ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜರ್‌ನ ಕೋವಿಡ್‌ ಮಾತ್ರೆಗಳನ್ನು ಅಧಿಕೃತಗೊಳಿಸಿದ ಯುಎಸ್‌

|
Google Oneindia Kannada News

ವಾಷಿಂಗ್ಟನ್‌, ಡಿಸೆಂಬರ್‌ 23: ಫೈಜರ್‌ನ ಕೋವಿಡ್‌ ಮಾತ್ರೆಗಳನ್ನು ಯುನೈಟೆಡ್‌ ಸ್ಟೇಟ್ಸ್‌ (ಯುಎಸ್‌) ಅಧಿಕೃತಗೊಳಿಸಿದೆ. ಈ ಕೋವಿಡ್‌ ಮಾತ್ರೆಗಳನ್ನು 12 ವರ್ಷ ಹಾಗೂ ಅದಕ್ಕಿಂತ ಮೆಲ್ಪಟ್ಟ ಆರೋಗ್ಯ ಸ್ಥಿತಿ ಗಂಭೀರವಾಗಿರುವ ಜನರಿಗೆ ನೀಡುವಂತೆ ಸೂಚನೆ ನೀಡಲಾಗಿದೆ. ಯುಎಸ್‌ನಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಓಮಿಕ್ರಾನ್‌ ತೀವ್ರವಾಗಿ ಹರಡುತ್ತಿರುವ ನಡುವೆ ಯುಎಸ್‌ ಈ ನಿರ್ಧಾರವನ್ನು ಕೈಗೊಂಡಿದೆ.

ಎರಡು ವಿಧದ ಟ್ಯಾಬ್ಲೆಟ್‌ಗಳನ್ನು ಒಳಗೊಂಡಿರುವ ಪ್ಯಾಕ್ಸ್‌ಲೋವಿಡ್‌ನ ತುರ್ತು ಬಳಕೆಗೆ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (ಎಫ್‌ಡಿಎ) ಅನುಮೋದನೆ ನೀಡಿದೆ. ಈ ಮಾತ್ರೆಯ ವೈದ್ಯಕೀಯ ಪ್ರಯೋಗವನ್ನು ಮಾಡಲಾಗಿದ್ದು, ಈ ಮಾತ್ರೆಯು ಅಪಾಯದಲ್ಲಿರುವ ಜನರಲ್ಲಿ ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಅಪಾಯವನ್ನು ಶೇಕಡ 88 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿದು ಬಂದಿದೆ. ಈ ಬೆನ್ನಲ್ಲೇ ಯುಎಸ್‌ ಈ ಮಾತ್ರೆಯನ್ನು ಅಧಿಕೃತಗೊಳಿಸಿದೆ.

ಯುಎಸ್‌ನಲ್ಲಿ ಕೋವಿಡ್‌ ಪ್ರಕರಣದಲ್ಲಿ ಶೇ.73 ರಷ್ಟು ಓಮಿಕ್ರಾನ್‌!ಯುಎಸ್‌ನಲ್ಲಿ ಕೋವಿಡ್‌ ಪ್ರಕರಣದಲ್ಲಿ ಶೇ.73 ರಷ್ಟು ಓಮಿಕ್ರಾನ್‌!

"ಇಂದಿನ ಕ್ರಮವು ವಿಜ್ಞಾನದ ಶಕ್ತಿ ಮತ್ತು ಅಮೇರಿಕನ್ ನಾವೀನ್ಯತೆ ಮತ್ತು ಜಾಣ್ಮೆಯ ಫಲಿತಾಂಶಕ್ಕೆ ಸಾಕ್ಷಿಯಾಗಿದೆ," ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಹೇಳಿಕೆ ನೀಡಿದ್ದು, "ಫೈಜರ್‌ ಮಾತ್ರೆಗಳನ್ನು ತ್ವರಿತವಾಗಿ ಉತ್ಪಾದನೆ ಮಾಡಲು ಸಾಧ್ಯವಾಗುವ ಕಾನೂನನ್ನು ಶೀಘ್ರ ಜಾರಿಗೆ ತರಲಾಗುವುದು," ಎಂದು ಭರವಸೆಯನ್ನು ನೀಡಿದ್ದಾರೆ.

