ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಣ್ವಸ್ತ್ರದೊಂದಿಗೆ ಮತ್ತಷ್ಟು ಅಪಾಯಕಾರಿಯಾಗಿ ಬೆಳೆಯಲಿದೆ ಚೀನಾ ಸೇನೆ: ಅಮೆರಿಕ ಎಚ್ಚರಿಕೆ

|
Google Oneindia Kannada News

ವಾಷಿಂಗ್ಟನ್, ಸೆಪ್ಟೆಂಬರ್ 2: ಭಾರತ ಮತ್ತು ಚೀನಾ ನಡುವಿನ ಸಂಬಂಧ ಹದಗೆಟ್ಟು, ಗಡಿಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗುತ್ತಿರುವ ಸಂದರ್ಭದಲ್ಲಿಯೇ ಅಮೆರಿಕ ಆಘಾತಕಾರಿ ಸಂಗತಿಯೊಂದನ್ನು ಹೊರಹಾಕಿದೆ. ಇನ್ನು ಕೆಲವೇ ವರ್ಷಗಳಲ್ಲಿ ಚೀನಾ ಅತ್ಯಂತ ಪ್ರಬಲ ಅಣ್ವಸ್ತ್ರ ದೇಶವಾಗಿ ಬೆಳೆಯಲಿದೆ ಎಂದು ಅದು ಎಚ್ಚರಿಕೆ ನೀಡಿದೆ.

Recommended Video

Indiaದ ಮುಂದೆ ಮನವಿ ಮಾಡಿಕೊಂಡ China | Oneindia Kannada

ಭೂಮಿ, ಗಾಳಿ ಹಾಗೂ ಸಮುದ್ರದಲ್ಲಿ ಅಣ್ವಸ್ತ್ರಗಳನ್ನು ನಿಯೋಜನೆ ಮಾಡುವ ಸಾಮರ್ಥ್ಯ ಪಡೆಯುವ ಮೂಲಕ ಅಮೆರಿಕ ಮತ್ತು ರಷ್ಯಾ ಸಾಲಿಗೆ ಸೇರಿಕೊಳ್ಳುವತ್ತ ಸಾಗಿದೆ. ಮುಂದಿನ ದಶಕದ ವೇಳೆಗೆ ಅದು ತನ್ನ ಪರಮಾಣು ಕ್ಷಿಪಣಿ ದಾಸ್ತಾನನ್ನು ದುಪ್ಪಟ್ಟುಗೊಳಿಸಲಿದೆ ಎಂದು ಅದು ಹೇಳಿದೆ.

ಪಾಂಗಾಂಗ್ ಸರೋವರದ ಬಳಿ ಪ್ರಚೋದನಕಾರಿ ಕ್ರಮ ಮುಂದುವರೆಸಿದ ಚೀನಾಪಾಂಗಾಂಗ್ ಸರೋವರದ ಬಳಿ ಪ್ರಚೋದನಕಾರಿ ಕ್ರಮ ಮುಂದುವರೆಸಿದ ಚೀನಾ

ಚೀನಾದ ಪರಮಾಣು ಶಕ್ತಿ ಸಾಮರ್ಥ್ಯವು ಕನಿಷ್ಠ ಮಿತಿಯ ಗಾತ್ರವನ್ನೂ ಮೀರಿದಂತೆ ಕಾಣುತ್ತದೆ ಎಂದು ಪೆಂಟಗಾನ್ ಕಾಂಗ್ರೆಸ್‌ಗೆ ಸಲ್ಲಿಸಿರುವ ಸುಮಾರು 200 ಪುಟಗಳ ವಾರ್ಷಿಕ ಚೀನಾ ಸೇನಾ ಶಕ್ತಿ ವರದಿಯಲ್ಲಿ ತಿಳಿಸಲಾಗಿದೆ. ಮುಂದೆ ಓದಿ.

2049ಕ್ಕೆ ಪ್ರಬಲ ಶಕ್ತಿ

2049ಕ್ಕೆ ಪ್ರಬಲ ಶಕ್ತಿ

ಚೀನಾವು ತನ್ನ ಯುದ್ಧ ಸ್ವರೂಪಿ ಬಾಂಬರ್‌ಗಳನ್ನು ಉನ್ನತೀಕರಣ ಮಾಡುವ ಪ್ರಕ್ರಿಯೆಯಲ್ಲಿ ಬೆಳವಣಿಗೆ ಸಾಧಿಸಿದೆ. ತನ್ನದೇ ವಿಭಿನ್ನ ವ್ಯವಸ್ಥೆಯಲ್ಲಿ ಪರಮಾಣು ಸಿಡಿತಲೆಗಳನ್ನು ಸಾಗಿಸುವ ತಂತ್ರಜ್ಞಾನವನ್ನು ಸಾಧಿಸಿದೆ. ಅಮೆರಿಕದ ಸೇನೆಗೆ ಸರಿಸಮನಾಗಿ ಮತ್ತು ಕೆಲವು ಕ್ಷೇತ್ರಗಳಲ್ಲಿ ಅದನ್ನೂ ಮೀರಿಸುವ ಉದ್ದೇಶದೊಂದಿಗೆ ತನ್ನ ಪರಮಾಣು ಶಕ್ತಿಯನ್ನು ಆಧುನೀಕರಣ ಮತ್ತು ವಿಸ್ತರಣೆಯ ನಿಟ್ಟಿನಲ್ಲಿ ಸಾಗಿದೆ. ಜತೆಗೆ 2049ರ ವೇಳೆಗೆ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಅತ್ಯಂತ ಪ್ರಬಲ ಶಕ್ತಿಯಾಗಿ ಅದು ಬೆಳೆಯಲಿದೆ ಎಂದು ಹೇಳಿದೆ.

