• search
  • Live TV
ವಾಷಿಂಗ್ಟನ್ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭಾರತದ ಅನುಮತಿ ಇಲ್ಲದೆ ನೌಕಾಪಡೆ ನಡೆಸಿದ ಕಾರ್ಯಾಚರಣೆಗೆ ಅಮೆರಿಕ ಸಮರ್ಥನೆ

|

ವಾಷಿಂಗ್ಟನ್, ಏಪ್ರಿಲ್ 10: ಭಾರತದ ಅನುಮತಿ ಇಲ್ಲದೆ ಅಮೆರಿಕದ ನೌಕಾಪಡೆ ನಡೆಸಿದ್ದ ಕಾರ್ಯಚರಣೆಯನ್ನು ಅಮೆರಿಕ ಸಮರ್ಥಿಸಿಕೊಂಡಿದೆ.

ಯುಎಸ್ಎಸ್ ಜಾನ್ ಪೌಲ್ ಜಾನ್ಸ್ ನೇವಿ ಡೆಸ್ಟ್ರಾಯರ್ ಮಾಲ್ಡೀವ್ಸ್ ನ ಸುತ್ತಮುತ್ತಲಿನ ಪ್ರದೇಶದಲ್ಲಿ ಯಾವುದೇ ನಿಯಮ ಉಲ್ಲಂಘನೆ ಮಾಡದೇ ಕಾರ್ಯಾಚರಣೆ ನಡೆಸಿದೆ ಎಂದು ಪೆಂಟಗನ್ ನ ವಕ್ತಾರ ಜಾನ್ ಕಿರ್ಬಿ ಹೇಳಿದ್ದಾರೆ.ಇದು ಅಂತಾರಾಷ್ಟ್ರೀಯ ಕಾನೂನಿನ ವ್ಯಾಪ್ತಿಯಲ್ಲೇ ಇದ್ದು, ಉಲ್ಲಂಘನೆಯಾಗಿಲ್ಲ ಎಂದು ಪೆಂಟಗನ್ ಸಮರ್ಥಿಸಿಕೊಂಡಿದೆ.

ಭಾರತದ ಅನುಮತಿ ಇಲ್ಲದೆ ಇಇಝೆಡ್‌ನಲ್ಲಿ ಸಮರಾಭ್ಯಾಸ ನಡೆಸಿದ ಅಮೆರಿಕ ನೌಕಾಪಡೆಭಾರತದ ಅನುಮತಿ ಇಲ್ಲದೆ ಇಇಝೆಡ್‌ನಲ್ಲಿ ಸಮರಾಭ್ಯಾಸ ನಡೆಸಿದ ಅಮೆರಿಕ ನೌಕಾಪಡೆ

ಅಮೆರಿಕ ನೌಕಾಪಡೆಯು ಭಾರತಕ್ಕೆ ಯಾವುದೇ ಮಾಹಿತಿ ನೀಡದೆ ಭಾರತೀಯ ವಿಶೇಷ ಆರ್ಥಿಕ ವಲಯ (ಇಇಝೆಡ್)ದ ಒಳಗೆ 'ನ್ಯಾವಿಗೇಷನ್ ಆಪರೇಷನ್(ಸ್ವತಂತ್ರ ಕಾರ್ಯಾಚರಣೆ)' ನಡೆಸಿದ್ದನ್ನು ಅಮೆರಿಕ ಸಮರ್ಥಿಸಿಕೊಂಡಿದೆ.

ನ್ಯಾವಿಗೇಷನ್ ಆಪರೇಷನ್ ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆಯಲ್ಲ ಎಂದು ಅಮೆರಿಕ ಸಮರ್ಥಿಸಿಕೊಂಡಿದೆ. ಇತ್ತ ಭಾರತ ಅಮೆರಿಕಾದೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಿದ್ದು ತೀವ್ರ ಕಳವಳ ವ್ಯಕ್ತಪಡಿಸಿದೆ.

ಏಪ್ರಿಲ್ 7ರಂದು ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ನೌಕೆಯು ಅಂತಾರಾಷ್ಟ್ರೀಯ ಕಾನೂನಿನಂತೆ ಭಾರತದ ಪೂರ್ವ ಸಮ್ಮತಿಗೆ ಕೋರದೆಯೇ ಭಾರತದ ಇಇಝೆಡ್ ಒಳಗಿನ ಲಕ್ಷದ್ವೀಪದ ಪಶ್ಚಿಮದ 130 ಮೈಲು ದೂರದಲ್ಲಿ ಸ್ವತಂತ್ರ ಕಾರ್ಯಾಚರಣೆ ನಡೆಸಿದೆ ಎಂದು ಅಮೆರಿಕದ 7 ಫ್ಲೀಟ್ ಪಬ್ಲಿಕ್ ಅಫೇರ್ಸ್ ಅಧಿಕೃತವಾಗಿ ಒಪ್ಪಿಕೊಂಡಿದೆ.

ಭಾರತದ ಕಡಲ ಭದ್ರತಾ ನೀತಿಯನ್ನು ಅಮೆರಿಕದ ನೌಕಾಪಡೆಯ 7 ನೇ ಫ್ಲೀಟ್ ಉಲ್ಲಂಘಿಸಿದ್ದು, ಸ್ವತಂತ್ರ ಸಂಚಾರ ಕಾರ್ಯಾಚರಣೆಯ ಅನುಮತಿಯನ್ನೂ ಪಡೆಯದಿರುವುದು ವಿವಾದ ಸೃಷ್ಟಿಸಿದೆ.

ತನ್ನ ಈ ನಡೆಯನ್ನು ಸಮರ್ಥಿಸಿಕೊಂಡಿರುವ ಅಮೆರಿಕ ನೌಕಾಪಡೆ, ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿಯೇ ಯುಎಸ್ಎಸ್ ಜಾನ್ ಪಾಲ್ ಜೋನ್ಸ್ ಲಕ್ಷದ್ವೀಪದಲ್ಲಿ ಸಂಚರಿಸಿದೆ.

English summary
The Pentagon has defended its Navy asserting its navigational rights within India's exclusive economic zone without taking New Delhi's permission, calling the move "consistent with international law
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X