Pfizer’s Covid Pill Is Authorized in U.S.

ಇನ್ನು ಈ ಮಾತ್ರೆಗಳ 10 ಮಿಲಿಯನ್ ಕೋರ್ಸ್‌ಗಳನ್ನು ಖರೀದಿ ಮಾಡುವ ನಿಟ್ಟಿನಲ್ಲಿ ಸುಮಾರು 5.3 ಬಿಲಿಯನ್‌ ಯುಎಸ್‌ ಡಾಲರ್‌ ಅನ್ನು ಖರ್ಚು ಮಾಡಿದೆ. ಈ ಪೈಕಿ ಮೊದಲ 265,000 ಮಾತ್ರೆಗಳನ್ನು ಜನವರಿ ತಿಂಗಳಿನಲ್ಲಿ ವಿತರಣೆ ಮಾಡಲಾಗುತ್ತದೆ. ಉಳಿದ ಮಾತ್ರೆಗಳನ್ನು ಬೇಸಿಗೆಯ ಅಂತ್ಯದ ವೇಳೆಗೆ, ವಿತರಣೆ ಮಾಡಲಾಗುವುದು ಎಂದು ಶ್ವೇತಭವನದ ಕೋವಿಡ್ ನಿರ್ವಾಹಕ ಜೆಫ್ ಜಿಯೆಂಟ್ಸ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

"ಮಾತ್ರೆ ಪೂರಕವಾಗಿರಲಿ, ಲಸಿಕೆ ಬದಲಿ ಆಗುವುದು ಬೇಡ"

ಇನ್ನು "ಫೈಜರ್‌ನ ಕೋವಿಡ್‌ ಮಾತ್ರೆಗಳು ಕೊರೊನಾ ವೈರಸ್‌ ಸೋಂಕಿಗೆ ಚಿಕಿತ್ಸೆ ನೀಡಲು ಪೂರಕವಾಗಿರಬೇಕು. ಹೊರತು ಲಸಿಕೆಗೆ ಬದಲಿ ವ್ಯವಸ್ಥೆ ಎಂಬಂತೆ ಆಗಬಾರದು," ಎಂದು ಎಫ್‌ಡಿಎ ಒತ್ತಿ ಹೇಳಿದೆ. ಯುರೋಪಿಯನ್‌ ಒಕ್ಕೂಟದ ಡ್ರಗ್ ರೆಗ್ಯುಲೇಟರ್ ಕಳೆದ ವಾರ ಸದಸ್ಯ ರಾಷ್ಟ್ರಗಳಿಗೆ ಪೈಜರ್‌ನ ಕೋವಿಡ್‌ ಚಿಕಿತ್ಸೆಯನ್ನು ಔಪಚಾರಿಕ ಅನುಮೋದನೆಗೆ ಮುಂಚಿತವಾಗಿ ಬಳಸಲು ಅವಕಾಶ ಮಾಡಿಕೊಟ್ಟಿದೆ. ಓಮಿಕ್ರಾನ್‌ ಹೆಚ್ಚಳದ ನಡುವೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಫೈಜರ್ ಕಂಪನಿ ಮಾತ್ರೆಗೆ ಸಂಬಂಧಿಸಿದಂತೆ ನಡೆಸಿದ ಆಂತರಿಕ ವೈದ್ಯಕೀಯ ಪ್ರಯೋಗದ ದತ್ತಾಂಶವನ್ನು ಯುಎಸ್ ಆಹಾರ ಮತ್ತು ಔಷಧೀಯ ಪ್ರಾಧಿಕಾರಕ್ಕೆ ಸಲ್ಲಿಕೆ ಮಾಡಲಾಗಿತ್ತು. ಪ್ಯಾಕ್ಸ್ಲೋವಿಡ್ ಎಂಬ ಬ್ರ್ಯಾಂಡ್ ಹೆಸರನ್ನು ಹೊಂದಿರುವ ಸಂಯೋಜನೆಯ ಚಿಕಿತ್ಸೆಯು ದಿನಕ್ಕೆ ಎರಡು ಬಾರಿ ನೀಡಲಾಗುವ ಮೂರು ಮಾತ್ರೆಗಳನ್ನು ಒಳಗೊಂಡಿರುತ್ತದೆ. ರೋಗಲಕ್ಷಣಗಳು ಪ್ರಾರಂಭವಾದ ಮೂರು ದಿನಗಳಲ್ಲಿ ಫೈಜರ್ ಔಷಧಿ ಪಡೆದವರಲ್ಲಿ 28 ದಿನಗಳ ನಂತರದಲ್ಲಿ ಶೇ.0.8ರಷ್ಟು ಜನರು ಮಾತ್ರ ಆಸ್ಪತ್ರೆಗೆ ದಾಖಲಾಗಿದ್ದಾರೆ, ಆದರೆ ಒಬ್ಬರೇ ಒಬ್ಬರು ಸಾವನ್ನಪ್ಪಿಲ್ಲ ಎಂಬುವುದನ್ನು ಫೈಜರ್‌ ತಿಳಿಸಿದೆ.

