್-19 ಚಿಕಿತ್ಸೆಗೆ ರೆಮ್ದೆಸಿವಿರ್ ಪರಿಣಾಮಕಾರಿ ಅಥವಾ ಸುರಕ್ಷಿತ ಎಂದು ಈವರೆಗೂ ಪರಿಗಣಿಸಿಲ್ಲ. ಹಾಗೇ, ರೆಮ್ದೆಸಿವಿರ್ ಜಾಗತಿಕವಾಗಿ ಎಲ್ಲಿಯೂ ಪರವಾನಗಿ ಪಡೆದಿಲ್ಲ ಮತ್ತು ಅಂಗೀಕರಿಸಲ್ಪಟ್ಟಿಲ್ಲ.

ಚೀನಿಯರು ನಡೆಸಿದ್ದ ಪ್ರಯೋಗದಲ್ಲಿ ವಿಫಲ

ಚೀನಿಯರು ನಡೆಸಿದ್ದ ಪ್ರಯೋಗದಲ್ಲಿ ವಿಫಲ

ಅಸಲಿಗೆ, ರೆಮ್ದೆಸಿವಿರ್ ಕುರಿತಾದ ಪ್ರಯೋಗಗಳಲ್ಲಿ ಮಿಶ್ರ ಫಲಿತಾಂಶ ಲಭ್ಯವಾಗಿದೆ. ಇತ್ತೀಚೆಗೆಷ್ಟೇ ವಿಶ್ವ ಆರೋಗ್ಯ ಸಂಸ್ಥೆಯ ವೆಬ್ ತಾಣದಲ್ಲಿ ಅಚಾನಕ್ಕಾಗಿ ಪ್ರಕಟಗೊಂಡಿದ್ದ ವರದಿಯ ಪ್ರಕಾರ, ಚೀನಿಯರು ನಡೆಸಿದ ಮೊದಲ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ರೆಮ್ದೆಸಿವಿರ್ ಯಾವುದೇ ಪರಿಣಾಮಕಾರಿ ಫಲಿತಾಂಶ ನೀಡಲಿಲ್ಲ. ಕೋವಿಡ್-19 ನಿಂದ ಬಳಲುತ್ತಿದ್ದ ರೋಗಿಗಳ ಆರೋಗ್ಯ ಸ್ಥಿತಿಯಲ್ಲಿ ರೆಮ್ದೆಸಿವಿರ್ ಸುಧಾರಣೆ ತರಲಿಲ್ಲ. ಜೊತೆಗೆ ರೆಮ್ದೆಸಿವಿರ್ ಪಡೆದ ರೋಗಿಗಳ ಪೈಕಿ 13.9% ರಷ್ಟು ಮಂದಿ ಮೃತಪಟ್ಟಿದ್ದರು.

English summary
Phase Three Clinical Trial of Remdesivir Shows positive Results.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X