ಪರಮಾಣು ಸಿಡಿತಲೆಗಳ ಹೆಚ್ಚಳ

ಪರಮಾಣು ಸಿಡಿತಲೆಗಳ ಹೆಚ್ಚಳ

ಚೀನಾದ ಪರಮಾಣು ಸಿಡಿತಲೆಗಳ ಸಂಖ್ಯೆ ಪ್ರಸ್ತುತ 200ಕ್ಕೂ ಹೆಚ್ಚಿದೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಇದು ಅಮೆರಿಕ ಹೊಂದಿರುವ ಖಂಡಾಂತರ ಕ್ಷಿಪಣಿಗಳ ಸಾಮರ್ಥ್ಯಕ್ಕೆ ಬಹುತೇಕ ಸಮನಾಗಿದೆ. ಚೀನಾ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಆತಂಕಕಾರಿ ಎಂದು ವರದಿ ತಿಳಿಸಿದೆ.

ರಾತ್ರೋರಾತ್ರಿ ಚೀನಾ ಸೇನಾಪಡೆ ಭಾರತೀಯ ಗಡಿ ಪ್ರವೇಶಿಸಿದ್ದು ಹೇಗೆ?ರಾತ್ರೋರಾತ್ರಿ ಚೀನಾ ಸೇನಾಪಡೆ ಭಾರತೀಯ ಗಡಿ ಪ್ರವೇಶಿಸಿದ್ದು ಹೇಗೆ?

ಪರಮಾಣು ವಾಯು ಕ್ಷಿಪಣಿ

ಪರಮಾಣು ವಾಯು ಕ್ಷಿಪಣಿ

ವಾಯು ಮೂಲಕ ಅಣ್ವಸ್ತ್ರಗಳನ್ನು ಪ್ರಯೋಗಿಸುವ ಸಾಮರ್ಥ್ಯ ಚೀನಾ ಸೇನೆಗೆ ಇಲ್ಲ. ಆದರೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ), ಎಚ್‌-6ಎನ್ ಬಾಂಬರ್ ತನ್ನ ಮೊದಲ ಪರಮಾಣು ಸಾಮರ್ಥ್ಯದ ವಾಯುವಿನಿಂದ ವಾಯುವಿಗೆ ರಿಫ್ಯುಯೆಲಿಂಗ್ ಬಾಂಬರ್ ಎಂಬುದಾಗಿ ಕಳೆದ ವರ್ಷ ಬಹಿರಂಗ ಪಡಿಸಿದೆ ಎಂದು ಪೆಂಟಗಾನ್ ವರದಿ ತಿಳಿಸಿದೆ.

ಪರಮಾಣು ಜಲಾಂತರ್ಗಾಮಿಗಳು

ಪರಮಾಣು ಜಲಾಂತರ್ಗಾಮಿಗಳು

ಕಳೆದ 15 ವರ್ಷಗಳಲ್ಲಿ ಚೀನಾದ ನೌಕಾಪಡೆಯು 12 ಪರಮಾಣು ಜಲಾಂತರ್ಗಾಮಿಗಳನ್ನು ನಿರ್ಮಿಸಿದೆ. ಅದರಲ್ಲಿ ಆರು ಜಲಾಂತರ್ಗಾಮಿಗಳು ಚೀನಾದ ಮೊದಲ ವಿಶ್ವಾಸಾರ್ಹ ಸಮುದ್ರ ಆಧಾರಿತ ಪರಮಾಣು ನಿರೋಧಕಗಳಾಗಿವೆ. 2020ರ ದಶಕದ ಮಧ್ಯಭಾಗದ ವೇಳೆಗೆ ಅದು ಭೂ ದಾಳಿ ಯೋಗ್ಯ ನೌಕಾ ಕ್ಷಿಪಣಿಗಳನ್ನು ಅಳವಡಿಸುವ ಮೂಲಕ ರಹಸ್ಯ ಭೂ ದಾಳಿಯ ಆಯ್ಕೆಯನ್ನು ಒಳಗೊಂಡ ನಿರ್ದೇಶಿತ ಕ್ಷಿಪಣಿ ಪರಮಾಣು ಆಕ್ರಮಣ ಜಲಾಂತರ್ಗಾಮಿ ನೌಕೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಭಾರತ-ಚೀನಾ ಗಡಿಯಲ್ಲಿ ತಲೆ ಎತ್ತಿದ PLA ಹೆಲಿಕಾಪ್ಟರ್ ನಿಲ್ದಾಣ!ಭಾರತ-ಚೀನಾ ಗಡಿಯಲ್ಲಿ ತಲೆ ಎತ್ತಿದ PLA ಹೆಲಿಕಾಪ್ಟರ್ ನಿಲ್ದಾಣ!

English summary
A Pentagon report said China will double the size of its nuclear weapons in next decade.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X