"ರೋಗಿಗೆ ಚಿಕಿತ್ಸೆ ನೀಡಿದ ಐದು ದಿನಗಳ ನಂತರವೂ ನಾವು ಹೆಚ್ಚಿನ ದಕ್ಷತೆಯನ್ನು ಹೊಂದಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಜನರು ವೈದ್ಯಕೀಯ ಪರೀಕ್ಷೆ ಅಥವಾ ಏನನ್ನಾದರೂ ಪಡೆಯುವ ಮೊದಲು ಒಂದೆರಡು ದಿನ ನಿರೀಕ್ಷಿಸಬೇಕು. ಇದರರ್ಥ ಜನರಿಗೆ ಚಿಕಿತ್ಸೆ ನೀಡಲು ನಾವು ಸಾಕಷ್ಟು ಸಮಯವನ್ನು ಹೊಂದಿದ್ದೇವೆ. ಸಾರ್ವಜನಿಕ ಆರೋಗ್ಯ ದೃಷ್ಟಿಕೋನದಿಂದ ಇದು ನಿಜವಾಗಿ ಪ್ರಯೋಜನಕಾರಿಯಾಗುತ್ತದೆ," ಎಂದು ಫೈಜರ್‌ ಕಾರ್ಯಕ್ರಮದ ಮುಖ್ಯಸ್ಥ ಅನ್ನಾಲೀಸಾ ಆಂಡರ್ಸನ್ ತಿಳಿಸಿದರು.

ಯುಎಸ್‌ನಲ್ಲಿ ಓಮಿಕ್ರಾನ್‌ ಹೆಚ್ಚಳ

ಯುಎಸ್‌ನಲ್ಲಿ ಪ್ರಸ್ತುತ ಓಮಿಕ್ರಾನ್‌ ಪ್ರರಕಣಗಳ ಸಂಖ್ಯೆಯು ಏರಿಕೆ ಆಗಿದೆ. ಪ್ರತಿದಿನ ಸರಿಸುಮಾರು 150,000 ಅಮೆರಿಕನ್ನರು ಕೊರೊನಾ ವೈರಸ್‌ ಸೋಂಕಿಗೆ ಒಳಗಾಗುತ್ತಿದ್ದಾರೆ. 7,800 ಮಂದಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. 1,200 ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯು ಕೂಡಾ ಇಲ್ಲಿ ಏರಿಕೆ ಆಗಿದೆ. ಯುಎಸ್‌ನ ಎಲ್ಲಾ ಪ್ರದೇಶದಲ್ಲಿ ಕೋವಿಡ್‌ ಪ್ರಕರಣಗಳ ಶೇಕಡ 90 ರಷ್ಟು ಓಮಿಕ್ರಾನ್‌ ಪ್ರಕರಣಗಳೇ ವರದಿ ಆಗುತ್ತಿದೆ. (ಒನ್‌ಇಂಡಿಯಾ ಸುದ್ದಿ)

Recommended Video

ಸುಳ್ಳು ಸುದ್ದಿ ಹರಡುತ್ತಿದ್ದ ಪಾಕ್ ಚಾನೆಲ್ ಗಳ ಮೇಲೆ ಭಾರತ ಸರ್ಕಾರದ ಸರ್ಜಿಕಲ್ ಸ್ಟ್ರೈಕ್ | Oneindia Kannada

English summary
Pfizer’s Covid Pill Is Authorized in U.S.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X