ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2020 ಅಂತ್ಯದೊಳಗೆ ಪಿಫೈಜರ್‌ನಿಂದ 4 ಕೋಟಿ ಕೊರೊನಾ ಲಸಿಕೆ

|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್ 28: 2020 ಮುಗಿಯುವುದರೊಳಗಾಗಿ ಪಿಫೈಜರ್ 4 ಕೋಟಿ ಕೊರೊನಾ ಲಸಿಕೆಯನ್ನು ನೀಡುವುದಾಗಿ ಭರವಸೆ ನೀಡಿದೆ.

ಕ್ಲಿನಿಕಲ್ ಪರೀಕ್ಷೆ ನಿರೀಕ್ಷೆಯಂತೆ ಮುಂದುವರೆದರೆ ಮತ್ತು ನಿಯಂತ್ರಕರು ಲಸಿಕೆಯನ್ನು ಅನುಮೋದಿಸಿದರೆ 2020ರಲ್ಲಿಯೇ ಅಮೆರಿಕದಲ್ಲಿ 40 ಮಿಲಿಯನ್ ಕೊರೊನಾ ಲಸಿಕೆಯನ್ನು ತಯಾರಿಸಲಾಗುತ್ತದೆ ಎಂದು ಪಿಫೈಜರ್‌ನ ಕಾರ್ಯ ನಿರ್ವಾಹಕ ಆಲ್ಬರ್ಟ್ ಬೌರ್ಲಾ ಹೇಳಿದ್ದಾರೆ.

2021ರ ಆರಂಭದಲ್ಲಿ ಕೊರೊನಾ ಲಸಿಕೆ ನಿರೀಕ್ಷೆ: ಕೆ ಸುಧಾಕರ್ 2021ರ ಆರಂಭದಲ್ಲಿ ಕೊರೊನಾ ಲಸಿಕೆ ನಿರೀಕ್ಷೆ: ಕೆ ಸುಧಾಕರ್

ಎಲ್ಲವೂ ಅಂದುಕೊಂಡಂತೆ ನಡೆದರೆ ಆರಂಭಿಕವಾಗಿ ಒಂದಷ್ಟು ಡೋಸ್‌ಗಳನ್ನು ವಿತರಿಸಲು ಸಿದ್ಧರಿದ್ದೇವೆ. ಈ ವರ್ಷದ ಅಂತ್ಯದ ವೇಳೆಗೆ 40 ಮಿಲಿಯನ್ ಡೋಸ್‌ಗಳನ್ನು ಮತ್ತು ಮಾರ್ಚ್ 2021ರ ವೇಳೆಗೆ 100 ಮಿಲಿಯನ್ ಡೋಸ್‌ಗಳನ್ನು ಪೂರೈಸಲು ಸಿದ್ಧರಿದ್ದೇವೆ ಎಂದರು.

Pfizer Says It Could Still Deliver A COVID-19 Vaccine In 2020

ತುರ್ತು ಸಂದರ್ಭದಲ್ಲಿ ಲಸಿಕೆಯನ್ನು ಬಳಸಲು ಅನುಮತಿ ನೀಡಬೇಕು ಎಂದು ಅಮೆರಿಕ ಸರ್ಕಾರಕ್ಕೆ ಮನವಿ ಮಾಡಿದೆ.ಪಿಫೈಜರ್ ತನ್ನ ಲಾಭವನ್ನು ಶೇ. 72 ರಿಂದ 22.2ಕ್ಕೆ ಇಳಿಸಿದೆ. ಕಂಪನಿಯು ಮಾರುಕಟ್ಟೆಯಲ್ಲಿ ಶೇ.11ರಷ್ಟು ಕುಸಿತವನ್ನು ಕಂಡಿದೆ.

ಇನ್ನು ಭಾರತದಲ್ಲಿ ಕೊರೊನಾ ಲಸಿಕೆಯು 2021ರ ಆರಂಭದಲ್ಲಿ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಆರೋಗ್ಯ ಸಚಿವ ಕೆ. ಸುಧಾಕರ್ ತಿಳಿಸಿದ್ದಾರೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಕೊರೊನಾ ಲಸಿಕೆಯ ಸಂಶೋಧನೆ ಮತ್ತು ಪ್ರಾಯೋಗಿಕ ಪರೀಕ್ಷೆಯಲ್ಲಿ ತೊಡಗಿರುವ ಆಸ್ತ್ರಾ ಜೆನೆಕಾ ಸಂಸ್ಥೆಯ ಪ್ರತಿನಿಧಿಗಳು ಇಂದು ಲಸಿಕೆ ಅಭಿವೃದ್ಧಿಯ ಪ್ರಗತಿ, ಅದರ ಸಾಧಕ-ಬಾಧಕಗಳ ಕುರಿತು ಮಾಹಿತಿ ನೀಡಿದರು. 2021ರ ಆರಂಭದ ವೇಳೆಗೆ ಲಸಿಕೆ ಲಭ್ಯವಾಗುವ ವಿಶ್ವಾಸ ವ್ಯಕ್ತಪಡಿಸಿದರು.

Recommended Video

Munirathna : ನಮ್ ಅಮ್ಮ ಸತ್ತು 25 ವರುಷ ಆಗಿದೆ | Oneindia Kannada

ಲಸಿಕೆ ಲಭ್ಯವಾದ ನಂತರ ಪ್ರತಿಯೊಬ್ಬರಿಗೂ ತಲುಪಿಸಲು ಪೂರ್ವಸಿದ್ಧತೆಗಳು ನಡೆಯುತ್ತಿದ್ದು ಸರಬರಾಜು, ಸಂಗ್ರಹಣೆ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳ ಬಗ್ಗೆ ಸಲಹೆ ನೀಡಲು ತಜ್ಞರ ಸಮಿತಿ ರಚಿಸಲಾಗಿದೆ. ಪ್ರಥಮ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ, ನಂತರ ವಯೋವೃದ್ಧರು ಮತ್ತು ಇತರೆ ಸಹ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ ಲಸಿಕೆ ನೀಡಲಾಗುವುದು.

English summary
Pfizer executives expressed measured optimism Tuesday over the prospect of providing a coronavirus vaccine in 2020 as the pharma giant reported lower third-quarter profits due to disruption in healthcare that dented drug demand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X